ಕೆ.ಆರ್.ನಗರ: ಕೇಂದ್ರ ಸರ್ಕಾರವು ಕೇಬಲ್ ಚಾನೆಲ್‌ಗಳ ಬೆಲೆ ನಿಗದಿಪಡಿಸಿದ್ದು, ಸೆಟ್‌ಆಪ್ ಬಾಕ್ಸ್‌ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೆಲವರು ಅಪಪ್ರಚಾರ ಮಾಡುತಿದು, ಕೇಬಲ್ ಗ್ರಾಹಕರು ಇದಕ್ಕೆ ಕಿವಿಗೊಡಬಾರದು ಎಂದು ಈ ಡಿಜಿಟಲ್ ಕೇಬಲ್ ಸಂಸ್ಥೆ ನಿರ್ದೇಶಕ ಶ್ರೀನಿವಾಸ್‌ಮೂರ್ತಿ ಮನವಿ ಮಾಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೇಬಲ್ ಚಾನಲ್‌ಗಳ ಬೆಲೆ ನಿಗದಿ ಮಾಡಿದೆ. ಇದನ್ನೇ ದುರುಪಯೊಗ ಪಡಿಸಿಕೊಂಡು ಕೆಲವರು ಕೇಬಲ್ ಗ್ರಾಹಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅಂತಹವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೇಬಲ್ ಟೀವಿಯಲ್ಲಿ ನೂರು ಚಾನೆಲ್‌ಗಳು ಉಚಿತವಾಗಿದ್ದು, ಉಳಿದ ಚಾನೆಲ್‌ಗಳಿಗೆ ಬೆಲೆ ನಿಗದಿಯಾಗಿದೆ. ನಮ್ಮ ಗ್ರಾಹಕರು ಈ ಬಗ್ಗೆ ಹತ್ತಿರದ ಕೇಬಲ್ ಕಚೇರಿಗೆ ಬಂದು ಸಂಪೂರ್ಣ ಮಾಹಿತಿ ಪಡೆದು ತಮಗೆ ಬೇಕಾದ ಚಾನೆಲ್‌ಗಳ ವಿವರವನ್ನು ಸಂಸ್ಥೆಯಲ್ಲಿ ನೀಡುವ ಅರ್ಜಿಯಲ್ಲಿ ಭರ್ತಿಮಾಡಿ ಕೊಟ್ಟಲ್ಲಿ ನಿಮಗೆ ಬೇಕಾದ ಚಾನಲ್‌ಗಳು ಲಭ್ಯವಾಗಲಿವೆ ಎಂದರು.
ಕೆಲ ಕಿಡಿಗೇಡಿಗಳ ಮಾತಿಗೆ ಗ್ರಾಹಕರು ಕಿವಿಗೊಡುವುದು ಬೇಡ. ನಿಮ್ಮ ಮನೆಯ ಸೆಟ್‌ಆಪ್ ಬಾಕ್ಸ್‌ಗಳನ್ನು ಯವುದೇ ಬದಲಾವಣೆ ಮಾಡುವ ಅವಶ್ಯಕತೆ ಇರುವುದಿಲ್ಲ ಹಾಗೂ ಸೆಟ್‌ಆಪ್ ಬಾಕ್ಸ್‌ಗಳಲ್ಲಿ ಯಾವುದೇ ತಾಂತ್ರಿಕ ತೊಂದರೆ ಉಂಟಾದಲ್ಲಿ ನೇರವಾಗಿ ಕೇಬಲ್ ಕಚೇರಿಗೆ ಭೇಟಿ ನೀಡಿದರೆ ಸರಿಪಡಿಸಿಕೊಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಡಿಜಿಟಲ್ ಕೇಬಲ್ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ್‌ಮೂರ್ತಿ, ಕೇಬಲ್ ಮಂಜು, ಬಾಬುರಾಜ್, ಜಿ.ಆರ್. ಬಾಬು ಉಪಸ್ಥಿತರಿದ್ದರು.