Advertisement
ಪುರಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಸೆ. 4ರಂದು ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯ ಬಿ.ದೇವದಾಸ ಶೆಟ್ಟಿ ಮಾತನಾಡಿ, “ಸಚಿವರೊಬ್ಬರ ಹೆಸರಲ್ಲಿ ಇರುವ ಜಮೀನಿನಲ್ಲಿ ನಿರ್ಮಿಸಿದ ಕಟ್ಟಡ ಅಕ್ರಮ ವಾಗಿದೆ. ಇದಕ್ಕೆ ಸಿಂಗಲ್ ತೆರಿಗೆ ಅನ್ವಯ ಮಾಡಲಾಗಿದೆ. ಆದರೆ ಜನಸಾಮಾನ್ಯರ ಇದೇ ರೀತಿಯ ಕಟ್ಟಡಗಳಿಗೆ ಡಬ್ಬಲ್ ತೆರಿಗೆ ಹಾಕಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು. ಈ ಕುರಿತಾದ ಚರ್ಚೆಯಲ್ಲಿ ಹಲವು ಸದಸ್ಯರು ಪಾಲ್ಗೊಂಡರು.
ಸದಸ್ಯ ಎ. ಗೋವಿಂದ ಪ್ರಭು ಮಾತನಾಡಿ ಒಂದು ಕಟ್ಟಡಕ್ಕೆ ಡಬ್ಬಲ್ ತೆರಿಗೆ, ಇನ್ನೊಂದಕ್ಕೆ ಸಿಂಗಲ್ ತೆರಿಗೆ ಇದೆಂತಹ ನೀತಿ. ಅದರಲ್ಲಿ ಜಮೀನು ಅತಿ ಕ್ರಮಣ ಆಗಿದೆ. ಕಟ್ಟಡ ನಂಬರ್ ಇಲ್ಲದೆ ರಾಷ್ಟ್ರಮಟ್ಟದ ಬ್ಯಾಂಕ್, ಎಟಿಎಂನಂತಹ ಕಚೇರಿಗಳು ಬಂದಿರುವುದು ಹೇಗೆ. ಇದರ ಹಿಂದೆ ಏನು ಮಸಲತ್ತು ನಡೆದಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬುಡಾ ಅಧ್ಯಕ್ಷ ಸದಾಶಿವ ಬಂಗೇರ ನೀವೇನು ಸಾಚಾಗಳ. ನಿಮ್ಮ ಬಿಜೆಪಿ ಆಡಳಿತ ಇದ್ದಾಗ ಯಾವ ಯಾವ ಕಟ್ಟಡಗಳಿಗೆ ಅನುಮತಿ ನೀಡಿದೆ. ಆದೆಷ್ಟು ಸಕ್ರಮ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಪ್ರತಿಕ್ರಿಯಿಸಿದರು.
Related Articles
Advertisement
ಅಕ್ರಮ ಕಟ್ಟಡಗಳ ಪಟ್ಟಿ ಮೇಲ್ನೋಟಕ್ಕೆ ಇಲ್ಲಿನ ಕ್ರಮ ತಪ್ಪಾಗಿರುವಂತೆ ಕಂಡು ಬರುವಂತಿದೆ. ಅಂತಿಮವಾಗಿ ಎಲ್ಲ ಅಕ್ರಮ ಕಟ್ಟಡಗಳ ಪಟ್ಟಿಯನ್ನು ಮಾಡಿ ಅದರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅಧ್ಯಕ್ಷರ ಸೂಚನೆಯಂತೆ ಮುಖ್ಯಾಧಿಕಾರಿ ಪ್ರಕಟಿ ಸಿದರು. ಕಸ ವಿಲೇವಾರಿ ಮಾಡುವ ಗುತ್ತಿಗೆದಾರನಿಗೆ ಬಿಲ್ ನೀಡಬಾರದು ಎಂದು ನಿರ್ಣಯ ಆಗಿದ್ದರೂ ಅದನ್ನು ಪಾವತಿ ನೀಡಿದ್ದೀರಿ. ಗುತ್ತಿಗೆ ಕಾರ್ಮಿಕರಿಗೆ ಪಿಎಫ್‌ಐ, ಇಎಸ್‌ಐ ಮಾಡಿದ್ದಾಗಿ ಗುತ್ತಿಗೆದಾರ ಹೇಳಿದ್ದಾನೆ ಎನ್ನುತ್ತೀರಿ. ಅದಕ್ಕೆ ಸಂಬಂಧ ಪಟ್ಟ ದಾಖಲೆ ಪುರಸಭೆಯಲ್ಲಿ ಇಲ್ಲ. ಹಾಗಾಗಿ ಅದನ್ನು ನಂಬುವುದು ಹೇಗೆ ಎಂದು ದೇವದಾಸ ಶೆಟ್ಟಿ ಅವರು ಪ್ರಶ್ನಿಸಿದರು. ಪ.ಜಾತಿ, ಪಂಗಡ, ಪ.ಜಾತಿ ವಿಭಾಗದವರಿಗೆ ವಿವಿಧ ಉದ್ದೇಶಗಳಿಗೆ ನೀಡುವ ಸಾಲಕ್ಕೆ ಈಗಾಗಲೇ 29 ಅರ್ಜಿಗಳು ಬಂದಿವೆ. ಹದಿನೆಂಟು ಮಂದಿಗೆ ಮಾತ್ರ ಅದರಲ್ಲಿ ಅವಕಾಶವಿದ್ದು ಸಭೆಯು ಮುಂದಿನ ನಿರ್ಣಯ ಮಾಡುವಂತೆ ಪ್ರಸ್ತಾವವಾಯಿತು. ಸಭೆಯಲ್ಲಿ ವಾಸು ಪೂಜಾರಿ, ಗಂಗಾಧರ, ವಸಂತಿ ಚಂದಪ್ಪ, ಯಾಸ್ಮಿàನ್, ಚಂಚಲಾಕ್ಷಿ, ಸಂಜೀವಿ, ಜಗದೀಶ ಕುಂದರ್, ಪ್ರಭಾ ಆರ್. ಸಾಲಿಯಾನ್, ಸುಗುಣಾ ಕಿಣಿ, ಭಾಸ್ಕರ ಟೈಲರ್, ಸಂಧ್ಯಾ ಬಿ. ಮೋಹನ್, ಜಸಿಂತಾ ಡಿಸೋಜಾ, ಮುನಿಶ್ ಅಲಿ, ಮಮ್ತಾಜ್ ಮೊದಲಾದವರು ವಿವಿಧ ಸಮಸ್ಯೆಗಳನ್ನು ಪ್ರಸ್ತಾವಿಸಿದರು. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಸ್ವಾಗತಿಸಿ, ವಂದಿಸಿದರು. ಹಣ ವರ್ಗಾವಣೆ
ಗೂಡಿನ ಬಳಿ ವಾರ್ಡಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಿಟ್ಟ ಹಣವನ್ನು ನನ್ನ ಗಮನಕ್ಕೂ ಬಾರದಂತೆ ವರ್ಗಾಯಿಸಲಾಗಿದೆ. ಇದು ಹೇಗೆ ಸಾಧ್ಯವಾಯಿತು. ನನಗೆ ಬಂದ ಪತ್ರದ ಯಥಾ ಪ್ರತಿ ಇದ್ದು ಇದರ ಕುರಿತು ಕ್ರಮ ಆಗಬೇಕು ಎಂದು ಸದಸ್ಯ ಮಹಮ್ಮದ್ ಇಕ್ಬಾಲ್ ಸಭೆಯಲ್ಲಿ ಪ್ರಸ್ತಾವಿಸಿದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷರು ಮತ್ತು ಸದ್ರಿ ಸದಸ್ಯರ ಜತೆ ಮಾತಿನ ಚಕಮಕಿ ನಡೆಯಿತು. ಟೆಂಡರ್ ಹಾಕಿಲ್ಲ
ಕಸ ವಿಲೇವಾರಿ ಗುತ್ತಿಗೆಯ ಬಗ್ಗೆ ಮೂರು ಸಲ ಟೆಂಡರ್ ಕರೆದಿದ್ದರೂ ಯಾರೊಬ್ಬರು ಟೆಂಡರ್ ಹಾಕಿಲ್ಲ. ಹಾಗಾಗಿ ಹಿಂದಿನ ಗುತ್ತಿಗೆಯವರಿಗೇ ಟೆಂಡರ್ ಇಲ್ಲದೆಯೇ ಗುತ್ತಿಗೆ ಮುಂದುವರಿಸಲಾಗಿದೆ. ಮುಂದಿನ ಹಂತದಲ್ಲಿ ಹೊರಗುತ್ತಿಗೆ ಕಾರ್ಮಿಕರನ್ನು ಪುರಸಭೆಯ ಸಿಬಂದಿ ನೆಲೆಯಲ್ಲಿ ಸ್ವೀಕರಿಸಲು ಕಾನೂನು ಆಗುತ್ತಿದೆ.
– ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ.