Advertisement

ಜನಸಂಖ್ಯೆ ದೇಶದ ಸಂಪತ್ತಾಗಬೇಕೆಂದರೆ…

11:10 PM May 16, 2023 | Team Udayavani |

ಜನಸಂಖ್ಯೆಯಲ್ಲಿ ನಾವೀಗ ಚೀನದ 142.57 ಕೋಟಿ ಜನಸಂಖ್ಯೆಯನ್ನು ಹಿಂದಿಕ್ಕಿ 142.86 ಕೋಟಿಗೆ ನೆಗೆದಿದ್ದೇವೆ. ಇದು ಸಾಧನೆಯೋ… ಸವಾಲೋ…? ಈ ಏರಿಕೆಯನ್ನು ಮೊದಲೇ ನಿರೀಕ್ಷಿ ಸಲಾಗಿತ್ತು. ಇದೇ ರೀತಿಯ ಏರಿಕೆ ಮುಂದುವರಿ ಯುತ್ತಾ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ಮುಂದಿನ ಮೂರು ದಶಕದಲ್ಲಿ 165 ಕೋಟಿಗೆ ತಲುಪಿದ ಅನಂತರದ ದಿನಗಳಲ್ಲಿ ಇಳಿಮುಖವೂ ಆಗಲಿದೆ ಎಂದು ಜನಸಂಖ್ಯಾ ಅಧ್ಯಯನದ ವರದಿ ತಿಳಿಸುತ್ತದೆ.

Advertisement

ಜನಸಂಖ್ಯೆ ವರವೋ?, ಶಾಪವೋ? ಎಂಬ ಚರ್ಚಾಗೋಷ್ಠಿಯನ್ನು ಶಾಲೆಗಳಲ್ಲಿ ಏರ್ಪಡಿಸುತ್ತಿದ್ದ ಸಂದರ್ಭಗಳು ನೆನಪಿಗೆ ಬರುತ್ತಿದೆ. ಜನಸಂಖ್ಯೆ ವಿಪತ್ತು ಎಂದೇ ಆಗೆಲ್ಲ ಚರ್ಚೆಯಲ್ಲಿ ಪಾಲ್ಗೊಂಡ ಬಹುತೇಕ ವಿದ್ಯಾರ್ಥಿಗಳು ವಾದ ಮಂಡಿಸುತ್ತಿದ್ದುದೂ ನೆನಪಾಗುತ್ತಿದೆ. ಚರ್ಚೆ, ವಾದಗಳು ಏನೇ ನಡೆದರೂ ಜನಸಂಖ್ಯೆ ಮಾತ್ರ ಏರುಗತಿಯಲ್ಲೇ ಸಾಗಿದೆ.

ಜನಸಂಖ್ಯೆಗೆ ಸಂಬಂಧಿಸಿದಂತೆ ಸಾಕಷ್ಟು ಅಂಕಿ ಅಂಶಗಳು ನಮ್ಮ ಮುಂದಿವೆ. ಈ ಸಂಬಂಧವಾಗಿ ನಿರಂತರವಾಗಿ ಸಾಮಾಜಿಕ ಜನಜಾಗೃತಿ, ಶಾಲಾ ಕಾಲೇಜುಗಳಲ್ಲಿ ಮಾಹಿತಿ ಕಾರ್ಯಕ್ರಮ ಮತ್ತು ಜಾಗೃತಿಗಾಗಿ ಚಟುವಟಿಕೆಗಳೂ ನಡೆಯುತ್ತಿವೆ. ಪ್ರಾಥ ಮಿಕ ತರಗತಿಯಿಂದ ತೊಡಗಿ ಉನ್ನತ ತರಗತಿ ಗಳವರೆಗೆ ಪಠ್ಯದಲ್ಲೂ ಸೇರಿಸಿ, ಆ ಮೂಲಕ ಜನ ಸಂಖ್ಯಾ ನೀತಿ, ಬೆಳವಣಿಗೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತೀ ತರಗತಿಯಲ್ಲಿ ಬೋಧನೆ ಯನ್ನೂ ಮಾಡಲಾಗುತ್ತಿದೆ. ಆದರೆ ಜನಸಂಖ್ಯೆ ಇಳಿ ಮುಖವಾಗುವಲ್ಲಿ ಎಷ್ಟು ಪರಿಣಾಮ ಬೀರಿದೆ ಎಂಬುದು ಪ್ರಶ್ನಾರ್ಹವೆ. ಏನೇ ಇರಲಿ ಸದ್ಯ ಜನ ಸಂಖ್ಯೆ ವರಕ್ಕಿಂತಲೂ ಶಾಪವೇ ಆಗಿದೆ. ಅದೊಂದು ಜಾಗತಿಕ ಸವಾಲೂ ಹೌದು.

ಜನಸಂಖ್ಯೆ ಇಳಿಮುಖವಾದರೆ ಭವಿಷ್ಯದಲ್ಲಿ ಏನಾದೀತು…ಎಂಬುದು ಊಹೆಯ ಸಂಗತಿ, ಸದ್ಯ ಚೀನದಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲಾ ಗುತ್ತಿರುವ ನಕಾರಾತ್ಮಕ ಪರಿಣಾಮದ ಬಗ್ಗೆ ಉಲ್ಲೇಖಿಸಲ್ಪಟ್ಟು, ಆ ವಿಚಾರಗಳು ಮುನ್ನೆಲೆಗೆ ಬರ ತ್ತಿವೆ. ಏನೇ ಹೇಳಿ ಜನಸಂಖ್ಯೆಯನ್ನೂ ಜಾಗತಿ ಕವಾಗಿ, ರಾಜಕೀಯದ ದಾಳವಾಗಿಸಿಕೊಳ್ಳುತ್ತಿರುವುದು ಮಾತ್ರ ಲಜ್ಜೆಗೇಡಿತನದ ಸಂಗತಿಯಾಗಿದೆ.

ಬದುಕಿನ ಮತ್ತು ಮಾನವತೆಯ ನೆಲೆಯಲ್ಲಿ ಯೋಚಿಸಿದರೆ ಜನಸಂಖ್ಯೆ ಮೂಲಭೂತ ಪ್ರಶ್ನೆ ಯಾಗಿದೆ. ಜನಸಂಖ್ಯೆಯ ವಿಚಾರದಲ್ಲಿ ವ್ಯಕ್ತಿಗತ ಹಿತಾ ಸಕ್ತಿ, ರಾಜಕೀಯ ಲಾಭಬಡುಕತನ, ಧಾರ್ಮಿಕ ನಂಬು ಗೆ ಹಾಗೂ ಅಧಿಕಾರದ ಪ್ರಶ್ನೆ ಬರಬಾರದು. ಸಾಮಾಜಿಕ ವ್ಯವಸ್ಥೆಯಲ್ಲಿ ಸರಕಾರದ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಪ್ರತೀ ಪ್ರಜೆಯದ್ದೂ ಇದೆ. ಹಕ್ಕು ಗಳನ್ನು ಕೇಳುವ ಜನವರ್ಗ ತನ್ನ ಕರ್ತವ್ಯದ ಪರಿಪಾಲನೆಯಲ್ಲಿ ಮೊದಲು ಯೋಚಿಸ ಬೇಕಾಗುತ್ತದೆ.

Advertisement

ಸುಖೀರಾಜ್ಯದ ಕಲ್ಪನೆಯಲ್ಲಿ, ಸಾಮುದಾಯಿಕ ಸ್ವಾಸ್ಥ ಸಾಫ‌ಲ್ಯದಲ್ಲಿ ಸರಕಾರದ ಪಾತ್ರ ನಿರ್ಣಾಯಕ. ಈ ಹಂತದಲ್ಲಿ ರಾಷ್ಟ್ರಧರ್ಮದ ಪ್ರಶ್ನೆಯೇ ಆತ್ಯಂತಿಕ. ಆಗ ಭಾಷೆ , ಸಂಸ್ಕೃತಿ, ಮತ – ಧರ್ಮ ಎನ್ನುವುದು ಒಂದು ರಾಷ್ಟ್ರೀಯ ಪರಿಕಲ್ಪನೆಯೊಳಗೆ ವಿಕಾಸದ ಮತ್ತು ಅಭಿವೃದ್ಧಿಯ ಭಾಗವಾಗುತ್ತದೆಯೇ ಹೊರತು ಪಕ್ಷ, ಪಂಗಡ, ಜಾತಿ, ಮತ, ಧರ್ಮದ ವಿಂಗ ಡಣೆಯ ಪ್ರಶ್ನೆಯೇ ಬರುವುದಿಲ್ಲ. ನನ್ನ ಮತ ಅಥ ವಾ ಧರ್ಮ ಹಾಗೂ ನಂಬುಗೆಗಳು ಸಾಮಾಜಿಕ ವ್ಯವಸ್ಥೆಯ ಭಾಗವೇ ಆಗಬೇಕು. ಹಾಗಾಗಿ ಜನ ಸಂಖ್ಯೆ ನಿಯಂತ್ರಣ ಎನ್ನುವುದು ಕೃತಕವಾದರೂ ಅದು ಪ್ರಜೆಗಳ ಕರ್ತವ್ಯವೂ ಆಗುತ್ತದೆ.

ಜನಸಂಖ್ಯೆಯ ವಿಚಾರದಲ್ಲಿ ಹೇಳುವುದಾದರೆ ಜನನ ನಿಯಂತ್ರಣ ಎನ್ನುವುದು ವೈಯಕ್ತಿಕ ನಂಬು ಗೆ, ಮತ ಧರ್ಮಕ್ಕೆ ಅನುಗುಣವಾಗಿಯೇ ಇರ ಬೇಕು, ಸರಕಾರ ಆ ಬಗ್ಗೆ ಕಾನೂನಾತ್ಮಕ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳುವ ಹಾಗೆಯೇ ಇಲ್ಲ. ಒಂದು ರಾಷ್ಟ್ರವಾಗಿ ಸರಕಾರ ಜನಸಂಖ್ಯಾ ನಿಯಂತ್ರಣಕ್ಕೆ ಏನು ಮಾಡಬೇಕೊ ಅದನ್ನು ಮಾಡಬೇಕು. ಸಂಖ್ಯಾ ನಿಯಂತ್ರಣಕ್ಕೆ ಜನ ಮುಂದಾಗದಿದ್ದರೆ… ಏನು? ಉತ್ತರ ಬಹಳ ಸರಳ ವಿದೆ ಅದೇನೆಂದರೆ; ಏರಿಕೆಯಾಗುವ ಮಂದಿಯ ಯಾವುದೇ ಜವಾಬ್ದಾರಿಗಳ ಹೊಣೆ ಗಾರಿಕೆ ಸರಕಾರದ್ದಾಗಿರದೆ ವೈಯಕ್ತಿಕವಾಗಿ ಅವರವರದ್ದೇ ಆಗಿಬಿಡುತ್ತದೆ. ಆಗ ಸಹಜವಾಗಿ ಸುಖೀ ರಾಜ್ಯದ ಪರಿಕಲ್ಪನೆಯ ಎಲ್ಲ ನಾಗರಿಕ ಸೌಲಭ್ಯಗಳನ್ನು ಮತ್ತು ಹಕ್ಕುಗಳನ್ನು ಪಡೆಯುವ ಹಕ್ಕನ್ನು ಆತ (ಅಥವಾ ಆತನ ಕುಟುಂಬ) ಕಳೆದುಕೊಳ್ಳುತ್ತಾನೆ. ಏಕೆಂದರೆ ರಾಷ್ಟ್ರಧರ್ಮದ ಪಾಲನೆಯ ಎದುರಲ್ಲಿ ವೈಯಕ್ತಿಕ ವಾದವು ಗೌಣ ಮಾತ್ರವಲ್ಲ ಮಾನವ ಹಕ್ಕಿನ ಪ್ರಶ್ನೆಯೂ ಬರುವುದಿಲ್ಲ. ಸಮಾನತೆಯ ನೀತಿಯೇ ಆಡಳಿತವಾಗಬೇಕು.

ಜನಸಂಖ್ಯೆಯಲ್ಲಿ ಜಗತ್ತಿಗೆ ನಾವೇ ಫ‌ಸ್ಟ್‌ ಎನ್ನು ವುದು ಸಂಪತ್ತಾಗಬೇಕಾದರೆ ಅನ್ನವನ್ನು ಉತ್ಪಾದಿಸುವ ಕೈಗಳು ಹೆಚ್ಚಾಗಬೇಕು. ದುರಂತ ವೇನೆಂದರೆ ಅನ್ನ ವನ್ನು ಪಡೆಯಲು ಸಂಪತ್ತು ಸಂಗ್ರಹಿಸುವ ಕೈಗಳು ಹೆಚ್ಚಾಗುವುದೇ ಇಂದಿನ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಪಾರಿಸಾರಿಕ, ಸಾಂಸ್ಕೃತಿಕ ಸಮಸ್ಯೆಗೆ, ಸವಾಲಿಗೆ ಕಾರಣವಾಗಿದೆ.
ಉಣ್ಣುವ ಬಾಯಿಗಳು ಕಡಿಮೆಯಾಗುವುದಿಲ್ಲ. ಆದರೆ ಅದೇ ಉಣ್ಣುವ ಬಾಯಿಗಳು ಅನ್ನದ ಸ್ವಾವಲಂಬಿಯಾಗದಿದ್ದರೆ…? ಜನಸಂಖ್ಯೆ ನಿಯಂ ತ್ರಣಕ್ಕೆ ಬರಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಅನ್ನವನ್ನು ಉತ್ಪಾದಿಸುವ ಕೈಗಳನ್ನು ಹೆಚ್ಚು ಮಾಡಲು ಜಾಗೃತಿಗೊಳಿಸುವ ಮತ್ತು ಶಿಕ್ಷಣ ನೀಡುವ ವ್ಯವಸ್ಥೆ ಬರಬೇಕು. ನಮ್ಮ ನಾಶಕ್ಕೆ ಯಾವ ಬಾಂಬೂ ಬೇಡ. ಭವಿಷ್ಯದಲ್ಲಿ ಜನಸಂಖ್ಯೆಯೇ ಬಾಂಬಾಗುತ್ತದೆ. ಜನಸಂಖ್ಯೆಯಲ್ಲಿ ನಾವೇ ಫ‌ಸ್ಟ್‌…ಎಂಬ ಸುದ್ದಿ ನವ ಚಿಂತನೆಗೆ ಮಾತ್ರವಲ್ಲದೆ ಹೊಸ ಸುದ್ದಿಗೆ ಕಾರಣವಾಗಬೇಕು. ಅದೇನೆಂದರೆ; ಅನ್ನ ನೀಡುವ ಅಥವಾ ಉತ್ಪಾದಿಸುವ ಕೈಗಳಲ್ಲೂ ನಾವೇ ಫ‌ಸ್ಟ್‌ ಎಂದಾಗಬೇಕು.

ಸ್ವಾವಲಂಬನೆ ಅತ್ಯವಶ್ಯ
ಜನಸಂಖ್ಯಾ ಹೆಚ್ಚಳ ಯಾವುದೇ ದೇಶಕ್ಕೂ ಒಂದು ಸವಾಲೇ ಸರಿ. ಜನಸಂಖ್ಯೆ ನಿಯಂತ್ರಣದ ಕುರಿತಂತೆ ಕಳೆದ ಹಲವಾರು ದಶಕಗಳಿಂದ ಚರ್ಚೆಗಳು ನಡೆಯುತ್ತಲೇ ಬಂದಿವೆ. ಒಂದಷ್ಟು ದೇಶಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ ಕಠಿನ ಕಾನೂನು ಕ್ರಮಗಳನ್ನು ಜಾರಿಗೊಳಿಸಿ ಈ ಸವಾಲನ್ನೇನೊ ಸಮರ್ಥವಾಗಿ ಎದುರಿಸಿವೆ. ಆದರೆ ಈ ದೇಶಗಳು ಈಗ ಯುವಸಂಪನ್ಮೂಲದ ಕೊರತೆಯಂಥ ಗಂಭೀರ ಸಂಕಷ್ಟವನ್ನು ಎದುರಿಸಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿವೆ. ಅದೇನೇ ಇರಲಿ, ಜನಸಂಖ್ಯೆ ಇತಿಮಿತಿಯೊಳಗೆ ಇದ್ದರೇನೇ ಒಳಿತು. ಎಲ್ಲದಕ್ಕಿಂತ ಮಿಗಿಲಾಗಿ ಜನರು ಸ್ವಾವಲಂಬಿಗಳಾಗಿದ್ದಲ್ಲಿ ದೇಶಕ್ಕೆ ಅದಕ್ಕಿಂತ ದೊಡ್ಡ ಸಂಪನ್ಮೂಲ ಬೇರೊಂದಿಲ್ಲ. ಹೀಗಾಗಬೇಕಾದರೆ ದುಡಿಮೆ ಅತ್ಯವಶ್ಯ. ಪ್ರತಿಯೊಂದೂ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧ್ಯವಾದರೆ ಜನಸಂಖ್ಯೆ ದೇಶದ ಮಟ್ಟಿಗೆ ದೊಡ್ಡ ಸವಾಲೇನೂ ಆಗಲಾರದು.

ರಾಮಕೃಷ್ಣ ಭಟ್‌ ಚೊಕ್ಕಾಡಿ, ಬೆಳಾಲು

Advertisement

Udayavani is now on Telegram. Click here to join our channel and stay updated with the latest news.

Next