Advertisement

ಏಷ್ಯಾ ವಿವಿಗಳ ರ್‍ಯಾಂಕಿಂಗ್‌: ಐಐಎಸ್‌ಸಿಗೆ 36ನೇ ಸ್ಥಾನ

09:03 AM Jun 04, 2020 | mahesh |

ಹೊಸದಿಲ್ಲಿ: ಏಷ್ಯಾ ವಿವಿಗಳ ರ್‍ಯಾಂಕಿಂಗ್‌ ಪಟ್ಟಿ ಬುಧವಾರ ಬಿಡುಗಡೆಯಾಗಿದ್ದು, ಬೆಂಗಳೂರಿನ ಐಐಎಸ್‌ಸಿ 36ನೇ ರ್‍ಯಾಂಕ್‌ ಗಳಿಸುವ ಮೂಲಕ ಭಾರತದ ವಿವಿಗಳಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಇದೇ ವೇಳೆ ದೇಶದ ಆರು ಐಐಟಿಗಳು ಅಗ್ರ 100ರ ಪಟ್ಟಿಯಲ್ಲಿವೆ.

Advertisement

ಪ್ರಸಕ್ತ ವರ್ಷ ಒಟ್ಟು ಎಂಟು ಸಂಸ್ಥೆಗಳು ಅಗ್ರ 100ರ ಪಟ್ಟಿಯಲ್ಲಿದ್ದು, 2016ರ ಬಳಿಕ ಏಷ್ಯಾ ಮಟ್ಟದಲ್ಲಿ ಭಾರತದ ವಿಶ್ವವಿದ್ಯಾಲಯಗಳು ನೀಡಿರುವ ಉತ್ತಮ ಪ್ರದರ್ಶನ ಇದಾಗಿದೆ. ಬೆಂಗಳೂರಿನ ಐಐಎಸ್‌ಸಿ ಸತತ ಐದನೇ ವರ್ಷ ಭಾರತದ ಶಿಕ್ಷಣ ಸಂಸ್ಥೆಗಳ ಪೈಕಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದರೂ 2019ಕ್ಕೆ ಹೋಲಿಸಿದರೆ ಏಳು ಸ್ಥಾನಗಳ ಕುಸಿತ ಕಂಡಿದೆ. ಐಐಟಿಗಳ ಪ್ರದರ್ಶನ ಕೂಡ ಮಂಕಾಗಿದೆ. ರೂಪರ್‌ (47), ಖಾನ್ಪುರ (59), ಇಂದೋರ್‌ (55), ದಿಲ್ಲಿ (65), ಮುಂಬಯಿ (69), ರೂರ್ಕಿ (83) ಐಐಟಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ದಿಲ್ಲಿ ಮತ್ತು ಖಾನ್ಪುರ ಐಐಟಿಗಳ ಪ್ರದರ್ಶನ 2019ಕ್ಕಿಂತಲೂ ಉತ್ತಮವಾಗಿದೆ.

ಉಳಿದಂತೆ ಅಗ್ರ ಹತ್ತು ಸ್ಥಾನಗಳನ್ನು ಚೀನ, ಸಿಂಗಾಪುರ, ಹಾಂಗ್‌ಕಾಂಗ್‌, ಜಪಾನ್‌ ಮತ್ತು ದಕ್ಷಿಣ ಕೊರಿಯಾದ ವಿವಿಗಳು ಅಲಂಕರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next