Advertisement

6 ತಿಂಗಳಲ್ಲಿ ಸರ್ಕಾರ ಸಮಸ್ಯೆ ಬಗೆಹರಿಸದಿದ್ದರೆ ಬೃಹತ್ ಸಮಾವೇಶ: ಜಯಮೃತ್ಯುಂಜಯ ಸ್ವಾಮೀಜಿ

12:36 PM Mar 17, 2021 | Team Udayavani |

ಬೆಂಗಳೂರು: ಕೂಡಲ ಸಂಗಮದಿಂದ ಸಂಕ್ರಾಂತಿ ದಿನ ಆರಂಭಿಸಿ 39 ದಿನಗಳ ಹೋರಾಟ ಯಶಸ್ವಿಯಾಗಿ ತಲುಪಿದೆ. ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ ಆರು ತಿಂಗಳಲ್ಲಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದ್ದಾರೆ.  ರಾಜ್ಯದ ಇತಿಹಾಸದಲ್ಲಿ ಸದನದಲ್ಲಿ ಸರ್ಕಾರ, ನಮ್ಮ ಸಮುದಾಯದ ಪರವಾಗಿ ಮಾತು ಕೊಟ್ಟಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Advertisement

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಂಚಮಸಾಲಿ ಪೀಠದ ಸ್ವಾಮೀಜಿ, ಸಿಎಂ ನಮ್ಮ ವಾಸ ಸ್ಥಳಕ್ಕೆ ಬಂದು ಭರವಸೆ ನೀಡುವುದಾಗಿ ಹೇಳಿದ್ದರು.  ನಾವು ವಿಧಾನಸಭೆಯಲ್ಲಿಯೇ ಮಾತು ಕೊಡಬೇಕು ಎಂದು ಹೇಳಿದ್ದೆವು. ಅದರಂತೆ ಸರ್ಕಾರ ಆರು ತಿಂಗಳು ಭರವಸೆ ನೀಡಿದೆ. ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೂ ರಾಜ್ಯ ಪ್ರವಾಸ ಕೈಗೊಂಡು ಜನಜಾಗೃತಿ ಮೂಡಿಸುತ್ತೇವೆ.

ಇದನ್ನೂ ಓದಿ:  ಪ್ಲ್ಯಾಸ್ಟಿಕ್ ನೀತಿ ಬೆಂಬಲಿಸಿ : ಹ್ಯಾರಿಸ್ ಗೆ ಭಾರತಿಯ ಅಮೇರಿಕನ್ ಮಹಿಳಾ ಉದ್ಯಮಿಗಳ ಮನವಿ   

ಸೆಪ್ಟೆಂಬರ್ 15ಕ್ಕೆ ಸರ್ಕಾರ ಆದೇಶ ನೀಡದಿದ್ದರೆ, ಅಕ್ಟೋಬರ್ 15 ರಿಂದ ಮತ್ತೆ ವಿಶ್ಬ ಪಂಚಮಸಾಲಿ ಸಮುದಾಯದ ಹೋರಾಟವನ್ನು 20 ಲಕ್ಷ ಜನ ಸೇರಿ ಬೃಹತ್ ಸಮಾವೇಶ ನಡೆಸಲಾಗುವುದು. ಮಾರ್ಚ್ 23 ರಿಂದ ಬೆಂಗಳೂರಿನಿಂದ ಕೂಡಲಸಂಗಮಕ್ಕೆ ಶರಣು ಶರಣಾರ್ಥಿ ಯಾತ್ರೆ ಕೈಗೊಳ್ಳಲಾಗುವುದು.

Advertisement

ರಾವ್ ಬಹದ್ದೂರು ಅರಟಾಳ್ ರುದ್ರಗೌಡ ಅವರ ಜಯಂತಿ ಮಾರ್ಚ್ 23 ರಂದು ಇದೆ. ಅವರು ಉತ್ತರ ಕರ್ನಾಟಕದ ಅಕ್ಷರ ಗೌಡ ಎಂದೇ ಪ್ರಸಿದ್ಧರಾಗಿದ್ದಾರೆ. ಅವರ ಜಯಂತಿಯನ್ನು ಬೆಂಗಳೂರಿನಲ್ಲಿ ಆವರಿಸುವ ಮೂಲಕ ಶರಣು ಶರಣಾರ್ಥಿ ಯಾತ್ರೆ ಆರಂಭಿಸುತ್ತೇವೆ. ನಮ್ಮ ಪಾದಯಾತ್ರೆಗೆ ಬೆಂಬಲ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಶರಣು ಶರಣಾರ್ಥಿ ಹೇಳಿ ಹೇಳುತ್ತೇವೆ. ಏಪ್ರಿಲ್ 11 ರಂದು ಕೂಡಲ ಸಂಗಮದಲ್ಲಿ ಯಾತ್ರೆ ಅಂತ್ಯಗೊಳಿಸಲಾಗುವುದು.

ಮೀಸಲಾತಿ ಆದೇಶ ಬರುವವರೆಗೂ ಪೀಠಕ್ಕೆ ಮರಳಬಾರದು ಎಂದು ತೀರ್ಮಾನಿಸಿದ್ದೆ, ಆದರೆ, ಆರು ತಿಂಗಳು ಹೊರಗೆ ಇರುವ ಬದಲು ಸಮಾಜದಲ್ಲಿ. ಜಾಗೃತಿ ಮೂಡಿಸಲು ಪೀಠಕ್ಕೆ ತೆರಳಬೇಕು ಎಂದು ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ಪೀಠಕ್ಕೆ ತೆರಳಿ ಸಮುದಾಯದ.ಜನರಿಗೆ ಜಾಗೃತಿ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:  ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯಗಳು GST ಪರಿಹಾರದ ಕೊರತೆ ಎದುರಿಸಲಿವೆಯೇ..!? : ವರದಿ

ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಪಂಚಮಸಾಲಿ ಸಮುದಾಯದ 62 ದಿನಗಳ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಆರು ತಿಂಗಳ ಭರವಸೆ ನೀಡಿದೆ. ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ನೇತೃತ್ವದಲ್ಲಿ ಸದನದಲ್ಲಿ ನಡೆದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಸೆಪ್ಟಂಬರ್ 15 ಕ್ಕ ಮೀಸಲಾತಿ ನೀಡದಿದ್ದರೆ 20 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು.

ಈ ಹೋರಾಟ ಯಶಸ್ವಿಯಾಗಲು ಸಹಕಾರ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿ.ಸಿ ಪಾಟೀಲ್, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಧನ್ಯವಾದ ಅರ್ಪಿಸಲಾಗುವುದು. ಮಾರ್ಚ್ 22 ರಂದು ಹಿಂದುಳಿದ ವರ್ಗಗಳ ಆಯೋಗದ ಮುಂದೆ ಹಾಜರಾಗಿ ನಮ್ಮ ದಾಖಲೆಗಳನ್ನು ಸಲ್ಲಿಸುತ್ತೆವೆ. ವಿಚಾರಣೆ ಹಾಜರಾಗಲು ನನಗೆ ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಮಾತ್ರ ಇದೆ. ಬೇರೆಯವರಿಗೆ ಹಾಜರಾಗಲು ಅವಕಾಶ  ನೀಡಲಾಗಿದೆ ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ. ನಮ್ಮ ಹೋರಾಟವನ್ನು ಸ್ಥಗಿತಗೊಳಿಸಲು ನಮ್ಮವರೇ ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಜನರ ಬೆಂಬಲ ಇದ್ದದ್ದರಿಂದ ಅದು ಯಶಸ್ವಿಯಾಗಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಉಪಚುನಾವಣೆ : ಲೋಕಸಭೆಗೆ ಜೆಡಿಎಸ್‌ ಡೌಟು: ವಿಧಾನಸಭೆ ಸ್ಪರ್ಧೆಗೆ ರೆಡಿ?

Advertisement

Udayavani is now on Telegram. Click here to join our channel and stay updated with the latest news.

Next