ಹರಿಹರ: ದೇಶದಲ್ಲಿ ಹಿಂದುತ್ವಕ್ಕೆ, ಹಿಂದೂಗಳಿಗೆ ಕಂಟಕ ಬಂದಾಗೆಲ್ಲಾ ಗಣೇಶ ಬೀದಿಗೆ ಬಂದು ನಮ್ಮನ್ನು ರಕ್ಷಣೆ ಮಾಡುತ್ತಾನೆ ಎಂದು ಚೈತ್ರಾ ಕುಂದಾಪುರ ಹೇಳಿದರು.
ನಗರದ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಮಾತನಾಡಿದ ಅವರು, ಮೊಘಲರ ಕಾಲದಲ್ಲಿ ಶಿವಾಜಿ, ಸ್ವಾತಂತ್ರ್ಯ ಹೋರಾಟದ ವೇಳೆ ಬಾಲಗಂಗಾಧರ್ ತಿಲಕ್, ಸಾವರ್ಕರ್ ಹಿಂದೂಗಳನ್ನು ಒಗ್ಗೂಡಿಸಲು ಗಣೇಶೋತ್ಸವ ಆಚರಿಸುತ್ತಿದ್ದರು. ಈಗ ಹಿಂದೂ ಮಹಾಗಣಪತಿ ಉತ್ಸವದ ಮೂಲಕ ಜಾತಿಗಳನ್ನು ಬದಿಗೊತ್ತಿ ಸಮಸ್ತ ಹಿಂದೂಗಳನ್ನು ಒಗ್ಗೂಡಿಸಲಾಗುತ್ತಿದೆ ಎಂದರು.
ನಮ್ಮ ಪರಂಪರೆ, ಧರ್ಮ, ಗೋಮಾತೆ ಮತ್ತು ಹೆಣ್ಣುಮಕ್ಕಳ ರಕ್ಷಣೆಗಾಗಿ ಮತ್ತೂಮ್ಮೆ ನಾವು ಸ್ವಾತಂತ್ರ್ಯ ಹೋರಾಟ ಮಾಡುವ ಪರಿಸ್ಥಿತಿ ಈ ದೇಶಕ್ಕೆ ಬಂದಿದೆ. ದೇಶದೊಳಗಿರುವ ಆರಬ್ಬಿ ಮತ್ತು ಬ್ರಿಟಿಷ್ ಮನಸ್ಥಿತಿಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಕತ್ತಿ ಕುತ್ತಿಗೆಯ ಹತ್ತಿರ ಬಂದಾಗ ಜಾತಿ, ವರ್ಗ, ಪಕ್ಷ ನೋಡುವುದಿಲ್ಲ, ಸೀಳುವುದೊಂದೆ ಕೆಲಸ. ಹಿಂದೂಗಳು ಜಾಗೃತರಾಗದಿದ್ದರೆ ಅನಾಹುತವಾಗುತ್ತದೆ. ಆದ್ದರಿಂದ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಆಶೀರ್ವಚನ ನೀಡಿ, ಇತಿಹಾಸ ಓದದವ ಎಂದಿಗೂ ಇತಿಹಾಸ ಸೃಷ್ಟಿಸಲಾರ. ಗಣೇಶೋತ್ಸವ ಆಚರಣೆಯ ಮೂಲಕ ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಇತಿಹಾಸ ಕಾಲದಿಂದಲೂ ನಡೆದು ಬಂದಿದೆ. ಯುವ ಪೀಳಿಗೆಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ಸ್ವಾಭಿಮಾನ, ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಉತ್ಸವ ಸಮಿತಿಯ ರಟ್ಟಿಹಳ್ಳಿ ಮಂಜುನಾಥ್, ಸ್ವಾತಿ ಹನು ಮಂತಪ್ಪ, ಎಚ್. ದಿನೇಶ್, ಬಸವನ ಗೌಡ, ನಗರಸಭಾ ಸದಸ್ಯ ಎ.ಬಿ. ವಿಜಯ ಕುಮಾರ್, ರಾಘವೇಂದ್ರ ಉಪಾ ಧ್ಯಾಯ, ಅಜಿತ್ ಸಾವಂತ್, ಮಹೇಶ್, ವಾಸು ಚಂದಾಪೂರ, ಕಾರ್ತಿಕ್, ಸುನೀಲ್‌ಕುಮಾರ್, ಮಲ್ಲಿಕಾರ್ಜುನ ಇತರರಿದ್ದರು.