Advertisement
ಇಲ್ಲಿ ಡಾಮರು ಕಾಮಗಾರಿ ನಡೆಯಬೇಕಿದೆ. ಕೆಲವೊಂದು ಮೂಲ ಸೌಕರ್ಯ ಇದೆಯಾದರೂ ಅವುಗಳು ಉಪಯೋಗಕ್ಕೆ ಸಿಗುತ್ತಿಲ್ಲ. ಶೌಚಾಲಯವಿದ್ದರೂ ಅದು ಸುಸ್ಥಿತಿಯಲ್ಲಿಲ್ಲ. ಸುತ್ತಲೂ ಹುಲ್ಲು ಬೆಳೆದು ಶೌಚಾಲಯಕ್ಕೆ ಹೋಗುವವರಿಗೆ ಭಯ ಹುಟ್ಟಿಸುವಂತಿದೆ. ನೀರು ಮತ್ತು ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ. ಇರುವ ಸೌಕರ್ಯಗಳ ಬಳಕೆ ಸಾಧ್ಯವಾಗುತ್ತಿಲ್ಲ.
ಈ ರಿಕ್ಷಾ ನಿಲ್ದಾಣದ ಮುಂಭಾಗದಲ್ಲಿ ಪುರಸಭೆಯ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿದೆ. ಹಾಗಾಗಿ ಇದು ಪ್ರಮುಖ ನಿಲ್ದಾಣ, ಪಾರ್ಕಿಂಗ್ ಸ್ಥಳವಾಗಿಯೂ ಮಾರ್ಪಟ್ಟಿದೆ. ಬಡ್ಡಕಟ್ಟೆ ಸಂಪರ್ಕ ರಸ್ತೆಯ ಉದ್ದಕ್ಕೆ ತರಕಾರಿಯಿಂದ ಅಂಗಡಿಯಿಂದ ಹಿಡಿದು ಬಟ್ಟೆ, ಕಿರಾಣಿ ಅಂಗಡಿ, ಹೊಟೇಲ್, ಹೋಲ್‌ಸೇಲ್ ವ್ಯಾಪಾರಗಳು, ಸ್ವರ್ಣಾಭರಣ ಮಳಿಗೆಗಳು ಇವೆ. ಆದರೆ ಈ ಸ್ಥಳವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ರಿಕ್ಷಾ ನಿಲ್ದಾಣದ ಸನಿಹದಲ್ಲಿ ತೋಡಿನ ಬದಿಯೂ ಕುಸಿತಕ್ಕೆ ಒಳಗಾಗಿದೆ. ಕ್ರಮ ಕೈಗೊಂಡಿಲ್ಲ
ಬಡ್ಡಕಟ್ಟೆ ರಿಕ್ಷಾ ನಿಲ್ದಾಣ ಅಭಿವೃದ್ಧಿ ಪಡಿಸುವಂತೆ ಪುರಸಭೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ.
– ವಿಶ್ವನಾಥ ಬಂಟ್ವಾಳ
ಸಂಘಟಕರು, ರಿಕ್ಷಾ ಚಾಲಕ ಮಾಲಕರ ಯೂನಿಯನ್, ಬಂಟ್ವಾಳ
Related Articles
ಪಿಯೂಸ್ ಎಲ್. ರೋಡ್ರಿಗಸ್ “ಬುಡಾ’ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಡ್ಡಕಟ್ಟೆ ಅಟೋ ನಿಲ್ದಾಣದ ಅಭಿವೃದ್ಧಿಗಾಗಿ 10 ಲಕ್ಷ ರೂ.ಯೋಜನೆ ರೂಪಿಸಿದ್ದರು. ಸದ್ರಿ ಅನುದಾನವನ್ನು ಪ್ರಸ್ತುತ ಅಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಮಾತ್ರ ಉಪಯೋಗಿಸಲು ಸಾಧ್ಯ ಎಂದು ಹಾಲಿ ಬುಡಾ ಅಧ್ಯಕ್ಷರಾದ ಸದಾಶಿವ ಬಂಗೇರ ತಿಳಿಸಿದ್ದಾರೆ. ನಿಲ್ದಾಣಕ್ಕೆ ಡಾಮರು ಹಾಕುವುದು ಮತ್ತು ಅಭಿವೃದ್ಧಿಗಾಗಿ 10 ಲಕ್ಷ ರೂ. ಮೊತ್ತದ ಇನ್ನೊಂದು ಪ್ರಸ್ತಾವನೆ ಮಾಡಿ ರಾಜ್ಯ ಸರಕಾರದ ಅನುಮೋದನೆಗೆ ಸಲ್ಲಿಸಲಾಗಿದೆ.
– ಪಿ. ರಾಮಕೃಷ್ಣ ಆಳ್ವ
ಅಧ್ಯಕ್ಷರು, ಬಂಟ್ವಾಳ ಪುರಸಭೆ
Advertisement