Advertisement
ಆದರೆ ಆಸ್ಟ್ರೇಲಿಯ ಸರಕಾರ ಮತ್ತು ಕ್ರಿಕೆಟ್ ಆಸ್ಟ್ರೇಲಿಯಗಳೆರಡೂ ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರುವಲ್ಲಿ ವಿಳಂಬನೀತಿ ಅನುಸರಿಸುತ್ತಿರುವುದು ಮಾತ್ರ ಸರಿಯಲ್ಲ ಎಂದರು.
“ಐಪಿಎಲ್‌ಗೆ ಅವಕಾಶ ಮಾಡಿ ಕೊಡುವ ಸಲುವಾಗಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡಲಿದೆ ಎಂದು ನನಗನಿ ಸದು. ನಿರ್ದಿಷ್ಟ ದಿನಾಂಕದ ವರೆಗೆ ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಿ ರುವುದು ಆಸ್ಟ್ರೇಲಿಯ ಸರಕಾರ ಹಾಗೂ ಅಲ್ಲಿನ ಕಾನೂನು. ಹೀಗಾಗಿ ಟಿ20 ವಿಶ್ವಕಪ್ ಆಯೋಜನೆ ಕುರಿ ತಂತೆ ಅಲ್ಲಿನ ಸರಕಾರ ಮತ್ತು ಕ್ರಿಕೆಟ್ ಮಂಡಳಿ ಅತೀ ಶೀಘ್ರದಲ್ಲಿ ನಿರ್ಧಾರವೊಂದಕ್ಕೆ ಬರಬೇಕಿದೆ’ ಎಂದು ಹೋಲ್ಡಿಂಗ್ ಹೇಳಿದರು. “ಒಂದು ವೇಳೆ ಟಿ20 ವಿಶ್ವಕಪ್ ಪಂದ್ಯಾವಳಿ ಈ ವರ್ಷ ನಡೆಯದೇ ಹೋದರೆ ಈ ಅವಕಾಶದಲ್ಲಿ ಐಪಿಎಲ್ ನಡೆಸಲು ಬಿಸಿಸಿಐಗೆ ಸಂಪೂರ್ಣ ಹಕ್ಕು ಇದೆ. ಆಗ ಅ. 18ರಿಂದ ನ. 15ರ ವರೆಗಿನ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಖಾಲಿ ಉಳಿದಂತಾಗುತ್ತದೆ. ಸರಕಾರದ ಮಾರ್ಗಸೂಚಿಯನ್ನು ಪಾಲಿಸಿ ಐಪಿಎಲ್ ನಡಸಬಹುದು’ ಎಂದು ಹಾಲಿ ಕಮೆಂಟೇಟರ್ ಕೂಡ ಆಗಿರುವ ಮೈಕಲ್ ಹೋಲ್ಡಿಂಗ್ ಹೇಳಿದರು.
Related Articles
Advertisement