“3′ ಚಿತ್ರದಲ್ಲೇ ದಂಡುಪಾಳ್ಯ ಗ್ಯಾಂಗ್‌ನ ರಕ್ತಚರಿತ್ರೆ ಮುಗಿಯಬಹುದು ಎಂದುಕೊಂಡಿದ್ದ ಪ್ರೇಕ್ಷಕರಿಗೆ ಇನ್ನೊಂದು ಸುದ್ದಿ ಇದೆ. ಅದೇನೆಂದರೆ, “ದಂಡುಪಾಳ್ಯಂ 4′ ಎಂಬ ಚಿತ್ರವೊಂದು ಸದ್ದಿಲ್ಲದೆ ಚಿತ್ರೀಕರಣವಾಗಿ ಮುಗಿದಿದೆ. ಈ ಹಿಂದೆ “2′ ಚಿತ್ರವನ್ನು ನಿರ್ಮಿಸಿರುವ ವೆಂಕಟ್, ಈ ಚಿತ್ರವನ್ನು ನಿರ್ಮಿಸುವುದಷ್ಟೇ ಅಲ್ಲ, ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿಯೂ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ವಿವರ ನೀಡುವುದಕ್ಕೆ ವೆಂಕಟ್ ತಮ್ಮ ತಂಡದವರೊಂದಿಗೆ ಮಾಧ್ಯಮದವರೆದುರು ಕುಳಿತಿದ್ದರು.
ಅಂದು ನಿರ್ಮಾಪಕ ವೆಂಕಟ್ ಮತ್ತು ನಿರ್ದೇಶಕ ಕೆ.ಟಿ. ನಾಯಕ್ ಜೊತೆಗೆ ಚಿತ್ರದಲ್ಲಿ ನಟಿಸಿರುವ ಸುಮನ್ ರಂಗನಾಥ್, ಮುಮೈತ್ ಖಾನ್, ಸಂಜೀವ್, ಅರುಣ್, ಬ್ಯಾನರ್ಜಿ ಮುಂತಾದವರು ಅಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ವೆಂಕಟ್ ಸ್ವಲ್ಪ ಸಿಟ್ಟಾಗಿಯೇ ಇದ್ದರು. ಅವರ ಸಿಟ್ಟು ಸಿನಿಮಾಗೆ ತಡೆಯೊಡುವವರ ಕುರಿತದ್ದಾಗಿತ್ತು. “ದಂಡುಪಾಳ್ಯಂ 4′ ಎಂಬ ಹೆಸರಿನ ಕುರಿತು ಕೆಲವರು ಮಾಡುತ್ತಿರುವ ಗಲಾಟೆ ಕುರಿತು ಮಾತನಾಡಿದ ಅವರು, “ಜನ “ಕೋಲಾರ’, “ಕೆಜಿಎಫ್’ ಅಂತ ಹೆಸರಿಟ್ಟು ಸಿನಿಮಾ ಮಾಡಿದರೆ, ಯಾರೂ ಏನು ಹೇಳುವುದಿಲ್ಲ. ಆದರೆ, “ದಂಡುಪಾಳ್ಯಂ 4′ ಎಂಬ ಹೆಸರಿಟ್ಟರೆ ಸಮಸ್ಯೆ ಮಾಡುತ್ತಾರೆ. ಇಷ್ಟಕ್ಕೂ ನಾವು “ದಂಡುಪಾಳ್ಯ’ ಎಂದು ಹೆಸರಿಟ್ಟಿಲ್ಲ. ಈ ಚಿತ್ರಕ್ಕೂ ಹಿಂದಿನ ಚಿತ್ರಕ್ಕೂ ಯಾವುದೇ ಸಂಬಂಧವೂ ಇಲ್ಲ. “ದಂಡುಪಾಳ್ಯ’ ನಂತರ ಅದರ ಮುಂದಿನ ಭಾಗಗಳಿಗೆ ಅದೇ ಹೆಸಿರುಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದ ಮೇಲೆ, ಮುಂದುವರೆದ ಭಾಗಗಳಿಗೆ “2′ ಮತ್ತು “3′ ಎಂಬ ಹೆಸರುಗಳನ್ನು ಇಡಲಾಗಿತ್ತು. ನಾವು “ದಂಡುಪಾಳ್ಯಂ 4′ ಎಂದು ಹೆಸರಿಟ್ಟಿದ್ದೇವೆ. ದಂಡುಪಾಳ್ಯಂ ಎನ್ನುವುದು ತೆಲುಗು ಹೆಸರು. ಈ ಹೆಸರಿನ ಕುರಿತು ಯಾರೂ ಸಮಸ್ಯೆ ಮಾಡುವುದಕ್ಕೆ ಸಾಧ್ಯವಿಲ್ಲ’ ಎಂದು ಹೇಳಿದರು.
ಅಪರಿಚಿತ ವ್ಯಕ್ತಿಗಳನ್ನು ವಿಚಾರಿಸದೆ ಒಳಗೆ ಬಿಟ್ಟುಕೊಂಡರೆ, ಅವರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ. “ಇದೊಂದು ಕ್ರೈಮ್ ಚಿತ್ರ. ಈ ಕ್ರೈಮ್ ವಿಷಯ ಎನ್ನುವುದು ಒಂದು ದೊಡ್ಡ ಮರದ ಕೊಂಬೆಯಿದ್ದಂತೆ. ನಾವು ಒಂದು ಕೊಂಬೆಯನ್ನಷ್ಟೇ ತೆಗೆದುಕೊಂಡಿದ್ದೇವೆ. ಈ ಚಿತ್ರಕ್ಕೂ ಹಿಂದಿನ ಚಿತ್ರಗಳಿಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯೇ ಚಿತ್ರವಾಗುತ್ತದೆ’ ಎಂದು ಹೇಳಿದರು.
“ದಂಡುಪಾಳ್ಯಂ 4′ ಚಿತ್ರದಲ್ಲಿ ಸುಮನ್ ರಂಗನಾಥ್ ಅವರು ಗ್ಯಾಂಗ್ ಲೀಡರ್ ಆಗಿ ನಟಿಸಿದ್ದಾರಂತೆ. ಅವರಿಗೆ ಈ ಪಾತ್ರ ಸಿಕ್ಕಾಗ, ಹಿಂದಿನ ಚಿತ್ರಗಳನ್ನು ನೋಡಿರಲಿಲ್ಲವಂತೆ. “ನನ್ನದು ಯಾರಿಗೂ ಭಯ ಬೀಳದ ಪಾತ್ರ. ಚಿತ್ರದಲ್ಲಿ ಕೆಲಸ ಮಾಡುವಾಗ ಯಾವುದೇ ತೊಂದರೆಯಾಗಲಿಲ್ಲ’ ಎಂದು ಹೇಳಿಕೊಂಡರು. ಇನ್ನು ಮುಮೈತ್ ಖಾನ್, ಈ ಚಿತ್ರದಲ್ಲೊಂದು ಐಟಂ ಡ್ಯಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
“ದಂಡುಪಾಳ್ಯಂ 4′ ಚಿತ್ರವು ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಏಕಕಾಲಕ್ಕೆ ಬಿಡುಗಡೆ ಮಾಡಲಾಗುವುದಂತೆ.