Advertisement

ಏರ್‌ ಇಂಡಿಯಾ ಮುಖ್ಯಸ್ಥರ ಹುದ್ದೆಯಿಂದ ಹಿಂದೆ ಸರಿದ ಇಲ್ಕರ್‌

10:47 PM Mar 01, 2022 | Team Udayavani |

ನವದೆಹಲಿ: ಏರ್‌ ಇಂಡಿಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕಗೊಂಡಿರುವ ಟರ್ಕಿ ಏರ್‌ಲೈನ್ಸ್‌ ಮುಖ್ಯಸ್ಥ ಇಲ್ಕರ್‌ ಐಸಿಯವರು ನೇಮಕಾತಿಯಿಂದ ಹಿಂದೆ ಸರಿದಿದ್ದಾರೆ.

Advertisement

ನನ್ನ ನೇಮಕಾತಿಯ ವಿಚಾರವಾಗಿ ಭಾರತದ ಕೆಲವು ನಿರ್ದಿಷ್ಟ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ವರದಿಗಳು ಹರಿದಾಡುತ್ತಿವೆ. ಅದನ್ನು ನಾನು ಕೂಲಂಕಷವಾಗಿ ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ, ಏರ್‌ ಇಂಡಿಯಾದ ಮಾಲೀಕತ್ವ ಹೊಂದಿರುವ ಟಾಟಾ ಸಂಸ್ಥೆಯು ನೀಡಿರುವ ಉದ್ಯೋಗ ನೇಮಕಾತಿಯ ಆಫ‌ರನ್ನು ನಾನು ತಿರಸ್ಕರಿಸುತ್ತಿದ್ದೇನೆ ಎಂದು ಇಲ್ಕರ್‌ ಹೇಳಿದ್ದಾರೆ.

ಇದನ್ನೂ ಓದಿ:ಇನ್ನಷ್ಟು ಕಾಂಗ್ರೆಸ್‌ ಜೆಡಿಎಸ್‌ ಮುಖಂಡರು ಬಿಜೆಪಿಗೆ : ಸಿಎಂ ಬೊಮ್ಮಾಯಿ

ಇತ್ತೀಚೆಗೆ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್‌) ಸಹಯೋಗಿ ಸಂಸ್ಥೆಯಾದ ಸ್ವದೇಶಿ ಜಾಗರಣ್‌ ಮಂಚ್‌, ಇಲ್ಕರ್‌ ನೇಮಕಾತಿಯ ಬಗ್ಗೆ ಅಪಸ್ವರ ಹಾಡಿತ್ತು. “ಇಲ್ಕರ್‌ ನೇಮಕಾತಿಗೆ ಕೇಂದ್ರ ಸರ್ಕಾರ ಅವಕಾಶ ಕೊಡಬಾರದು. ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿಗೆ ತಡೆಯೊಡ್ಡಬೇಕು” ಎಂದು ಆಗ್ರಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next