ನವ ದೆಹಲಿ : ಯೂರಿಯಾಗಳನ್ನು ನಾವು ಕೃಷಿಗಳಲ್ಲಿ ಬಳಸುತತ್ತೇವೆ. ಕೀಟನಾಶಕವಾಗಿ, ಬೆಳೆಗಳು ಸಮೃದ್ಧವಾಗಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಕೃಷಿ ಚಟುವಟಿಕೆಗಳಲ್ಲಿ ಯೂರಿಯಾಗಳನ್ನು ಬಳಸಲಾಗುತ್ತದೆ.
ಮಾರುಕಟ್ಟೆಗೆ ಈಗ ನ್ಯಾನೋ ಯೂರಿಯಾ ಬಂದಿದೆ ಎಂದರೇ ನಿಮಗೆ ಆಶ್ಚರ್ಯವಾಗಬಹುದು. ಆದರೇ ಇದು ಸತ್ಯ. ಕೃಷಿ ಚಟುವಟಿಕೆಗಳಿಗೆ ಬಳಸುವ ಉದ್ದೇಶದಿಂದಲೇ ನ್ಯಾನೋ ಯೂರಿಯಾವನ್ನು ದೇಶದ ಒಂದು ಸಂಸ್ಥೆ ಉತ್ಪಾದನೆ ಮಾಡುತ್ತಿದೆ.
ಇದನ್ನೂ ಓದಿ : ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಶ್ರೇಷ್ಠ ಮಟ್ಟದಲ್ಲಿದೆ: ಕಿವೀಸ್ ನಾಯಕ ವಿಲಿಯಮ್ಸನ್
ಗುಜರಾತ್ ಮೂಲದ ಇಫ್ಕೊ ಸಂಸ್ಥೆ ಈ ನ್ಯಾನೋ ಯೂರಿಯಾವನ್ನು ತಯಾರಿಸುತ್ತಿರುವ ಸಂಸ‍್ಥೆಯಾಗಿದ್ದು, ತನ್ನ ಉತ್ಪಾದನೆಯ ಮೊದಲ ಹಂತದ ನ್ಯಾನೋ ಯೂರಿಯಾವನ್ನು ಈಗಾಗಲೇ ಉತ್ತರ ಪ್ರದೇಶದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಬಳಸುವ ಉದ್ದೇಶದಿಂದ ನೀಡಿದೆ. ದ್ರವರೂಪದ ನ್ಯಾನೊ ಯೂರಿಯಾ ತಯಾರಿಕೆಯನ್ನು ಇಫ್ಕೊ ಸಂಸ್ಥೆ ಆರಂಭಿಸಿದ್ದು, ಉತ್ತರ ಪ್ರದೇಶದ ರೈತರಿಗೆ ಮೊದಲ ಉತ್ಪನ್ನವನ್ನು ನೀಡಿದೆ.
ಗುಜರಾತ್‌ನಲ್ಲಿ ಇರುವ ನ್ಯಾನೊ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಇಫ್ಕೋ ಸಂಸ್ಥೆ ಈ ನ್ಯಾನೋ ಯೂರಿಯಾವನ್ನು ಅಭಿವೃದ್ಧಿಪಡಿಸುತ್ತಿದ್ದು, 240 ರೂಪಾಯಿಗಳಿಗೆ 500 ಮಿಲಿ ಲೀಟರಿನ ಬಾಟಲಿಯ ದ್ರವ ರೂಪದ ನ್ಯಾನೋ ಯೂರಿಯಾವನ್ನು ನೀಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಇಫ್ಕೊ ಉಪಾಧ್ಯಕ್ಷ ದಿಲೀಪ್ ಶಂಗಾನಿ, ನ್ಯಾನೋ ಯೂರಿಯಾ 21ನೇ ಶತಮಾನದ ಉತ್ಪನ್ನ. ಪರಿಸರ, ಮಣ್ಣು, ಗಾಳಿ ಮತ್ತು ನೀರನ್ನು ಭವಿಷ್ಯದ ಪೀಳಿಗೆಗೆ ಸುರಕ್ಷಿತವಾಗಿಡಲು, ಎಲ್ಲರಿಗೂ ಆಹಾರ ಭದ್ರತೆಯನ್ನು ಖಾತರಿಪಡಿಸಲು ಇದರ ಅಗತ್ಯ ಇದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಅನ್ ಲಾಕ್ : ರಾಜಧಾನಿಯತ್ತ ವಾಪಾಸಾಗುತ್ತಿರುವ ವಲಸೆ ಕಾರ್ಮಿಕರು..!