Advertisement
ನಗರದಲ್ಲಿ ಎಫ್‌ಕೆಸಿಸಿಐ ಹಾಗೂಕೆಸಿಸಿಐ ಸಂಯುಕ್ತವಾಗಿ ಆಯೋಜಿಸಿದ್ದಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನು ಮುಂದೆ ರಾಜ್ಯದಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್ ಉದ್ಯಮ ಇಲಾಖೆ ಎಂಬ ಗೋಡೆಗಳನ್ನೇ ತೆಗೆದು ಉದ್ಯಮ ಇಲಾಖೆ ಒಂದೇ ಇರಿಸುವ ಚಿಂತನೆಯಿದೆ. ರಾಜ್ಯದಲ್ಲಿ ಒಂದು ಕ್ಷೇತ್ರ, ಒಂದು ಪ್ರದೇಶ ಅಭಿವೃದ್ಧಿ ಹೊಂದಿದರೆ ಸಾಲದು. ರಾಜ್ಯದ ಸಮತೋಲಿತ ಬೆಳವಣಿಗೆ ನನ್ನ ಬಯಕೆಯಾಗಿದೆ. ಉದ್ಯಮ ಸಹಿತ ಎಲ್ಲ ಕ್ಷೇತ್ರಗಳು ಬೆಳೆಯಬೇಕು. ಜನರ ಚಟುವಟಿಕೆಗಳ ಹೆಚ್ಚಳವೇ ನಿಜವಾದ ಆರ್ಥಿಕತೆಯಾಗಿದ್ದು, ಇದಕ್ಕೆ ಪೂರಕವಾಗಿ ದೀರ್ಘಾವಧಿ ಚಿಂತನೆಯೊಂದಿಗೆ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ ಎಂದರು. ರಾಜ್ಯದಲ್ಲಿ ಉದ್ಯಮ, ಐಟಿ-ಬಿಟಿ ಬೆಳವಣಿಗೆ ದೃಷ್ಟಿಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ದೇಶಕ್ಕೆ ಮೊದಲಿ ಗರಾಗಿದ್ದೇವೆ. ಒಟ್ಟು ಉತ್ಪಾದನೆಯಲ್ಲಿ ನಮ್ಮ ಪಾಲು ಶೇ. 43 ಆಗಿದೆ. ಮುಂಬಯಿ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿ ಉದ್ಯಮಗಳ ಸ್ಥಾಪನೆಗೆ 3-4 ತಿಂಗಳಲ್ಲಿ ಮೂಲಸೌಕರ್ಯ ನೀಡಿಕೆ ಕಾರ್ಯ ಆರಂಭವಾಗಲಿದೆ.
Related Articles
Advertisement
ಸಿಎಸ್‌ಆರ್‌ಗೆ ಮುಂದಾಗಿ ಆರ್ಥಿಕತೆ ಬೆಳವಣಿಗೆಯಲ್ಲಿ ಉದ್ಯಮಿಗಳ ಪಾತ್ರ ಮಹತ್ವದ್ದು. ಉದ್ಯಮಿಗಳು ಗೇಮ್ ಚೇಂಜರ್ ಆಗಿದ್ದಾರೆ. ಜಾಗತಿಕ ಹಾಗೂ ತಂತ್ರಜ್ಞಾನ ಬದಲಾವಣೆಗೆ ಹೊಂದಿಕೊಳ್ಳ ಬೇಕಾಗಿದ್ದು, ಅವಕಾಶಗಳ ಸಮರ್ಪಕ- ಸಮರ್ಥ ಬಳಕೆಗೆ ಮುಂದಾಗಬೇಕಿದೆ. ಉದ್ಯಮಗಳ ಚಿಂತನಾ ಲಹರಿ ಬದ ಲಾಗಬೇಕಾಗಿದೆ. ರಾಜ್ಯ ಸಮೃದ್ಧವಾಗಬೇಕಾದರೆ ಜನತೆ ಶ್ರೀಮಂತರಾಗಬೇಕು, ಜನರ ಜೀವನಮಟ್ಟ ಸುಧಾರಿಸಲು ವಾಣಿಜ್ಯೋ ದ್ಯಮಿಗಳು ಸಿಎಸ್‌ಆರ್ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಸಚಿವರಾದ ಡಾ| ಮುರುಗೇಶ ನಿರಾಣಿ, ಬಿ.ಸಿ.ಪಾಟೀಲ್, ಶಂಕರ ಪಾಟೀಲ್ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ|ಇ.ವಿ.ರಮಣ ರೆಡ್ಡಿ ಇನ್ನಿತರರಿದ್ದರು. ಎಫ್‌ಕೆಸಿಸಿಐ ಅಧ್ಯಕ್ಷ ಡಾ| ಐ.ಎಸ್.ಪ್ರಸಾದ, ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಸಹಿತ ಸುಮಾರು 600ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪ್ರತಿ ತಾಲೂಕಿನಲ್ಲೂ ಜವಳಿ ಪಾರ್ಕ್ ಹಾವೇರಿ: ಚೀನದಲ್ಲಿ ಟೆಕ್ಸ್‌ಟೈಲ್ ಉದ್ಯಮ ಸ್ಥಗಿತಗೊಂಡಿದ್ದರಿಂದ ವಿದೇಶಿ ಕಂಪೆನಿಗಳು ಭಾರತದತ್ತ ಮುಖ ಮಾಡಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ತಾಲೂಕಿನಲ್ಲೂ ಜವಳಿ ಪಾರ್ಕ್ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾವಿ ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ಜವಳಿ ಪಾರ್ಕ್ ನಿರ್ಮಾಣ, ಟೆಕ್ಸ್‌ಪೋರ್ಟ್ ಇಂಡಸ್ಟ್ರೀಸ್‌ನ ಸಿದ್ಧ ಉಡುಪು ಘಟಕಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.