Advertisement

ಕ್ಯಾಸಿನೋ ಜಾರಿಗೆ ತಂದರೆ ಜೂಜಾಟಕ್ಕೆ ಬೆಂಬಲ ನೀಡಿದಂತೆ

11:28 PM Feb 23, 2020 | Lakshmi GovindaRaj |

ಬೀದರ: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಕ್ಯಾಸಿನೋ ಆಟ ಜಾರಿಗೆ ತರುತ್ತೇವೆ ಎಂದರೆ ಸರ್ಕಾರ ಜೂಜಾಟಕ್ಕೆ ಬೆಂಬಲ ನೀಡಿದಂತಾಗುತ್ತದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಸವಕಲ್ಯಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕ್ಯಾಸಿನೋ ಅದೊಂದು ಜೂಜಾಟ. ಶ್ರೀಲಂಕಾ, ಮಲೇಶಿಯಾ ಸೇರಿ ಹಲವು ರಾಷ್ಟ್ರಗಳಲ್ಲಿ ಈ ಆಟ ನಡೆಸಲಾಗುತ್ತದೆ. ಸಚಿವ ಸಿ.ಟಿ.ರವಿ ಆಗಾಗ ಕ್ಯಾಸಿನೋ ಆಡುತ್ತಿರಬೇಕು.

Advertisement

ಅದಕ್ಕೆ ಹೀಗೆಲ್ಲಾ ಹೇಳ್ಳೋದಕ್ಕೆ ಕಾರಣ ಇರಬಹುದು ಎಂದರು. ಹಸಿವು ಮುಕ್ತ ಕರ್ನಾಟಕ ಮಾಡುವ ಉದ್ದೇಶದಿಂದ ಅನ್ನಭಾಗ್ಯದ ಮೂಲಕ 7 ಕೆಜಿ ಉಚಿತ ಅಕ್ಕಿ ವಿತರಿಸುವ ಯೋಜನೆ ಜಾರಿಗೆ ತರಲಾಗಿದೆ. ಅಕ್ಕಿಯಲ್ಲಿ ಕಡಿತ ಮಾಡಿದರೆ ಅಥವಾ ಸ್ಥಗಿತಗೊಳಿಸಿದರೆ ಬಿಜೆಪಿ ಬಡವರ ವಿರೋ ಧಿ ಎನಿಸಿಕೊಳ್ಳಲಿದೆ. ಈ ವಿಷಯದಲ್ಲಿ ಕಾಂಗ್ರೆಸ್‌ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ಬಿಜೆಪಿ ಎಂದಿಗೂ ಶ್ರೀಮಂತರು, ಕೈಗಾರಿಕೋದ್ಯಮಿಗಳ ಪರವಾಗಿದೆ.

ಕೆಳ ವರ್ಗದವರ ಕಲ್ಯಾಣದ ಬಗ್ಗೆ ಚಿಂತನೆ ಮಾಡುವುದಿಲ್ಲ ಎಂದರು. ದೇಶದಲ್ಲಿ ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಕಲ್ಪಿಸುವುದು ಸಂವಿಧಾನದ ಆಶಯ. ಅದನ್ನು ಬಿಟ್ಟು ಬೇರೆಯದನ್ನು ಮಾಡಿದರೆ ಸಂವಿಧಾನ ವಿರೋಧಿ  ಆಗುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ಬಾಹಿರವಾಗಿದೆ. ಈ ಕಾಯ್ದೆ ಕೇವಲ ಮುಸ್ಲಿಂ ಮಾತ್ರವಲ್ಲ ದಲಿತರು, ಆದಿವಾಸಿಗಳು ಮತ್ತು ಹಿಂದೂಗಳಿಗೂ ವಿರೋ ಧಿ ಆಗಿದೆ. ಜಾತಿ-ಧರ್ಮಗಳನ್ನು ವಿಂಗಡಿಸಿ ಅದರ ಮೇಲೆ ಪೌರತ್ವ ಕೊಡಬೇಕೆಂದು ಸಂವಿಧಾನ ಹೇಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next