ನವದೆಹಲಿ: ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಮರೆಗುಳಿ ಕಾಯಿಲೆಯ (ಅಲ್‌ಝೈಮರ್) ಮೂಲ ಕಾರಣವನ್ನು ಪತ್ತೆ ಹಚ್ಚುವಲ್ಲಿ ಮಧ್ಯಪ್ರದೇಶದ ಮಂಡಿ ಐಐಟಿಯ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಜೀವಕಣಗಳಲ್ಲಿರುವ ಅಮಿಲೋಯ್ಡ ಪ್ರಕ್ಯೂಸರ್ ಪ್ರೋಟೀನ್‌ನ (ಎಪಿಪಿ) ಸಿಗ್ನಲ್ ಪೆಪ್ಟೈಡ್ಎಂಬ ಪ್ರೊಟೀನ್ ಕಣಗಳು, ಅಮಿಲೋಯ್ಡ ಬಿಟಾ ಪೆಪ್ಟೈಡ್ (Aß42) ಪ್ರೊಟೀನ್ ಕಣಗಳ ಜೊತೆಗೆ, ಜೀವಾಂಶಗಳೊಳಗೆ ಒಂದು ಜಾಗದಲ್ಲಿ ಕೂಡಿಕೊಂಡಾಗ ಮರೆಗುಳಿ ಕಾಯಿಲೆ ಶುರುವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಅಸಲಿಗೆ, ಜೀವಕಣಗಳ ಸಕಲ ಕಾರ್ಯ ಚಟುವಟಿಕೆಗಳಿಗೆ ಈ ಎರಡೂ ಪ್ರೋಟೀನ್‌ಗಳು ಕಾರಣ. ಆದರೆ, ಇವು ಜೀವಕಣಗಳಲ್ಲಿ ಒಂದೇ ಜಾಗದಲ್ಲಿ ಒಗ್ಗೂಡುತ್ತಾ ಸಾಗಿದರೆ ಅದು ಜೀವಕಣಗಳ ಕಾರ್ಯಚಟುವಟಿಕೆಗಳಿಗೆ ತೊಡಕುಂಟು ಮಾಡುತ್ತದೆ.
ಇದನ್ನೂ ಓದಿ:ಕಲಾವಿದರ ಮಾಸಾಶನ ಹಣ ಶೀಘ್ರ ಬಿಡುಗಡೆಗೆ ಕ್ರಮ: ಸುನೀಲ್ ಕುಮಾರ್
ಆ ತೊಡಕುಗಳಿಂದ ಮನುಷ್ಯರ ಮೇಲೆ ಹಲವಾರು ದುಷ್ಪರಿಣಾಮಗಳು ಉಂಟಾಗುತ್ತದೆ. ಅವುಗಳಲ್ಲಿ ಮರೆಗುಳಿ ಕಾಯಿಲೆಯೂ ಒಂದು ಎಂಬ ತರ್ಕಕ್ಕೆ ಸಂಶೋಧಕರು ಬಂದಿದ್ದಾರೆ.