ಶಿರಸಿ: ಯಾವತ್ತೂ ವಿಷಯಾಧಾರಿತವಾಗಿರಬೇಕು,ಸಂವಿಧಾನ ಹಿಂದಿರಬೇಕು, ಕಾರ್ಯವಿಧಾನ ಮುಂದಿರಬೇಕು ಅಂಥ ವೇಳೆ ಸ್ಪಂದನೀಯ, ಯಶಸ್ವಿ ಆಗುತ್ತದೆ ಎಂದು ಹಿರಿಯ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.
ರವಿವಾರ ನಗರದ ಟಿಆರ್ ಸಿ ಸಭಾಂಗಣದಲ್ಲಿ ರಾಜದೀಪ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದ ಅವರು ಈವತ್ತಿನ ದಿನದಲ್ಲಿ ಎಲ್ಲ ಕ್ಷೇತ್ರದಲ್ಲಿ ರಾಜಕಾರಣ ಬಂದಿದೆ. ಸಮಾಜ ಸೇವೆ ಮಾಡುವವರ ಕೊರತೆ ಇಂದು ಇದೆ. ಅಂಥ ಕಾರ್ಯ ರಾಜದೀಪ ಟ್ರಸ್ಟ್ ಮಾಡಬೇಕು ಎಂದರು.
ಯಾವುದೇ ಕ್ಷೇತ್ರದಲ್ಲಿ ನಂಬಿಕೆ ಇಲ್ಲ ಎಂದರೆ ಎಲ್ಲವೂ ಶಿಥಿಲ ಆಗುತ್ತದೆ. ನಂಬಿಕೆ ಇದ್ದರೆ ಅದು ಹತ್ತಿರ ಅದ ಬಂಧು. ಉಭಯ ಜನರ ನಂಬಿಕೆ ಇರಬೇಕು ಎಂದರು.
ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ತೊಂಬತ್ತೊಂಬತ್ತು ತಪ್ಪು ಕೆಲಸ ಮಾಡಿದರೂ ಒಂದು ಒಳ್ಳೆ ಕೆಲಸ ಮಾಡಿದರೆ ಮಾಧ್ಯಮಗಳಲ್ಲಿ ಬರೆಯಬೇಕು. ಆಗ ೧೦೧ನೇ ಕೆಲಸ ಕೂಡ ಒಳ್ಳೆಯಯದನ್ನೇ ಮಾಡುತ್ತಾನೆ. ಯಾವುದೇ ದೊಡ್ಡ ಕನಸು ಬಿತ್ತ ಬೇಕಿಲ್ಲ. ಸಣ್ಣ ಸಣ್ಣ ಅಗತ್ಯ ತುಂಬಿಸುವ ಕಾರ್ಯ ಮಾಡಿದರೆ ಸಾಕು, ಅದೇ ಟ್ರಸ್ಟ್ ಯಶಸ್ಸು. ಸಣ್ಣ ಹಾಗೂ ದೃಢವಾದ ಹೆಜ್ಜೆ ಇಡಬೇಕು ಎಂದರು.
ಟಿಎಸ್ ಎಸ್ ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ, ಪ್ರಸಿದ್ದ ವೈದ್ಯ ಡಾ. ರಾಜಾರಾಮ ಹೆಗಡೆ, ಕಲಾವಿದರಾದ ಫಯಾಜ್ ಖಾನ್, ಲಕ್ಷ್ಮೀಶರಾವ್ ಇತರರು ಇದ್ದರು. ಅಧ್ಯಕ್ಷತೆಯನ್ನು ಟಿಆರ್ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ವಹಿಸಿದ್ದರು. ಟ್ರಸ್ಟಿ ದೀಪಕ ದೊಡ್ಡೂರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ ಮಣ್ಮನೆ ಪ್ರಾಸ್ತಾವಿಕ ಮಾತನಾಡಿದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು.