Advertisement

ಪಾಕ್ ವಿಶ್ವಕಪ್ ಗೆದ್ದರೆ 2048 ರಲ್ಲಿ ಪ್ರಧಾನಿ ಯಾರು?: ಗವಾಸ್ಕರ್ ಹೇಳಿದ್ದೇನು

01:40 PM Nov 12, 2022 | Team Udayavani |

ಮೆಲ್ಬರ್ನ್ : ಈ ಬಾರಿಯ ಟಿ20 ವಿಶ್ವಕಪ್ ಪಾಕಿಸ್ಥಾನ ಗೆದ್ದರೆ ಬಾಬರ್ ಅಜಮ್ ಅವರು 2048 ರಲ್ಲಿ ಪಾಕಿಸ್ಥಾನದ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ.

Advertisement

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ಥಾನ ತಂಡವು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ಅಡಿಲೇಡ್ ಓವಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ಮೊದಲು, ಗವಾಸ್ಕರ್ ಅವರು ಪಾಕಿಸ್ಥಾನವು ಪ್ರಶಸ್ತಿಯನ್ನು ಗೆದ್ದರೆ, ಬಾಬರ್ ಅಜಮ್ 2048 ರಲ್ಲಿ ಪಾಕ್ ನ ಪ್ರಧಾನ ಮಂತ್ರಿಯಾಗುತ್ತಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಹೇಳಿದ್ದರು.

1992 ರಲ್ಲಿ ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ಥಾನ ಗೆದ್ದಿತ್ತು. ಆ ಬಳಿಕ ರಾಜಕೀಯ ಪ್ರವೇಶಿದ್ದ ಅವರು ಪ್ರಧಾನಿಯಾಗಿದ್ದರು. ಇದೀಗ, ಎರಡು ವಿಶ್ವಕಪ್ ಅಭಿಯಾನಗಳ ನಡುವಿನ ಹೋಲಿಕೆಯ ಬಗ್ಗೆ ಅನೇಕ ಮೀಮ್‌ಗಳು ಮತ್ತು ಜೋಕ್‌ಗಳು ಹರಿದಾಡುತ್ತಿದ್ದು, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮಾಡಿದ ಕಾಮೆಂಟ್ ಎಲ್ಲರಲ್ಲೂ ಚರ್ಚೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next