Advertisement

‌IIFA 2023: ಕಮಲ್‌ ಹಾಸನ್‌ ಸಾಧನೆಗೆ ʼಐಫಾʼ ಗೌರವ: ಇಲ್ಲಿದೆ ಅವಾರ್ಡ್‌ ಲಿಸ್ಟ್

10:38 AM May 28, 2023 | Team Udayavani |

ಅಬುಧಾಬಿ: ಬಾಲಿವುಡ್‌ ಹಾಗೂ ಸಿನಿರಂಗದ ದೊಡ್ಡ ಮನರಂಜನೆ ರಾತ್ರಿ ಐಫಾ ಅವಾರ್ಡ್‌ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

Advertisement

ಬಾಲಿವುಡ್‌ ನ ಟೈಗರ್‌ ಸಲ್ಮಾನ್‌ ಖಾನ್‌, ವಿಕ್ಕಿ ಕೌಶಲ್‌, ಕಮಲ್‌ ಹಾಸನ್‌, ವರುಣ್‌ ಧವನ್‌, ರಾಕುಲ್‌ ಪ್ರೀತ್‌, ನೋರಾ ಫತೇಹಿ, ಕೃತಿ ಸನೋನ್‌‌, ಜಾಕ್ವೆಲಿನ್ ಫರ್ನಾಂಡೀಸ್‌, ಇಶಾ ಗುಪ್ತಾ.. ಸೇರಿದಂತೆ ಅನೇಕ ಸೆಲೆಬ್ರಿಟಿಗಳು ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿ, ಬಿಗೆಸ್ಟ್‌ ಬಾಲಿವುಡ್‌ ನೈಟ್‌ ಗೆ ಸಾಕ್ಷಿಯಾಗಿದ್ದಾರೆ.

ಅಭಿಷೇಕ್ ಬಚ್ಚನ್ ಮತ್ತು ವಿಕ್ಕಿ ಕೌಶಲ್ ಅವರ ನಿರೂಪಣೆ ನೋಡುಗರನ್ನು ರಂಜಿಸಿದೆ. ಸೆಲೆಬ್ರಿಟಿಗಳ  ಕಲರ್‌ ಫುಲ್‌ ಪರ್ಫಾರ್ಮೆನ್ಸ್ ಮನರಂಜನೆ ರಾತ್ರಿಗೆ ಸಾಕ್ಷಿಯಾಯಿತು.

23ನೇ ಐಫಾದಲ್ಲಿ ಪ್ರಶಸ್ತಿ ಪಡೆದುಕೊಂಡವರ ವಿವರ:

ಅತ್ಯುತ್ತಮ ಚಿತ್ರ :– ದೃಶ್ಯಂ 2

Advertisement

ಅತ್ಯುತ್ತಮ ನಿರ್ದೇಶಕ :– ಆರ್. ಮಾಧವನ್ (ರಾಕೆಟ್ರಿ: ದಿ ನಂಬಿ ಎಫೆಕ್ಟ್)

ಲೀಡಿಂಗ್‌ ರೋಲ್: ಅತ್ಯುತ್ತಮ ನಟಿ (ಮಹಿಳೆ) : – ʼಗಂಗೂಬಾಯಿ ಕಥಿಯಾವಾಡಿʼ (ಆಲಿಯಾ ಭಟ್)‌

ಲೀಡಿಂಗ್‌ ರೋಲ್: ಅತ್ಯುತ್ತಮ ನಟ (ಪುರುಷ) :-ʼವಿಕ್ರಮ್ ವೇದಾʼ (ಹೃತಿಕ್ ರೋಷನ್)

ಪೋಷಕ ಪಾತ್ರ: ಅತ್ಯುತ್ತಮ ನಟಿ :– ʼಬ್ರಹ್ಮಾಸ್ತ್ರʼ: ಭಾಗ ಒಂದು – ಶಿವ (ಮೌನಿ ರಾಯ್)

ಪೋಷಕ ಪಾತ್ರ: ಅತ್ಯುತ್ತಮ ನಟ :– ಅನಿಲ್ ಕಪೂರ್ (ಜುಗ್‌ ಜುಗ್ ಜೀಯೋ)

ಸಿನಿಮಾದಲ್ಲಿ ಫ್ಯಾಷನ್‌ಗಾಗಿ ಅತ್ಯುತ್ತಮ ಸಾಧನೆ (Outstanding Achievement for Fashion in Cinema) :-  ಮನೀಶ್ ಮಲ್ಹೋತ್ರಾ

ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ:- ಕಮಲ್ ಹಾಸನ್

ಅತ್ಯುತ್ತಮ ಅಳವಡಿಕೆ ಕಥೆ (Best Adapted Story) :-  ಆಮಿಲ್ ಕೀಯಾನ್ ಖಾನ್ ಮತ್ತು ಅಭಿಷೇಕ್ ಪಾಠಕ್  (ದೃಶ್ಯಂ 2 )

ಅತ್ಯುತ್ತಮ ಮೂಲ ಕಥೆ:- ಪರ್ವೀಜ್ ಶೇಖ್ ಮತ್ತು ಜಸ್ಮೀತ್ ರೀನ್ (ಡಾರ್ಲಿಂಗ್ಸ್‌ )

ಪ್ರಾದೇಶಿಕ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆ: ರಿತೇಶ್ ದೇಶಮುಖ್(ನಿರ್ದೇಶನ)  ವೇದ್ (ಮರಾಠಿ)

ಅತ್ಯುತ್ತಮ ಪದಾರ್ಪಣೆ ನಟ (ಪುರುಷ):- ಶಾಂತನು ಮಹೇಶ್ವರಿ (ʼಗಂಗೂಬಾಯಿ ಕಥಿಯಾವಾಡಿʼ) ಬಾಬಿಲ್ ಖಾನ್ – (ಕ್ವಾಲಾ)

ಅತ್ಯುತ್ತಮ ಪದಾರ್ಪಣೆ ನಟಿ (ಮಹಿಳೆ) :- ಖುಶಾಲಿ ಕುಮಾರ್ (ʼಧೋಕಾ ಅರೌಂಡ್ ದಿ ಕಾರ್ನರ್‌ʼ)

ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ):- ಬ್ರಹ್ಮಾಸ್ತ್ರ: ಭಾಗ 1 – ಶಿವ – ʼರಾಸಿಯಾʼ (ಶ್ರೇಯಾ ಘೋಷಾಲ್)

ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ):- ʼಬ್ರಹ್ಮಾಸ್ತ್ರʼ ಭಾಗ 1 – ಶಿವ – ʼಕೇಸರಿಯಾʼ (ಅರಿಜಿತ್ ಸಿಂಗ್)

ಅತ್ಯುತ್ತಮ ಸಂಗೀತ ನಿರ್ದೇಶನ:- ಪ್ರೀತಮ್ (ಬ್ರಹ್ಮಾಸ್ತ್ರ ಭಾಗ ಒಂದು: ಶಿವ)

ಅತ್ಯುತ್ತಮ ಸಾಹಿತ್ಯ:- ಅಮಿತಾಭ್ ಭಟ್ಟಾಚಾರ್ಯ (ಕೇಸರಿಯಾ- ಬ್ರಹ್ಮಾಸ್ತ್ರ ಭಾಗ 1: ಶಿವ)

ಅತ್ಯುತ್ತಮ ಛಾಯಾಗ್ರಹಣ:- ʼಗಂಗೂಬಾಯಿ ಕಥಿಯಾವಾಡಿʼ

ಅತ್ಯುತ್ತಮ ಚಿತ್ರಕಥೆ:- ʼಗಂಗೂಬಾಯಿ ಕಥಿಯಾವಾಡಿʼ

ಅತ್ಯುತ್ತಮ ಸಂಭಾಷಣೆ:- ʼಗಂಗೂಬಾಯಿ ಕಥಿಯಾವಾಡಿʼ

ಶೀರ್ಷಿಕೆ ಗೀತೆಗಾಗಿ ಅತ್ಯುತ್ತಮ ನೃತ್ಯ ಸಂಯೋಜನೆ:- (Best Choreography for title track) :- ಭೂಲ್ ಭುಲೈಯಾ -2

ಅತ್ಯುತ್ತಮ ಧ್ವನಿ ವಿನ್ಯಾಸ:- ಭೂಲ್ ಭುಲೈಯಾ -2

ಅತ್ಯುತ್ತಮ ಸಂಕಲನ:- ದೃಶ್ಯಂ 2

ಅತ್ಯುತ್ತಮ ವಿಶೇಷ ಪರಿಣಾಮಗಳು (ದೃಶ್ಯ):- ಬ್ರಹ್ಮಾಸ್ತ್ರ: ಭಾಗ ಒಂದು – ಶಿವ

ಬೆಸ್ಟ್‌ ವಿಎಫ್‌ ಎಕ್ಸ್:‌ ಬ್ರಹ್ಮಾಸ್ತ್ರ ಭಾಗ ಒಂದು:- ಶಿವ

ಅತ್ಯುತ್ತಮ ಹಿನ್ನೆಲೆ ಸಂಗೀತ:- ವಿಕ್ರಮ್ ವೇದಾ

ಅತ್ಯುತ್ತಮ ಧ್ವನಿ ಮಿಶ್ರಣ:- ಮೋನಿಕಾ ಓ ಮೈ ಡಾರ್ಲಿಂಗ್

Advertisement

Udayavani is now on Telegram. Click here to join our channel and stay updated with the latest news.

Next