Advertisement
ಸೋಮವಾರ ಮಣಿಪಾಲದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹಾಲಾಡಿ ಶ್ರೀನಿವಾಸ ಶೆಟ್ಟಿ ಸರಳ ಸಜ್ಜನಿಕೆಯ ಪ್ರಭಾವಿ ರಾಜಕಾರಣಿ. ಬಿಜೆಪಿಯ ತಪ್ಪಿನಿಂದಾಗಿ ಅವರು ಪಕ್ಷೇತರನಾಗಿ ಸ್ಪರ್ಧಿಸು ವಂತಾಗಿತ್ತು. ಆದರೆ ಅವರು ಬಿಜೆಪಿಗೆ ಬೆಂಬಲ ನೀಡಿ ದ್ದಾರೆ. ಆಡಳಿತದಲ್ಲಿ ಕ್ಷೇತ್ರದ ಜನತೆಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ನಾವೇ ಅವರನ್ನು ಬಿಜೆಪಿಗೆ ಸೇರು ವಂತೆ ಒತ್ತಾಯಿಸಿದ್ದೇವೆ. ಕೆಲವು ತಾಂತ್ರಿಕ ತೊಂದರೆ ಗಳು ನಿವಾರಣೆಯಾದ ಅನಂತರ ಅವರು ಬಿಜೆಪಿ ಸೇರಿ ಕೊಳ್ಳಲಿದ್ದು, ಡಿಸೆಂಬರ್ ಬಳಿಕ ಪಕ್ಷದ ಎಲ್ಲ ಚಟು ವಟಿಕೆ ಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೇರಳದಲ್ಲಿ ಕ್ಷುಲ್ಲಕ ವಿಚಾರಗಳಿಗೆ ಅಮಾಯಕ ಹಿಂದೂಗಳ ಹತ್ಯೆ ನಡೆಯುತ್ತಿದೆ. ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರಿಗೆ ಅಲ್ಲಿ ರಕ್ಷಣೆ ಇಲ್ಲವಾಗಿದೆ. ಸಿಪಿಎಂ ಬೆಂಬಲದಿಂದಲೇ ಹತ್ಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುತ್ತಿವೆ. ಉಡುಪಿ, ಮಂಗಳೂರು, ಕೊಡಗು ಭಾಗದಲ್ಲಿ ಈ ಸಂಘಟನೆಗಳಿಂದಾಗಿ ಅಶಾಂತಿ ಸೃಷ್ಟಿಯಾಗುತ್ತಿದೆ. ಈ ಸಂಘಟನೆಗಳಿಗೆ ಸಿದ್ದರಾಮಯ್ಯ ಬೆಂಬಲ ನೀಡುತ್ತಿದ್ದಾರೆ ಎಂದ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಂಗಳೂರಿ ನಲ್ಲಿ ಎನ್‌ಐಎ ಸ್ಥಾಪಿಸಲಾಗುವುದು ಎಂದರು.ಖಾಸಗಿ ಆಸ್ಪತ್ರೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕರಾಳ ಮಸೂದೆಯನ್ನು ತಯಾರಿಸಿದೆ. ಇದರಿಂದ ವೈದ್ಯ ರಿಗೆ ಸಮಸ್ಯೆ ಯಾಗಲಿದೆ. ಅಂತಹ ಮಸೂದೆ ಕೈಬಿಡಬೇಕು. ವೈದ್ಯರಿಗೆ ಕಿರುಕುಳ ಆಗು ವಂತಹ ಮಸೂದೆ ಜಾರಿಯಾಗಬಾರದು ಎಂದರು. ಪ್ರಮೋದ್ ವಿಚಾರ ಗೊತ್ತಿಲ್ಲ
ಸಚಿವ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಸದ್ಯ ಈ ವಿಚಾರದ ಬಗ್ಗೆ ತಿಳಿದಿಲ್ಲ ಎಂದರು. ಗೋಷ್ಠಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಕೆ. ಉದಯ್ ಕುಮಾರ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಶ್ರೀಶಾ ನಾಯಕ್, ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು.
Related Articles
ರಾಜ್ಯ ಸರಕಾರದ ಖಜಾನೆ ಖಾಲಿಯಾಗಿದೆ. ವಿವಿಧ ಮೂಲಗಳಿಂದ ಕೋಟಿ ಕೋಟಿ ಹಣ ಸಾಲ ಮಾಡಲಾಗಿದೆ. ಕೇಂದ್ರ ಸರಕಾರ ದೊಡ್ಡ ಮೊತ್ತದ ಹಣವನ್ನು ರಾಜ್ಯಕ್ಕೆ ನೀಡುತ್ತಿದೆ. ಅದರ ಲೆಕ್ಕವೂ ಇಲ್ಲ. ಜನತೆಗೆ ರಾಜ್ಯದ ಆರ್ಥಿಕ ಸ್ಥಿತಿ ತಿಳಿಯಬೇಕು. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.
ಬಿ.ಎಸ್. ಯಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷ
Advertisement