Advertisement

ಇಷ್ಟಪಟ್ಟು ಓದಿದರೆ ಹೆಚ್ಚಿನ ಅಂಕ ಪಡೆಯಲು ಸಾಧ್ಯ

11:32 AM Jan 19, 2018 | Team Udayavani |

ಅಫಜಲಪುರ: ಯಾವುದೇ ವಿಷಯವನ್ನು ಒತ್ತಡದಿಂದ ಅಥವಾ ಕಷ್ಟಪಟ್ಟು ಓದುವ ಬದಲಿಗೆ ವಿಷಯಗಳನ್ನು ಪ್ರೀತಿಸಿ, ಇಷ್ಟಪಟ್ಟು ಓದಿದರೆ ಹೆಚ್ಚಿನ ಅಂಕ ಪಡೆಯಲು ಮತ್ತು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಬಿಇಒ ವಸಂತ ರಾಠೊಡ ಹೇಳಿದರು.

Advertisement

ತಾಲೂಕಿನ ಅತನೂರ ಗ್ರಾಮದ ಆದರ್ಶ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಾರ್ಯಾಲಯ, ಜಸ್ಟಿಸ್‌ ಶಿವರಾಜ ಪಾಟೀಲ ಫೌಂಡೆಶನ್‌ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಶೈಕ್ಷಣಿಕ ಕಾರ್ಯಾಗಾರ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಇಲಾಖೆ ವತಿಯಿಂದ ಒದಗಿಸಲಾಗಿದೆ.
ಅಲ್ಲದೇ ಮಕ್ಕಳಿಗೆ ಕಲಿಕೆ ಇನ್ನಷ್ಟು ಸರಳವಾಗುವ ನಿಟ್ಟಿನಲ್ಲಿ ಮಕ್ಕಳ ಹಬ್ಬ ಆಯೋಜಿಸಲಾಗುತ್ತಿದೆ. ಸಂಪನ್ಮೂಲ
ವ್ಯಕ್ತಿಗಳಿಂದ ವಿಶೇಷ ಬೋಧನೆ ಮಾಡಿಸಲಾಗುತ್ತದೆ. ವಿದ್ಯಾರ್ಥಿಗಳು ಟಿವಿ ಹಾಗೂ ಮೊಬೈಲ್‌ಗ‌ಳಿಂದ ದೂರವಿದ್ದು ಸತತ ಓದು ಹಾಗೂ ಬರವಣಿಗೆ ಮುಖಾಂತರ ನಿರಂತರ ಪ್ರಯತ್ನಮಾಡಿ ತಾಲೂಕಿನ ಫಲಿತಾಂಶ ಉತ್ತಮವಾಗಲು
ಶ್ರಮಿಸಬೇಕೆಂದು ಹೇಳಿದರು.

ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿು ವಿಷಯ ಪರೀವಿಕ್ಷಕ ಹಾಗೂ ಎಸ್ಸೆಸ್ಸೆಲ್ಸಿ ನೋಡಲ್‌ ಅಧಿಕಾರಿಗಳಾದ ಯುವರಾಜ ಗಾಡಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಸತತ ಪ್ರಯತ್ನ ಅತ್ಯಂತ ಅವಶ್ಯಕವಾಗಿದೆ ಎಂದರು.

ಜಸ್ಟಿಸ್‌ ಶಿವರಾಜ ಪಾಟೀಲ ಫೌಂಡೆಶನ್‌ ವತಿಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೊ| ಅಶೋಕ ಕಾಬಾ,
ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಎನ್‌.ಎಸ್‌. ಮಠ, ಬಸವರಾಜ ಇಟಗಿ, ಸೋಮಶೇಖರ ಹೀರೆಮಠ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

Advertisement

ಬಿಆರ್‌ಸಿ ಸಮನ್ವಯಾ ಧಿಕಾರಿಗಳಾದ ಸುಧಾಕರ ನಾಯಕ, ಅಕ್ಷರ ದಾಸೋಹದ ಉಪನಿರ್ದೇಶಕರಾದ ಬಸವಂತ್ರಾಯ ಜಿಡ್ಡೆ, ತಾಲೂಕು ದೈಹಿಕ ಶಿಕ್ಷಣಾ ಧಿಕಾರಿ ವಿರಭದ್ರಪ್ಪ ದೊಡ್ಡಮನಿ, ತಾಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ, ಮುಖ್ಯಶಿಕ್ಷಕರಾದ ಎಂ.ಎನ್‌. ತಾಂಬೆ, ಎನ್‌.ಆರ್‌. ಪಾಟೀಲ, ಅನಿಲಕುಮಾರ ಘನಾತೆ, ತಾಲೂಕು ಶಿಕ್ಷಕರ ಪ್ರತಿಭಾ ಪರಿಷತ್‌ ಅಧ್ಯಕ್ಷ ವಿಜಯಕುಮಾರ ಸಾಲಿಮಠ, ಎಸ್‌.ಜಿ. ಪಾಟೀಲ ಇದ್ದರು.

ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕ ಎಚ್‌.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಭುಲಿಂಗ ನಾಯ್ಕೋಡಿ
ಸ್ವಾಗತಿಸಿದರು, ಬಸವರಾಜ ಜಕಾತಿ ನಿರೂಪಿಸಿದರು, ನಾಗರಾಜ ಬಿರಾದಾರ, ಕೃಷ್ಣಾ ಸಿಂಧೆ ಸಂಗೀತ ಸೇವೆಸಲ್ಲಿಸಿದರು. ಮಹೇಶ ಚವ್ಹಾಣ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next