Advertisement
ಬಾಲಿವುಡ್‌ನ ಶಹೆನ್‌ಷಾ ಬಿಗ್ ಬಿ ಅಮಿತಾಬ್ ಬಚ್ಚನ್ ಚಿತ್ರೋತ್ಸವವನ್ನುಉದ್ಘಾಟಿಸಿದರು. ಜತೆಗೆ ತಮ್ಮ ಗೆಳೆಯ ತಮಿಳು ಚಿತ್ರನಟ ರಜನೀಕಾಂತ್ [ಬಿಗ್ ಬಿ ಎಂದರೆ ಬಾಲಿವುಡ್‌ನಲ್ಲಿ ಬಿಗ್ ಎಂದರ್ಥ. ಬಿಗ್ ಟಿ ಎಂದರೆ ಕಾಲಿವುಡ್‌ನಲ್ಲಿ ಬಿಗ್ ಎಂದರ್ಥ. ಬಾಲಿವುಡ್ ಹಿಂದಿ ಚಿತ್ರರಂಗವಾದರೆ, ಕಾಲಿವುಡ್ ತಮಿಳು ಚಿತ್ರರಂಗ] ರಿಗೆ ಸುವರ್ಣ ಮಹೋತ್ಸವ ನೆನಪಿನ ಗೌರವ ನೀಡಿ ಅಭಿನಂದಿಸಿದರು.
Related Articles
Advertisement
ಕನ್ನಡ ಚಿತ್ರರಂಗ [ಸ್ಯಾಂಡಲ್‌ವುಡ್]ದ ಮೇರು ನಟ ಡಾ. ರಾಜಕುಮಾರ್ ಬಿಗ್ ಎಸ್ ಆಗಿ ಇದೇ ವೇದಿಕೆಯಲ್ಲಿ ಇವರೊಂದಿಗೆ ಇದ್ದಿದ್ದರೆ [ಅವರಿಗೆ ೯೦ ವರ್ಷವಾಗಿರುತ್ತಿತ್ತು. ಅತಿ ಹಿರಿಯ ನಟನೆಂಬ ಖ್ಯಾತಿಗೂ ಒಳಗಾಗಿರುತ್ತಿದ್ದರು]ಆ ದೃಶ್ಯವೇ ಬೇರಾಗುತ್ತಿತ್ತು.
ಈ ಮೂವರೂ ತಮ್ಮ ತಮ್ಮ ಚಿತ್ರರಂಗದಲ್ಲಿ ಗಳಿಸಿದ ಜನಪ್ರಿಯತೆ, ನಿರ್ಮಿಸಿದ ಜನಪ್ರಿಯತೆಯ ಅಲೆ ಅನನ್ಯ. ಕೆಲವು ವಿಷಯಗಳಲ್ಲಿ ನಡೆ ನುಡಿಯ ಮಧ್ಯೆ ಸಮನ್ವಯತೆಯನ್ನೂ ಇಟ್ಟುಕೊಂಡು ಬೆಳೆದವರು. ಪರಸ್ಪರ ಗೌರವ ತೋರುತ್ತಲೇ ಬಾಳಿದವರು. ಕೆಲವು ವಿವಾದದ ಸಂದರ್ಭದಲ್ಲೂ ತಮ್ಮಸಂಬಂಧಗಳನ್ನು ಗೋಜಲು ಮಾಡಿಕೊಳ್ಳದೇ ನಿರ್ವಹಿಸಿದವರು. ಈ ಮೂವರೂ ಒಂದೇ ವೇದಿಕೆಯಲ್ಲಿ, ಅದರಲ್ಲೂ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ. ಎಂಥಾ ದೃಶ್ಯವಾಗಿರುತ್ತಿತ್ತು.
ಈ ಮೂರೂ ಚಿತ್ರರಂಗದಲ್ಲಿ ಕಂಡುಬರುತ್ತಿರುವ ಕೊರತೆ ಈಗ ಒಂದೇ ಈ ಮೂರೂ ಬಿಗ್‌ಗಳ ನಂತರ ಹೊಸ ಬಿಗ್‌ಗಳೇ ತೋರುತ್ತಿಲ್ಲ !
ಇಲ್ಲಿ ಬಿಗ್ ಎಸ್ ಎಂದರೆ ಸ್ಯಾಂಡಲ್‌ವುಡ್‌ನ ಬಿಗ್ ಎಂದಷ್ಟೇ ಅಲ್ಲ. ಹಿರಿಯ ನಟನಾಗಿ ಭಾರತೀಯ ಚಿತ್ರರಂಗದ ಷಹೆನ್‌ಷಾ [ಅನಭಿಷಿಕ್ತ ಚಕ್ರವರ್ತಿ] ಆಗಿ ಕಂಗೊಳಿಸುತ್ತಿದ್ದರು ಡಾ. ರಾಜಕುಮಾರ್.