Advertisement
ನಿವೇಶನ ರಹಿತರ ಹೋರಾಟ ಸಮಿತಿ ವತಿಯಿಂದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾಲಿಕೆ ಮುಂಭಾಧಿಗಧಿದಲ್ಲಿ ಸೋಮವಾರದಿಂದ ಆರಂಭಗೊಂಡ ಅಹೋರಾತ್ರಿ ಅನಿರ್ದಿಷ್ಟಾವಧಿ ಚಳವಳಿಯನ್ನುದ್ದೇಶಿಸಿ ಮಾತನಾಡಿದರು. ಪಾಲಿಕೆಯು ಹಲವು ಕಾರಣಗಳನ್ನು ನೀಡಿ ನಿವೇಶನ ರಹಿತರಿಂದ ಎರಡೆರಡು ಬಾರಿ ಅರ್ಜಿ ಸ್ವೀಕರಿಸಿದೆ. ಆದರೆ ಪಾಲಿಕೆಯ ನಿವೇಶನ ರಹಿತರ ಪಟ್ಟಿ ನೋಡಿದರೆ ಅದರಲ್ಲಿ ಅನರ್ಹರನ್ನು ಕೂಡ ಸೇರಿಸಲಾಗಿದೆ. ಶಾಸಕರು ಅವರಿಗೆ ಬೇಕಾದವರ ಹೆಸರನ್ನು ಸೇರಿಸಿಕೊಂಡಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶಕ್ತಿನಗರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿ ವತಿಯಿಂದ 2014ರಿಂದ ಮನವಿ ನೀಡಿ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಬೆಂಗಳೂರು ಚಲೋ, ಸುರತ್ಕಲ್ ಚಲೋವನ್ನೂ ಮಾಡಿದ್ದೇವೆ. 2015ರಲ್ಲಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ 18 ತಿಂಗಳಲ್ಲಿ ನಿವೇಶನ ಕೊಡುತ್ತೇವೆ ಎಂದು ಭರಧಿವಸೆ ನೀಡಿದ್ದರು. ಆದರೆ ಈತನಕ ನಿವೇಶನ ಸಿಕ್ಕಿಲ್ಲ. ಶಕ್ತಿನಗರ, ಇಡ್ಯಾದಲ್ಲಿ ಮೀಸಲಿಟ್ಟ ಜಾಗದಲ್ಲಿ ಮನೆ ನಿರ್ಮಿಸುವ ದಿನಾಂಕವನ್ನು ಲಿಖೀತ ರೂಪದಲ್ಲಿ ನೀಡಬೇಕು. ನಿವೇಶನ ರಹಿತರ ಪಟ್ಟಿಯ 2000 ಮಂದಿಯಲ್ಲಿ ಅನರ್ಹರನ್ನು ಕೈಬಿಡಬೇಕು. ಕಣ್ಣಗುಡ್ಡೆಯ 11.25 ಎಕರೆ ಜಾಗಕ್ಕೆ ಅರ್ಹರನ್ನು ಶೀಘ್ರ ಆಯ್ಕೆ ಮಾಡಬೇಕು. ಸಮಿತಿಯ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು. ಮುಷ್ಕರದಲ್ಲಿ ಸಿಪಿಐಎಂನ ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್, ನಗರ ಉತ್ತರ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕೊಂಚಾಡಿ, ಹೋರಾಟ ಸಮಿತಿ ಅಧ್ಯಕ್ಷ ಪ್ರೇಮನಾಥ ಜಲ್ಲಿಗುಡ್ಡೆ, ಖಜಾಂಚಿ ಪ್ರಭಾವತಿ ಬೋಳೂರು ಭಾಗವಹಿಸಿದ್ದರು.