Advertisement
ಶುಕ್ರವಾರ ನಗರಸಭೆಯಲ್ಲಿ ಅಭಿವೃದ್ಧಿ ಕೆಲಸಗಳ ಕುರಿತು ಅವರು ಅಧಿಕಾರಿಗಳ ಜತೆಗೆ ಸಭೆ ನಡೆಸಿದರು. ಜನರಿಗೆ ಸರ ಕಾರದ ಸವಲತ್ತುಗಳು ನೇರವಾಗಿ ದೊರಕಿಸಿ ಕೊಡಬೇಕು ಅನ್ನುವುದೇ ನನ್ನ ಮೂಲ ಉದ್ದೇಶವಾಗಿದ್ದು, ಅಧಿಕಾರಿಗಳು ಜನರಿಗೆ ಪ್ರಾಮಾಣಿಕ ಸೇವೆ ನೀಡಬೇಕು ಎಂದರು.
ನಗರದ ಚರಂಡಿಗಳ ಅಭಿವೃದ್ಧಿ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು, ಈ ಕುರಿತು ಯೋಜನೆಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 2018-19 ರಲ್ಲಿ ಯುಜಿಡಿ ಯೋಜನೆಯಲ್ಲಿ ರೂ. 154 ಕೋಟಿಯ ಡಿಪಿಆರ್ ರೂಪಿಸಲಾಗಿತ್ತು. ಯೋಜನಾ ವೆಚ್ಚ ಅಧಿಕವಾದ್ದರಿಂದ ಮತ್ತು 40 ಕಿ.ಮೀ. ಜಾಗ ಒತ್ತುವರಿ ಮಾಡಬೇಕಾದ ಅಗತ್ಯ ಬಿದ್ದ ಕಾರಣ ಯೋಜನೆ ಮುಂದುವರೆಯಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಗರೋತ್ಥನಾದಲ್ಲಿ 25 ಕೋಟಿಯ ಯೋಜ ನೆಗಳಿಗೆ ಟೆಂಡರ್ ಆಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕರ ಗಮನಕ್ಕೆ ತಂದರು. ನಗರಸಭೆಗೆ ಸಂಬಂಧಿಸಿದ ವಿವಿಧ ಅಧಿಕಾರಿಗಳು, ಸಿಬಂದಿ ವರ್ಗದವರು ಸಭೆಯಲ್ಲಿ ಪಾಲ್ಗೊಂಡರು.
Related Articles
ನಿವೇಶನಕ್ಕಾಗಿ ಸಾವಿರಾರು ಅರ್ಜಿಗಳು ಬಾಕಿ ಇರುವ ಬಗ್ಗೆ ಶಾಸಕರಿಗೆ ಉತ್ತರಿ ಸಿದ ಪೌರಾಯುಕ್ತರು, ಸುಮಾರು 1978 ಅರ್ಜಿಗಳು ನಿವೇಶನ ಕೋರಿ ಸಲ್ಲಿಕೆಯಾಗಿವೆ. 1.8 ಎಕ್ರೆ ಜಾಗದಲ್ಲಿ 68 ನಿವೇಶನ ಗುರುತಿಸಲಾಗಿದೆ. ಸಿಂಗಾಣಿಯಲ್ಲಿ ಪೌರಕಾರ್ಮಿಕರಿಗೆ ವಸತಿ ನಿರ್ಮಾಣಕ್ಕೆ ಜಾಗ ಗುರುತಿಸ ಲಾಗಿದೆ. ಉಳಿದಂತೆ ಹಲವು ಜಾಗಗ ಳನ್ನು ಗುರುತಿಸಿದರೂ ವಿವಿಧ ಕಾರಣ ಗಳಿಗೆ ನೀಡಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು.
Advertisement
ಸಿಬಂದಿ ಕೊರತೆನಗರಸಭೆಗೆ 236 ಮಂದಿ ಅಧಿಕಾರಿ, ಸಿಬಂದಿಯ ಆವಶ್ಯಕತೆ ಇದೆ. ಆದರೆ ಪ್ರಸ್ತುತ 38 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 199 ಸಿಬಂದಿ ಕೊರತೆ ಇದೆ. 11 ಮಂದಿ ಖಾಯಂ ಪೌರ ಕಾರ್ಮಿಕರಿದ್ದು, 45 ಮಂದಿಯ ಖಾಯಂ ಮಾಡಲು ಡಿಸಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅದರಲ್ಲಿ 34 ಮಂದಿಯನ್ನು ಆಯ್ಕೆ ಮಾಡಲಾಗಿದೆ. 5 ಮಂದಿ ಎಂಜಿನಿ ಯರ್ ಹುದ್ದೆಗಳಲ್ಲಿ 3 ಹುದ್ದೆ ಮಾತ್ರ ಭರ್ತಿಯಾಗಿದ್ದು, ಅದರಲ್ಲೂ ಇಬ್ಬರಿಗೆ ಬೇರೆ ತಾ| ನ ಜವಾಬ್ದಾರಿ ಇದೆ ಎಂದು ಪೌರಾಯುಕ್ತರು ಶಾಸಕರ ಗಮನಕ್ಕೆ ತಂದರು.