ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವವರ ಸಂಖ್ಯೆ ಕುರಿತ ಜಿಜ್ಞಾಸೆ ನಡುವೆಯೇ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣನವರ ಮಗ ಪ್ರಜ್ವಲ್ ಮುಂದಿನ ಚುನಾವಣೆಯಲ್ಲಿ ಪಕ್ಷ ಸೂಚಿಸಿದರೆ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವುದಾಗಿ ಹೇಳಿದ್ದಾರೆ.
ಚುನಾವಣೆ ಕುರಿತು ಅತ್ಯುತ್ಸಾಹದಲ್ಲಿರುವ ಪ್ರಜ್ವಲ್, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರೆ ಸಿಎಂ ವಿರುದ್ಧ ಬೇಕಾದರೂ ಸ್ಪರ್ಧಿಸಲೂ ಸೈ ಎಂದಿದ್ದಾರೆ. ಬಸವನಗುಡಿಯಲ್ಲಿರುವ ನಿವಾಸದಲ್ಲಿ ಶನಿವಾರ 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರಜ್ವಲ್, ಪಕ್ಷ ಅವಕಾಶ ಕೊಟ್ಟರೆ ರಾಜರಾಜೇಶ್ವರಿನಗರದಲ್ಲಿ ಸ್ಪರ್ಧೆ ಮಾಡುತ್ತೇನೆ. ಆದರೆ, ನನ್ನದೇ ಆಯ್ಕೆ ಎಂದಾಗ ಬೇಲೂರು, ಹುಣಸೂರು ಎಂದಾಗಿತ್ತು ಎಂದು ಇನ್ನೂ ಹುಣಸೂರಿನ ಮೇಲೆ ಪ್ರೀತಿಯಿದೆ ಎಂಬುದನ್ನು ಪರೋಕ್ಷವಾಗಿ ತೋರ್ಪಡಿಸಿಕೊಂಡರು.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದಟಛಿನಿದ್ದೇನೆ. ಅದು ರಾಜರಾಜೇಶ್ವರಿನಗರವಾದರೂ ಸರಿ, ಇಲ್ಲ ಮುಖ್ಯಮಂತ್ರಿ ವಿರುದಟಛಿವಾದರೂ ಸರಿ, ಎಲ್ಲೇ ಟಿಕೆಟ್ ಕೊಟ್ಟರೂ ಸ್ಪರ್ಧೆ ಮಾಡ್ತೇನೆ ಎಂದರು.
ಯುವ ನಾಯಕ ಅಂತ ಬಿಂಬಿತ ವಾಗದಿದ್ದರೂ ನನ್ನ ನಾಯಕತ್ವವನ್ನು ಜನ ಗುರುತಿಸಿದ್ದಾರೆ. ಕೆಟ್ಟ ಘಳಿಗೆಯಲ್ಲಿ ಸೂಟ್‌ಕೇಸ್ ಸಂಸ್ಕೃತಿ ಬಗ್ಗೆ ಪ್ರಸ್ತಾಪಿಸಿದ್ದೆ. ಆ ಬಗ್ಗೆ ನನಗೂ ನೋವಿದೆ. ಹೇಳಿಕೆಯಿಂದ ನೊಂದಿದ್ದ ದೇವೇಗೌಡರು ವಿವರಣೆ ಕೊಡುವಂತೆ ನೋಟಿಸ್ ನೀಡಿದ್ದರು.
ಅದರಂತೆ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿಯವರಿಗೆ ಲಿಖೀತವಾಗಿ ಸ್ಪಷ್ಟನೆ ನೀಡಿದ್ದೇನೆ. ನನ್ನ ಆ ಮಾತುಗಳಿಂದ ಯಾರಿ ಗಾದರೂ ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಮಾತ್ರ ರೈತರಿಗೆ, ಯುವಕರಿಗೆ ಒಳ್ಳೆಯದಾಗುತ್ತದೆ ಎಂದ ಅವರು, ರಾಜಕೀಯವಾಗಿ ಅನುಭವ ಕಡಿಮೆ ಇದ್ದರೂ ಉತ್ಸಾಹ ಇದೆ ಎಂದು ಹೇಳಿದರು. ಹುಟ್ಟುಹಬ್ಬಕ್ಕೆ ತಾತ ದೇವೇಗೌಡರು, ಚಿಕ್ಕಪ್ಪ ಕುಮಾರಸ್ವಾಮಿ, ಚಿಕ್ಕಮ್ಮ ಅನಿತಾ, ನಿಖೀಲ್ ಕರೆ ಮಾಡಿ ಶುಭ ಕೋರಿದ್ದಾರೆ ಎಂದು ಹೇಳಿದರು.
ಎಚ್‌ಡಿಕೆ ವಿಶ್ರಾಂತಿ: ನಿರಂತರ ಪ್ರವಾಸದಿಂದ ಬಳಲಿರುವ ಎಚ್.ಡಿ. ಕುಮಾರಸ್ವಾಮಿ ವಿಶ್ರಾಂತಿಗೆ ಮೊರೆ ಹೋಗಿದ್ದು, ಹತ್ತು ದಿನ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಐದಾರು ದಿನ ಖಾಸಗಿ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿರುವ ಕುಮಾರಸ್ವಾಮಿ ನಂತರ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಕುಮಾರ ಸ್ವಾಮಿ ಆರೋಗ್ಯ ತಪಾಸಣೆಗಾಗಿ ಸಿಂಗಪುರಕ್ಕೂ ಹೋಗಿ ಬಂದಿದ್ದರು.