Advertisement
ಈ ವಲಯದ ಐಜಿಪಿ ಆಗಿದ್ದ ಅರುಣ್ ಜೆ. ಚಕ್ರವರ್ತಿ ಅವರನ್ನು ಎಡಿಜಿಪಿ ಹುದ್ದೆಗೆ ಭಡ್ತಿ ನೀಡಿ ವರ್ಗಾವಣೆಗೊಳಿಸಿ ಅವರಿಂದ ತೆರ ವಾದ ಸ್ಥಾನಕ್ಕೆ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಿ ಕಳೆದ ಜ. 31ರಂದು ಸರಕಾರ ಆದೇಶ ಹೊರಡಿಸಿತ್ತು. ಆದರೆ ಮರು ದಿನ (ಫೆ. 1) ಸರಕಾರ ತನ್ನ ಆದೇಶವನ್ನು ಪರಿಷ್ಕರಿಸಿ ಸೀಮಂತ್ ಕುಮಾರ್ ಸಿಂಗ್ ನೇಮಕಾತಿಯನ್ನು ರದ್ದು ಮಾಡಿ ಮರು ಆದೇಶ ಹೊರಡಿಸಿತ್ತು. ಈ ಮರು ಆದೇಶ ಹೊರಡಿಸುವಾಗ ಪಶ್ಚಿಮ ವಲಯದ ಐಜಿಪಿ ಹುದ್ದೆಗೆ ಪರ್ಯಾಯವಾಗಿ ಯಾರನ್ನೂ ಸರಕಾರ ನೇಮಕ ಮಾಡಿಲ್ಲ.
ವಹಿಸಿದ್ದರು. ಆದರೆ ಬುಧವಾರ (ಫೆ. 19) ಅವರು ಈ ಹುದ್ದೆಯಿಂದ ರಿಲೀವ್ ಆಗಿ ಐಜಿಪಿ ಹುದ್ದೆಯ ಪ್ರಭಾರವನ್ನು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರಿಗೆ ವಹಿಸಿ ಬೆಂಗಳೂರಿಗೆ ತೆರಳಿ ದ್ದಾರೆ. ಹಾಗಾಗಿ ಪ್ರಸ್ತುತ ಪಶ್ಚಿಮ ವಲಯದ ಐಜಿಪಿ ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಬೆಂಗಳೂರಿನಲ್ಲಿ ಐಜಿಪಿ ಆಗಿರುವ ಪ್ರವೀಣ್ ಮಧುಕರ್ ಅವರ ಹೆಸರು ಕೇಳಿ ಬರುತ್ತಿದ್ದರೂ ಅದಿನ್ನೂ ಅಂತಿಮಗೊಂಡಿಲ್ಲ.