ನವದೆಹಲಿ: ಕೋತಿಗಳು, ಸಿಂಗಳೀಕ ಮರದಿಂದ ಮರಕ್ಕೆ ಹಾರುವ ಸನ್ನಿವೇಶ ಸಾಮಾನ್ಯ, ಹುಲಿ, ಚಿರತೆ ಬೇಟೆಯಾಡುವ ವೇಳೆ ಮರ ಏರುವುದನ್ನು ಕಂಡಿದ್ದೇವೆ. ಆದರೆ ಎಂದಾದರು ಚಿರತೆ ಮರದಿಂದ, ಮರಕ್ಕೆ ಜಿಗಿಯುವುದನ್ನು ನೋಡಿದ್ದೀರಾ? ಒಂದು ವೇಳೆ ನೀವು ನೋಡಿಲ್ಲ ಎಂದಾದರೆ ಈ ವಿಡಿಯೋವನ್ನು ನೀವು ವೀಕ್ಷಿಸಲೇಬೇಕು.
ಇದನ್ನೂ ಓದಿ:Photoshop Artist: ಕಲಾವಿದನ ಕೈಚಳಕದಲ್ಲಿ ಗಂಡಸಾದ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ!
ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್ ಎಸ್) ಸುಸಂತ್ ನಂದಾ ಅವರು, ಒಂದು ಮರದಿಂದ ಇನ್ನೊಂದು ಮರಕ್ಕೆ ಚಿರತೆ ಹಾರಿ ಕೋತಿಯನ್ನು ಬೇಟೆಯಾಡುವ ವಿಡಿಯೋ ಕ್ಲಿಪ್ ಅನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
ಇದು ನಿಮಗೆ ಅತ್ಯಪರೂಪದ ದೃಶ್ಯಗಳಲ್ಲಿ ಒಂದಾಗಿದೆ ಎಂದು ಶೇರ್ ಮಾಡಿರುವ ವಿಡಿಯೋವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
ವಿಡಿಯೋದಲ್ಲಿ ಕೋತಿಗಳು ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವುದನ್ನು ಕಾಣಬಹುದಾಗಿದೆ. ದುರದೃಷ್ಟ ಎಂಬಂತೆ ನಂಬಲು ಅಸಾಧ್ಯವಾದರೂ ಚಿರತೆ ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತಿದ್ದ ಕೋತಿಯನ್ನು ಬೇಟೆಯಾಡಿರುವ ದೃಶ್ಯ ವಿಡಿಯೋದಲ್ಲಿದೆ.
ಚಿರತೆಗಳು ಕೇವಲ ಅವಕಾಶವಾದಿ ಮಾತ್ರವಲ್ಲ, ಆದರೆ ಅವು ಬಹುಮುಖ ಬೇಟೆಗಾರರಾಗಿವೆ ಎಂದು ಅರಣ್ಯಾಧಿಕಾರಿ ಸುಸಂತ್ ನಂದ ವಿಡಿಯೋಕ್ಕೆ ಕ್ಯಾಪ್ಶನ್ ನೀಡಿದ್ದಾರೆ.