ಬೆಂಗಳೂರು: ನೀವು ನಿಜವಾಗಿಯೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೆ, ಅಧ್ಯಕ್ಷರಾಗಿ ನಿಮಗೆ ಪವರ್ ಇದ್ದರೆ “ನಿಮ್ಮನ್ನು ಕಮಿಷನ್ ಗಿರಾಕಿ ಎಂದಿರುವ ಉಗ್ರಪ್ಪ ಅವರನ್ನು ವಜಾ ಮಾಡಿ ಎಂದು ಡಿ.ಕೆ ಶಿವಕುಮಾರ ಅವರಿಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಸವಾಲು ಹಾಕಿದ್ದಾರೆ.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಬೇಕೆನ್ನುವ ದುರಾಸೆ ಇಟ್ಟುಕೊಂಡು ಚಿಕ್ಕ ಮಕ್ಕಳಂತೆ ಹಠ ಮಾಡಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದರು. ಆದರೆ ಇವತ್ತು ಅವರ ಪಕ್ಷದವರೇ ಅವರ ಮುಖವಾಡವನ್ನು ಬಿಚ್ಚಿಟ್ಡಿದ್ದಾರೆ.
ಡಿಕೆಶಿ ಕಾಂಗ್ರೆಸ್ ಗೆ ಬಲ ತುಂಬಿಲ್ಲ. ಸಾಮಾನ್ಯ ಕಾರ್ಯಕರ್ತ ಕೂಡ ಡಿ.ಕೆ ಶಿವಕುಮಾರ್ ಹಿಡಿದು ಅಲ್ಲಾಡಿಸಬಹುದು. ಆದರೆ ನಮ್ಮ ಬಿಜೆಪಿ ಅತ್ಯುತ್ತಮವಾದ ಪಕ್ಷ. ಬಿಜೆಪಿಯಿಂದಲೇ ಜನರು, ಜನರಿಗಾಗೀ ಬಿಜೆಪಿ. ಆದರೆ ನೀವು ಅಧ್ಯಕ್ಷರಾಗಿದ್ದರೂ ಸಹ ನಿಮ್ಮದೇ ಪಕ್ಷದ ಜಮೀರ್ ನಿಮ್ಮ ವಿರುದ್ಧ ಮಾತಾಡಿದರು. ನಿಮ್ಮದೇ ಅನುಯಾಯಿಗಳು ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಶಿಸ್ತು ಸಮಿತಿ ಏನಕ್ಕೆ ಇದೇ ಎಂದರು.
ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುನ್ನಡೆಸಲು ಆಗಲ್ಲ. ಡಿಕೆಶಿ ಅವರು ಕನಸಿನಲ್ಲೂ ಬಿಜೆಪಿ ಹತ್ತಿರ ಬರಲು ಸಾಧ್ಯವಿಲ್ಲ. ಡಿಕೆಶಿ ಬಿಲ್ಡಪ್ ಕೋಡೋ ಬದಲು ಮೊದಲು ಕ್ರಮ ತೆಗೆದುಕೊಳ್ಳಿ. ನೀವು ಬಿಜೆಪಿ ಬಗ್ಗೆ ಮಾತನಾಡಲು ನೈತಿಕ ಶಕ್ತಿ ಇಲ್ಲ, ನಿಮ್ಮ ಬಗ್ಗೆ ಮಾತಾಡೋಕೆ ನಿಮಗೆ ವಕ್ತಾರರು ಬೇಕಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಎಸ್.ಸಿ. ಮೋರ್ಛಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಉಗ್ರಪ್ಪ ಮತ್ತು ಸಲೀಂ ಡಿ.ಕೆ. ಶಿವಕುಮಾರ್ ಅವರ ಮುಖವಾಡ ಕಳಚಿಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಎಷ್ಟರ ಮಟ್ಟಿಗೆ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಇವರು ಕಾಂಗ್ರೆಸ್ ಪಕ್ಷವನ್ನು ಯಾವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಅಂತಾ ಗೊತ್ತಾಗುತ್ತದೆ.ಉಗ್ರಪ್ಪ ಸಿದ್ದರಾಮಯ್ಯನವರ ಮೌತ್ ಪೀಸ್. ಈ ನಾಟಕದ ಸೂತ್ರಧಾರಿ ಸಿದ್ದರಾಮಯ್ಯ ಎಂದರು.