Advertisement

ಕಣ್ಣು ಇಲ್ಲದಿದ್ದರೆ ಜಗತ್ತು ಕತ್ತಲು

11:22 AM Jan 07, 2019 | Team Udayavani |

ಗುರುಮಠಕಲ್‌: ಕಣ್ಣು ಮನುಷ್ಯನ ಪ್ರಮುಖ ಅಂಗವಾಗಿದ್ದು, ನಾವೆಲ್ಲರೂ ಅದರ ಸುರಕ್ಷತೆಗೆ ಕಡೆ ಗಮನ ಹರಿಸಬೇಕು. ಕಣ್ಣು ಇಲ್ಲದಿದ್ದರೆ ಜಗತ್ತು ಕತ್ತಲು ಇದ್ದಂತೆ ಎಂದು ಡಾ| ಭಗವಂತ ಅನ್ವರ್‌ ಹೇಳಿದರು. ಅವರು ಸಮುದಾಯ ಆರೋಗ್ಯ ಕೇಂದ್ರ ಗುರುಮಠಕಲ್‌ ನಲ್ಲಿ ಆಯೋಜಿಸಿದ್ದ ಉಚಿತ ಮೋತಿಯಾ ಬಿಂದು ಶಸ್ತ್ರ ಚಿಕಿತ್ಸೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ವಯಸ್ಸಾದಂತೆ ಕಣ್ಣಿನ ಸಮಸ್ಯೆಗಳು ಪ್ರತಿ ಒಬ್ಬರಲ್ಲಿ ಕಾಣಿಸುತ್ತಿದ್ದು, ಇಂದಿನ ಜೀವನ ಶೈಲಿಯಿಂದಾಗಿ ಕಣ್ಣಿನ ಸಮಸ್ಯೆಗಳು ಹರಿಯದಲ್ಲಿ ಕಾಣಿಸುಕೊಳ್ಳುತ್ತಿವೆ. ಹೀಗಾಗಿ ನಮ್ಮ ದೇಶದಲ್ಲಿ ವರ್ಷಕ್ಕೆ 10 ಲಕ್ಷ ರೂ. ಹೆಚ್ಚು ಜನರು ಮೋತಿಯಾ ಬಿಂದು ಶಸ್ತ್ರ ಚಿಕಿತ್ಸಕ್ಕೆ ಒಳಪಡುತ್ತಾರೆ. ನಮ್ಮ ಯಾದಗಿರಿ ಜಿಲ್ಲೆಗೆ 7,700 ಜನರಿಗೆ ಚಿಕಿತ್ಸೆ ವರ್ಷಕ್ಕೆ ಗುರಿ ಹೊಂದಿದ್ದು, ಕೇವಲ ಒಬ್ಬರು ಕಣ್ಣಿನ ತಜ್ಞ ವೈದ್ಯರು ಇರುವುದರಿಂದಾಗಿ ಗುರಿ ಮುಟ್ಟಲು ಸಾಧ್ಯ ಆಗುತ್ತಿಲ್ಲ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಉಸ್ಮಾನ್‌ ಪಟೇಲ ಹಬೀಬ್‌ ಮಾತನಾಡಿ, ಜನರು ಸರ್ಕಾರದ ಆರೋಗ್ಯ ಯೋಜನೆಗಳ
ಬಗ್ಗೆ ಸದುಪಯೋಗ ಪಡೆಯಬೇಕು. ಸರ್ಕಾರಗಳು ಬಹಳಷ್ಟು ಆರೋಗ್ಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅವುಗಳನ್ನು ಆಶಾ ಕಾರ್ಯಕರ್ತರ ಮೂಲಕ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಖ್ಯಾತ ನೇತ್ರ ತಜ್ಞ ಡಾ| ಕೃಷ್ಣಮೋಹನ್‌ ಜಿಂಕಾ, ಆರೋಗ್ಯ ಅಧಿಕಾರಿಗಳಾದ ಸಂತೋಷ ಕುಮಾರ್‌, ಡಾ| ವಿಜಯ ಲಕ್ಷ್ಮಿ,
ಡಾ| ಸಂಗಮ್ಮ, ಡಾ| ಪ್ರತಿಬಾ, ಪುರಸಭೆ ಸದಸ್ಯ ಆಶನ್ನ ಬುದ್ಧ, ಲಾಯನ್ಸ ಕ್ಲಬ್‌ ಅಧ್ಯಕ್ಷ ರಘುನಾಥ ರೆಡ್ಡಿ ಪಾಟೀಲ, ಬಸವರಾಜ ಆವಂಟಿ, ರಾಮಕೃಷ್ಣ ಹಾಗೂ ಸಿಬ್ಬಂದಿಗಳಾದ ಬಸವರಾಜ, ನೀಲಾಬಾಯಿ, ರಾಕೇಶ ಮತ್ತು ಇನ್ನಿತರರು ಇದ್ದರು. 150 ಜನರಿಗೆ ಉಚಿತ ಶಸ್ತ್ರ ಚಿಕಿತ್ಸ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next