ಮುಂಬಯಿ: ಭಾರತೀಯ ತಂತ್ರಜ್ಞಾನ ಸಂಸ್ಥೆ-ಬಾಂಬೆ (IIT-B) ನ ಹಾಸ್ಟೆಲ್ ಒಂದರಲ್ಲಿನ ಕ್ಯಾಂಟೀನ್‌ನ ಗೋಡೆಗಳ ಮೇಲೆ “ಸಸ್ಯಾಹಾರಿಗಳಿಗೆ ಮಾತ್ರ” ಎಂಬ ಪೋಸ್ಟರ್‌ಗಳನ್ನು ಹಾಕಿದ ನಂತರಆಹಾರ ತಾರತಮ್ಯದ ವಿಷಯವನ್ನು ವಿದ್ಯಾರ್ಥಿಗಳು ಎತ್ತಿದ್ದಾರೆ ಎಂದು ವಿದ್ಯಾರ್ಥಿ ಪ್ರತಿನಿಧಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಕಳೆದ ವಾರ ಪ್ರತಿಷ್ಠಿತ ಸಂಸ್ಥೆಯ ಹಾಸ್ಟೆಲ್ 12 ರ ಕ್ಯಾಂಟೀನ್‌ನ ಗೋಡೆಗಳ ಮೇಲೆ “ಸಸ್ಯಾಹಾರಿಗಳಿಗೆ ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ” ಎಂಬ ಪೋಸ್ಟರ್‌ಗಳನ್ನು ಹಾಕಲಾಗಿತ್ತು ಮತ್ತು ಅದರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಪೋಸ್ಟರ್‌ಗಳನ್ನು ಯಾರು ಹಾಕಿದ್ದಾರೆ ಎಂಬುದು ನಮಗೆ ತಿಳಿದಿಲ್ಲ,ವಿವಿಧ ವರ್ಗದ ಆಹಾರ ಸೇವಿಸುವ ಜನರಿಗೆ ನಿಗದಿತ ಆಸನಗಳಿಲ್ಲಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿದ್ಯಾರ್ಥಿ ಸಮೂಹ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಪ್ರತಿನಿಧಿಗಳು ಘಟನೆಯನ್ನು ಖಂಡಿಸಿ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ.
“ಹಾಸ್ಟೆಲ್ ಮೆಸ್‌ನಲ್ಲಿ ಜೈನ ಆಹಾರ ವಿತರಣೆಗೆ ಕೌಂಟರ್ ಇದೆ, ಆದರೆ ಜೈನ ಆಹಾರವನ್ನು ಸೇವಿಸುವವರಿಗೆ ಗೊತ್ತುಪಡಿಸಿದ ಕುಳಿತುಕೊಳ್ಳುವ ಸ್ಥಳವಿಲ್ಲ.” ಎಂದು ಹಾಸ್ಟೆಲ್‌ನ ಪ್ರಧಾನ ಕಾರ್ಯದರ್ಶಿ ಎಲ್ಲಾ ವಿದ್ಯಾರ್ಥಿಗಳಿಗೆ ಇಮೇಲ್ ಕಳುಹಿಸಿದ್ದಾರೆ.