Advertisement

Pakistan ಟಿ20 ವಿಶ್ವಕಪ್‌ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್‌ ಬಹುಮಾನ

12:21 AM May 07, 2024 | Team Udayavani |

ಲಾಹೋರ್‌: ಅಮೆರಿಕದಲ್ಲಿ ಮುಂದಿನ ಜೂನ್‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಒಂದು ವೇಳೆ ಪಾಕಿಸ್ಥಾನ ತಂಡವು ಪ್ರಶಸ್ತಿ ಗೆದ್ದರೆ ತಂಡದ ಪ್ರತಿ ಆಟಗಾರರಿಗೆ ತಲಾ ಒಂದು ಲಕ್ಷ ಡಾಲರ್‌ ಬಹು ಮಾನ ನೀಡಲಾಗುವುದು ಎಂದು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಘೋಷಿಸಿದೆ.

Advertisement

ಟಿ20 ಸರಣಿಗಾಗಿ ಐರ್ಲೆಂಡ್‌ಗೆ ನಿರ್ಗಮಿಸುವ ಮೊದಲು ಆಟಗಾರರ ಜತೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖೀÌ ಸುದೀರ್ಘ‌ ಎರಡು ತಾಸು ಚರ್ಚಿಸಿದ ಬಳಿಕ ಬಹುಮಾನ ಘೋಷಿಸಿದ್ದರು. ಈ ವೇಳೆ ಮಾತನಾಡಿದ ಅವರು ಟ್ರೋಫಿ ಎತ್ತಿ ಹಿಡಿಯುವುದಕ್ಕಿಂತ ಬಹುಮಾನ ಮೊತ್ತವು ಅತೀ ಮುಖ್ಯವೆಂದು ಕಾಣುವುದಿಲ್ಲ. ತಂಡವು ಪಾಕಿಸ್ಥಾನ ಧ್ವಜವನ್ನು ಎತ್ತರಕ್ಕೆ ಹಾರಿಸುವ ವಿಶ್ವಾಸ ವಿದೆ ಎಂದವರು ಹೇಳಿದರು.

ಪಾಕಿಸ್ಥಾನಕ್ಕಾಗಿ ಆಡಿ. ಒಂದು ತಂಡ ವಾಗಿ ಪ್ರದರ್ಶನ ನೀಡಿ, ದೇವರ ದಯೆಯಿಂದ ಗೆಲುವು ತಮ್ಮದಾಗಿಸಿ ಕೊಳ್ಳಿ, ದೇಶದ ಕ್ರಿಕೆಟ್‌ ಅಭಿಮಾನಿಗಳು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆಗಳನ್ನು ಪೂರ್ತಿಗೊಳಇಸಿ ಎಂದ ವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next