Advertisement

ಮೊದಲ ಬಾರಿಗೆ ಕಾಶಿ ದೇಗುಲದೊಳಗೆ ಇಳಯರಾಜ ಸಂಗೀತ ರಸದೌತಣ

10:39 PM Dec 16, 2022 | Team Udayavani |

ಚೆನ್ನೈ: ಉತ್ತರಪ್ರದೇಶದ ವಾರಾಣಸಿಯಲ್ಲಿ ನಡೆಯುತ್ತಿರುವ “ಕಾಶಿ-ತಮಿಳ್‌ ಸಂಗಮಮ್‌’ನಲ್ಲಿ ಸಂಗೀತ ಮಾಂತ್ರಿಕ ಇಳಯರಾಜ ಅವರು ಗುರುವಾರ ಮತ್ತೆ ಸಂಗೀತದ ರಸದೌತಣ ನೀಡಿದ್ದಾರೆ.

Advertisement

ವಿಶೇಷವೆಂದರೆ, ಕಾಶಿ ವಿಶ್ವನಾಥನ ದೇಗುಲದ ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯದ ಆವರಣದೊಳಗೆ ಮಹಾದೇವನ ಮುಂದೆಯೇ ಇಳಯರಾಜ ಅವರು ಹಾಡಿದ್ದಾರೆ.

ವಿಶ್ವನಾಥನ ಸನ್ನಿಧಿಯಲ್ಲಿ ಭಾವಪರವಶರಾದ ಇಳಯರಾಜ ಅವರು, “ಇದು ನನ್ನ ಬದುಕಿನಲ್ಲೇ ಅತ್ಯಂತ ಶ್ರೇಷ್ಠ ಕ್ಷಣ. ಮಹಾದೇವನ ಮುಂದೆ ನಾನು ಖಾಲಿ ಕೈಯ್ಯಲ್ಲಿ ನಿಂತಿದ್ದೇನೆ. ಈ ನೆಲದಲ್ಲಿ ನಿಲ್ಲುವುದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ’ ಎಂದು ಉದ್ಗರಿಸಿದ್ದಾರೆ.

ತಮಿಳು ಮಾತ್ರವಲ್ಲದೇ, ಕನ್ನಡ, ಮಲಯಾಳಂ, ತೆಲುಗು, ಮರಾಠಿ ಹಾಗೂ ಹಿಂದಿ ಭಾಷೆಯ ಭಕ್ತಿಗೀತೆಗಳನ್ನೂ ಅವರು ಹಾಡಿರುವುದಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಟ್ವೀಟ್‌ ಮಾಡಿದ್ದಾರೆ.

Advertisement

ಇದೇ ವೇಳೆ, ಶುಕ್ರವಾರ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿದ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, “ಕಾಶಿ-ತಮಿಳು ಸಂಗಮಮ್‌ ಆಯೋಜನೆ ಮೂಲಕ ಪ್ರಧಾನಿ ಮೋದಿಯವರು ಭಾರತದ ಸಾಂಸ್ಕೃತಿಕ ಏಕತೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದ್ದಾರೆ. ಈ ಕಾರ್ಯಕ್ರಮವು ದೇಶದ ಸಂಸ್ಕೃತಿಯ ಎರಡು ಶಿಖರಗಳ ನಡುವಿನ ಸೇತುವಾಗಿ ಕೆಲಸ ಮಾಡಿತು’ ಎಂದು ಹೇಳಿದ್ದಾರೆ.

4 ವಾರಗಳ ಹಿಂದೆ ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ವೇಳೆಯೂ ಇಳಯರಾಜ ಅವರು ಸಂಗೀತ ಕಾರ್ಯಕ್ರಮ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next