Advertisement

US: ಗೆದ್ದರೆ ರಷ್ಯಾ-ಉಕ್ರೇನ್‌ ಯುದ್ಧ ಕೊನೆಗಾಣಿಸುವೆ: ವಿವೇಕ್‌ ರಾಮಸ್ವಾಮಿ

10:03 PM Aug 19, 2023 | Team Udayavani |

ವಾಷಿಂಗ್ಟನ್‌: ಮುಂದಿನ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಉಕ್ರೇನ್‌ ಮತ್ತು ರಷ್ಯಾ ಯುದ್ಧ ಕೊನೆಗೊಳಿಸುವುದಾಗಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಹುದ್ದೆಯ ಸ್ಪರ್ಧಾಕಾಂಕ್ಷಿ, ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ ಹೇಳಿದ್ದಾರೆ.

Advertisement

ಉಕ್ರೇನ್‌ ನ್ಯಾಟೋಗೆ ಸೇರ್ಪಡೆಯಾಗದಂತೆ, ಡಾನ್‌ಬಾಸ್‌ ಪ್ರದೇಶ ರಷ್ಯಾ ವಶದಲ್ಲಿಯೇ ಇರುವಂತೆಯೇ ಮಾಡುವುದಾಗಿ ಅವರು ಮೈಕ್ರೋಬ್ಲಾಗಿಂಗ್‌ ಜಾಲ ತಾಣ “ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಚೀನಾ ಜತೆಗೆ ಹೊಂದಿರುವ ಸೇನಾ ಮೈತ್ರಿಗೆ ಕೊನೆ ಹಾಡಬೇಕು. ಇದರ ಅರ್ಥ ರಷ್ಯಾ ಸೋಲಬೇಕು ಎಂದಲ್ಲ. ಈ ಹಂತದಲ್ಲಿ ಅಮೆರಿಕ ಗೆಲ್ಲಬೇಕು ಎಂದೂ ಅವರು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next