Advertisement

ಧಾರ್ಮಿಕ ಬೇರು ಸಡಿಲಾದರೆ ಸಮಾನತೆಗೆ ಧಕ್ಕೆ

12:23 PM Mar 12, 2018 | Team Udayavani |

ಯಲಹಂಕ: ಧಾರ್ಮಿಕ ಬೇರುಗಳು ಸಡಿಲಾದರೆ ಸಮಾಜದ ಸಮಾನತೆಗೆ ಧಕ್ಕೆಯಾಗಲಿದೆ ಎಂದು 1008 ಸುಬುದೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು. ಯಲಹಂಕ ಉಪನಗರದ ಗುರುರಾಜ ಸೇವಾ ಸಮಿತಿ ನೂತನವಾಗಿ ನಿರ್ಮಿಸಿರುವ  ಸುಜಿಯಿಂದ್ರ ಪ್ರವಚನ ಮಂದಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

Advertisement

ಇತ್ತೀಚಿನ ದಿನಗಳಲ್ಲಿ ಹಿಂದೂ ಸನಾತನ ಧರ್ಮಕ್ಕೆ ಬಾಹ್ಯ ಮತ್ತು ಅಂತರಿಕ ಆತಂಕ ಎದುರಾಗಿದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರರೆ ಸಮಾಜದಲ್ಲಿನ ಸಮಬಾಳ್ವೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಒದಗಬಹುದು. ಈ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರು, ಮಠಾಧಿಪತಿಗಳು ಜಾತಿ, ಮತ ಭಾಷೆಗಳ ಭೇದವಿಲ್ಲದೆ ಸನಾತನ ಧರ್ಮ ಉಳಿಸಲು ಹೋರಾಡುವ ಅಗತ್ಯವಿದೆ ಎಂದರು.

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುರುರಾಜ ಸೇವಾಸಮಿತಿ ಗೌರವಾಧ್ಯಕ್ಷ ಜಿ.ವಿ.ಪ್ರಭಾಕರ ರಾವ್‌, ಉಪಾಧ್ಯಕ್ಷ ಎಚ್‌.ಕೆ.ಗುರುರಾಜ ರಾವ್‌, ಕಾರ್ಯದರ್ಶಿ ಜಿ.ಸು.ಶ್ರೀನಾಥ್‌ ಮತ್ತು ಎಸ್‌.ಭೀಮಸೇನಾಚಾರ್‌, ಎನ್‌.ರವಿಕುಮಾರ್‌, ಶ್ರೀದೇವಿ ಗುರುರಾಜ್‌ ಭಾಗವಹಿಸಿದ್ದರು. ಇದೇ ವೇಳೆ ವಿದ್ವಾನ್‌ ಮೈಸೂರು ರಾಮಚಂದ್ರಾಚಾರ್‌ ಅವರಿಂದ ದಾಸವಾಣಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next