Advertisement

ಚೆಂದುಟಿಯ ಚೆಲುವು ಬೇಕಿದ್ದರೆ…

06:15 PM Jan 14, 2020 | Team Udayavani |

ಚಳಿಗಾಲದಲ್ಲಿ ಶೀತ ವಾತಾವರಣವು ತುಟಿಗಳನ್ನು ಬೇಗನೆ ಒಣಗಿಸುತ್ತದೆ. ಕಳೆಗುಂದಿದ ತುಟಿಗಳಿಂದಾಗಿ ಮುಖವು ನಿಸ್ತೇಜವಾಗಿ ಕಾಣಬಹುದು. ಹಾಗಾಗಿ, ಈ ಸಮಯದಲ್ಲಿ ತುಟಿಗಳ ಆರೈಕೆ ಮಾಡುವುದು ಅತ್ಯಗತ್ಯ. ಮೃದುವಾದ ಅಧರಗಳಿಗಾಗಿ ಈ ಸಲಹೆಗಳನ್ನು ಪಾಲಿಸಿ.

Advertisement

– ಮುಖದಂತೆ ತುಟಿಗಳಿಗೂ ಸ್ಕ್ರಬ್‌ ಮಾಡುವ ಅಗತ್ಯವಿದೆ. ಲಿಪ್‌ ಸ್ಕ್ರಬರ್‌ (ಮಾರ್ಕೆಟ್‌ನಲ್ಲಿ ಸಿಗುತ್ತದೆ), ಸತ್ತ ಚರ್ಮದ ಕೋಶಗಳನ್ನು ತೆಗೆಯುತ್ತದೆ. ನೆನಪಿಡಬೇಕಾದ ಅಂಶವೆಂದರೆ, ಸ್ಕ್ರಬರ್‌ನಿಂದ ತುಟಿಗಳನ್ನು ಗಟ್ಟಿಯಾಗಿ ಉಜ್ಜದೆ, ಲಘವಾಗಿ ಉಜ್ಜಿ, ನಂತರ ಲಿಪ್‌ಬಾಮ್‌ ಹಚ್ಚಿ.

-ಕಾಫಿ ಪುಡಿ ಮತ್ತು ಜೇನು ತುಪ್ಪವನ್ನು ಬೆರೆಸಿ ಸ್ಕ್ರಬ್‌ ತಯಾರಿಸಿ, ತುಟಿಗಳಿಗೆ ವೃತ್ತಾಕಾರವಾಗಿ ಮಸಾಜ್‌ ಮಾಡಿ. ಸ್ವಲ್ಪ ಹೊತ್ತಿನ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

-ಚಳಿಗಾಲದ ತುಟಿಯ ಆರೈಕೆಯಲ್ಲಿ ಲಿಪ್‌ಬಾಮ್‌ನ ಪಾತ್ರ ಮಹತ್ವದ್ದು. ಅಂಗಡಿಯಲ್ಲಿ ಸಿಗುವ ಬಾಮ್‌ಗಳನ್ನಲ್ಲದೆ, ರೋಸ್‌ ವಾಟರ್‌, ತೆಂಗಿನೆಣ್ಣೆ, ಪೆಟ್ರೋಲಿಯಮ್‌ ಜೆಲ್ಲಿ ಮತ್ತು ಗ್ಲಿಸರಿನ್‌ಅನ್ನು ಸಮ ಪ್ರಮಾಣದಲ್ಲಿ ಬೆರೆಸಿ, ನಯವಾಗಿ ತುಟಿಗಳಿಗೆ ಸವರಿಕೊಳ್ಳಬಹುದು.

– ಹೆಚ್ಚು ನೀರು ಕುಡಿದು, ಚರ್ಮದ, ಆ ಮೂಲಕ ತುಟಿಗಳ ಆರೋಗ್ಯ ಕಾಪಾಡಿ.

Advertisement

-ಮಲಗುವ ಮುನ್ನ ಲಿಪ್‌ಸ್ಟಿಕ್‌ ತೆಗೆದು, ಲಿಪ್‌ಬಾಮ್‌ ಸವರಿಕೊಳ್ಳಿ.

-ತುಟಿಯನ್ನು ಆಗಾಗ ನಾಲಗೆಯಿಂದ ಸವರಿಕೊಳ್ಳಬೇಡಿ.

-ಬಾಯಿ ತೆರೆದು ಉಸಿರಾಡಬೇಡಿ. ಹಾಗೆ ಉಸಿರಾಡುವಾಗ, ಶುಷ್ಕ ಗಾಳಿಯು ತುಟಿಗಳ ಮೇಲೆ ಬೀಸುವುದರಿಂದ ಚರ್ಮ ಒಣಗುತ್ತದೆ.

-ಮೇಘನಾ ರೂಪೇಶ್‌

Advertisement

Udayavani is now on Telegram. Click here to join our channel and stay updated with the latest news.

Next