Advertisement

ಪಟೇಲ್‌ ಮೊದಲ ಪ್ರಧಾನಿಯಾಗಿದ್ದರೆ ರೈತರ ಸ್ಥಿತಿ ಸುಧಾರಿಸುತ್ತಿತ್ತು

06:00 AM Nov 25, 2018 | Team Udayavani |

ಭೋಪಾಲ್‌/ಹೊಸದಿಲ್ಲಿ: “ಸರ್ದಾರ್‌ ಪಟೇಲ್‌ ಅವರು ದೇಶದ ಮೊದಲ ಪ್ರಧಾನ ಮಂತ್ರಿಯೇನಾದರೂ ಆಗಿದ್ದರೆ, ಅನ್ನದಾತರ ಪರಿಸ್ಥಿತಿಯು ಉತ್ತಮವಾಗಿರುತ್ತಿತ್ತು.’

Advertisement

ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಮಧ್ಯಪ್ರದೇಶದ ಮಾಂಡ್‌ಸರ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಸರ್ದಾರ್‌ ಪಟೇಲ್‌ ಅವರು ರೈತರ ನೈಜ ನಾಯಕ. ಅನ್ನದಾತರ ಕಲ್ಯಾಣ ಹಾಗೂ ಸಬಲೀಕರಣಕ್ಕಾಗಿ ಅವರು ದುಡಿದಿದ್ದರು. ಅವರೇನಾದರೂ ಮೊದಲ ಪ್ರಧಾನಿಯಾಗಿ ದ್ದರೆ, ದೇಶದ ರೈತರು ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ ಎಂದಿದ್ದಾರೆ. ಜತೆಗೆ, ಕಾಂಗ್ರೆಸ್‌ನ ಅಕ್ರಮಗಳು ಹಾಗೂ ತಪ್ಪು ನೀತಿಗಳಿಂದಾಗಿ ಈ ತಲೆಮಾರಿನ ರೈತರು ಕಷ್ಟ ಪಡುತ್ತಿದ್ದಾರೆ. ಅವರು ಮಾಡಿದ ತಪ್ಪಿನಿಂದಾಗಿ ನಮ್ಮ ಸರ್ಕಾರಗಳೂ ಕೆಟ್ಟ ಹೆಸರು ಪಡೆಯುತ್ತಿವೆ. ಕಾಂಗ್ರೆಸ್‌ ರೈತ ರನ್ನು ಸಾಲಗಾರರನ್ನಾಗಿಸಿ, ಅಸಹಾಯಕರ ನ್ನಾಗಿ ಮಾಡಿದೆ. ಆದರೆ ನಾವು ಅವರನ್ನು ಸಬಲೀಕರಣ ಮಾಡುತ್ತಿದ್ದೇವೆ ಎಂದೂ ಮೋದಿ ಹೇಳಿದ್ದಾರೆ.

ಇದೇ ವೇಳೆ, ಗುಜರಾತ್‌ಗೆ ಭೇಟಿ ನೀಡಿ ಸರ್ದಾರ್‌ ಪಟೇಲರ ಏಕತಾ ಪ್ರತಿಮೆಯನ್ನು ವೀಕ್ಷಿಸುವಂತೆ ಮಾಂಡ್‌ಸರ್‌ ರೈತರಿಗೆ ಆಹ್ವಾನವನ್ನೂ ನೀಡಿದ್ದಾರೆ.

ನನ್ನ ತಾಯಿಯನ್ನು ಎಳೆದುತರಬೇಡಿ: ರುಪಾಯಿ ಮೌಲ್ಯಕ್ಕೂ ಪ್ರಧಾನಿ ಮೋದಿ ಅವರ ತಾಯಿಯ ವಯಸ್ಸಿಗೂ ಹೋಲಿಕೆ ಮಾಡುವ ಮೂಲಕ ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕ ರಾಜ್‌ಬಬ್ಬರ್‌ಗೆ ಪ್ರಧಾನಿ ಮೋದಿ ಛತಾರ್‌ಪುರ ರ್ಯಾಲಿಯಲ್ಲಿ ತಿರುಗೇಟು ನೀಡಿದ್ದಾರೆ. “ನನ್ನನ್ನು ಎದುರಿಸ ಲಾಗದ ಕಾಂಗ್ರೆಸ್‌, ನನ್ನ ತಾಯಿಯ ಹೆಸರನ್ನು ಎಳೆದುತರುತ್ತಿದೆ. ಅವರಿಗೆ ನನ್ನ ವಿರುದ್ಧ ಏನೂ ಮಾತನಾಡಲು ಸಿಗುತ್ತಿಲ್ಲ. ಸುಖಾಸುಮ್ಮನೆ ನನ್ನ ಅಮ್ಮನ ಹೆಸರನ್ನು ರಾಜಕೀಯಕ್ಕೆ ಎಳೆಯಬೇಡಿ’ ಎಂದು ಮೋದಿ ಹೇಳಿದ್ದಾರೆ.

ಜೋಷಿಗೆ ನೋಟಿಸ್‌: ಈ ನಡುವೆ, ಜಾತಿ ವಾದಿ ಹೇಳಿಕೆ ನೀಡುವ ಮೂಲಕ ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿದ ಕಾಂಗ್ರೆಸ್‌ ಹಿರಿಯ ನಾಯಕ ಸಿ.ಪಿ.ಜೋಷಿಗೆ ಶನಿವಾರ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದೆ. ನೀತಿ ಸಂಹಿತೆ ಉಲ್ಲಂಘನೆ ಕುರಿತು ಬಿಜೆಪಿ ದೂರು ನೀಡಿದ ಹಿನ್ನೆಲೆಯಲ್ಲಿ ಈ ನೋಟಿಸ್‌ ಜಾರಿ ಮಾಡಲಾಗಿದೆ.

Advertisement

ಮೋದಿಯಿಂದ ದ್ರೋಹ: ಮಧ್ಯಪ್ರದೇಶದ ಸಾಗರ್‌ನಲ್ಲಿ ಶನಿವಾರ ರ್ಯಾಲಿ ನಡೆಸಿದ ರಾಹುಲ್‌ ಗಾಂಧಿ, “ಯುವಕರಿಗೆ ಉದ್ಯೋಗ ಕಲ್ಪಿಸುವುದಾಗಿ, ಜನರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಠೇವಣಿ ಇಡುವುದಾಗಿ ಸುಳ್ಳು ಆಶ್ವಾ ಸನೆ ನೀಡುವ ಮೂಲಕ ಪ್ರಧಾನಿ ಮೋದಿ ಜನರಿಗೆ ದ್ರೋಹ ಬಗೆದಿದ್ದಾರೆ’ ಎಂದು ಆರೋಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next