Advertisement
ಶನಿವಾರ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದ ಅಂಶ ಈಗ ವಿವಾದಕ್ಕೆ ಕಾರಣವಾಗಿದೆ. “ಪ್ರಸಕ್ತ ಸನ್ನಿವೇಶನದಲ್ಲಿ ಸುಪ್ರೀಂ ಕೋರ್ಟ್ ಮೇಲೆ ವಿಶ್ವಾಸ ಹೊರಟುಹೋಗಿದೆ. ಕೆಲವು ಪ್ರಕರಣಗಳನ್ನು ನಿಗದಿತ ನ್ಯಾಯಮೂರ್ತಿಗಳಿರುವ ಪೀಠಗಳಿಗೆ ಮಾತ್ರ ನೀಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ನ್ಯಾಯ ವಿಲೇವಾರಿ ವಿಚಾರದಲ್ಲಿ ಹೇಳುವುದಾರೆ, ಆಂತರಿಕ ಚಿತ್ರಣ ಬೇರೆಯದ್ದೇ ಆಗಿದೆ’ ಎಂದು ಹೇಳಿದ್ದರು.
ಇದೊಂದು ನ್ಯಾಯಾಂಗ ನಿಂದನೆಯ ಪ್ರಕರಣ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದ್ದರೆ, ಆಲ್ ಇಂಡಿಯಾ ಬಾರ್ ಅಸೋಸಿಯೇಷನ್ ಸುಪ್ರೀಂಕೋರ್ಟ್‌ನಲ್ಲಿ ಕಾನೂನಾತ್ಮಕ ಅಂಶಗಳ ಆಧರಿಸಿಯೇ ನ್ಯಾಯ ನಿರ್ಣಯ ಪ್ರಕ್ರಿಯೆ ನಡೆಯುತ್ತದೆ. ಇದೊಂದು ಆಕ್ಷೇಪಾರ್ಹ ಹೇಳಿಕೆ ಎಂದು ಟೀಕಿಸಿದೆ.