Advertisement

ಕೆಕೆಆರ್‌ ನಾಯಕತ್ವಕ್ಕೆ ಸಿದ್ಧ: ರಾಬಿನ್‌ ಉತ್ತಪ್ಪ

06:15 AM Feb 08, 2018 | Team Udayavani |

ಕೋಲ್ಕತಾ: ಅಗತ್ಯ ಬಿದ್ದರೆ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡದ ನಾಯಕತ್ವ ವಹಿಸಿಕೊಳ್ಳಲು ತಾನು ಸಿದ್ಧ ಎಂಬುದಾಗಿ ಕೀಪರ್‌ ಕಂ ಓಪನರ್‌ ರಾಬಿನ್‌ ಉತ್ತಪ್ಪ ಹೇಳಿದ್ದಾರೆ.

Advertisement

ಕಳೆದ ಋತುವಿನ ತನಕ ಕೆಕೆಆರ್‌ ನಾಯಕರಾಗಿದ್ದ ಎಡಗೈ ಆರಂಭಕಾರ ಗೌತಮ್‌ ಗಂಭೀರ್‌ ಈ ಬಾರಿ ಡೆಲ್ಲಿ ಡೇರ್‌ಡೆವಿಲ್ಸ್‌ ಪಾಲಾಗಿದ್ದಾರೆ. ಹೀಗಾಗಿ 32ರ ಹರೆಯದ ರಾಬಿನ್‌ ಉತ್ತಪ್ಪ ಕೆಕೆಆರ್‌ ತಂಡದ ನಾಯಕರಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಐಪಿಎಲ್‌ ಚಾವಡಿಯಲ್ಲಿ ಹರಿದಾಡುತ್ತಿದೆ. ಈ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಉತ್ತಪ್ಪ, “ಕೆಕೆಆರ್‌ ತಂಡವನ್ನು ಮುನ್ನಡೆಸಲು ನಾನು ಸಿದ್ಧ. ಇದೊಂದು ದೊಡ್ಡ ಗೌರವ. ಆದರೆ ಇದು ಫ್ರಾಂಚೈಸಿಯ ನಿರ್ಧಾರಕ್ಕೆ ಬಿಟ್ಟದ್ದು. ತಂಡಕ್ಕಾಗಿ ಅವರು ಯಾವ ಜವಾಬ್ದಾರಿ ವಹಿಸುತ್ತಾರೋ ಅದನ್ನು ನಿಭಾಯಿಸಲು ನಾನು ತಯಾರಿದ್ದೇನೆ. ಶೇ. 110ರಷ್ಟು ಪರಿಶ್ರಮ ಹಾಕಲಿದ್ದೇನೆ…’ ಎಂದರು.

ಕರ್ನಾಟಕದ ಮಾಜಿ ಆಟಗಾರನಾಗಿರುವ ರಾಬಿನ್‌ ಉತ್ತಪ್ಪ ಅವರನ್ನು ಈ ಬಾರಿಯ ಐಪಿಎಲ್‌ ಹರಾಜಿನ ವೇಳೆ ಕೆಕೆಆರ್‌ ಆರ್‌ಟಿಎಂ ಮೂಲಕ 6.4 ಕೋ.ರೂ.ಗೆ ಮರಳಿ ತಂಡಕ್ಕೆ ಸೇರಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next