ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಎಚ್ಚರಿಸಿದರು.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಆಯುಕ್ತರು, ಈಗಾಗಲೇ ಮಾಸ್ಕ್ ಹಾಕಿಕೊಳ್ಳದವರು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ಮೇಲೆ ದಂಡ ವಿಧಿಸಲಾಗುತ್ತಿದ್ದು, ಒಂದು ಸಾವಿರ ರೂ. ದಂಡ ವಿಧಿಸುವ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಬಂದ ಕೂಡಲೇ ಪಾಲಿಕೆ ವ್ಯಾಪ್ತಿಯಲ್ಲೂ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.
ಹೆಚ್ಚುವರಿ 120 ಮಾರ್ಷಲ್ ನೇಮಕ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸಲು 230 ಮಾರ್ಷಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ 120 ಮಂದಿ ಮಾರ್ಷಲ್ ಗಳನ್ನುನಿಯೋಜನೆಮಾಡಿಕೊಳ್ಳಲಾಗುತ್ತಿದೆ. ದಂಡ ವಿಧಿಸುವ ವೇಳೆ ಮಾರ್ಷಲ್‌ಗಳ ಜೊತೆ ಪೊಲೀಸ್ ಸಿಬ್ಬಂದಿ ಸಹ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
ನಿಯಮ ಉಲ್ಲಂಘಿಸಿದರೂ ದಂಡ : ನಗರದಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇರುವವರ ಮೇಲೆ ಸಾವಿರ ರೂ. ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ಆದರೆ, ಈಗ ಇರುವ 200 ರೂ. ದಂಡಕಟ್ಟುವುದಕ್ಕೆ ಸಾರ್ವಜನಿಕರು ಮಾರ್ಷಲ್ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳಕ್ಕೆ ಇಳಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾರ್ಷಲ್‌ಗಳೊಂದಿಗೆ ಸಾರ್ವಜನಿಕರು ಜಗಳಕ್ಕೆ ಇಳಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ನಿಯಮ ಉಲ್ಲಂಘನೆ ಸಾಬೀತಾದರೂ, ದಂಡ ಪಾವತಿ ಮಾಡುವುದಿಲ್ಲಎಂದು ವಾದಕ್ಕೆ ಇಳಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಈ ರೀತಿ ಜಗಳಕ್ಕೆ ಇಳಿಯುವವರ ಮೇಲೂ ಕ್ರಿಮಿನಲ್‌ಕೇಸ್ ದಾಖಲಿಸಲು ಪಾಲಿಕೆ ಮುಂದಾಗಿದೆ.
ಮಾರ್ಷಲ್‌ಗಳಿಗೆ ಗಸ್ತು ವಾಹನ : ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿಕಸ ಎಸೆಯುವವರ ಮೇಲೆ,ಕಸ ವಿಂಗಡಣೆ ಮಾಡಿಕೊಡ ದವರ ಮೇಲೆ ಹಾಗೂ ನಿಯಮ ಉಲ್ಲಂಘನೆ ಮಾಡುವವರ ಮೇಲೆಕಣ್ಣಿಡುವ ಉದ್ದೇಶ ದಿಂದ ಪಾಲಿಕೆಯ ಎಂಟು ವಲಯಗಳಿಗೆ ಹೊಯ್ಸಳ ಗಸ್ತು ವಾಹನದ ಮಾದರಿಯಲ್ಲಿ ಮಾಷರ್ಲ್ ಗಳಿಗೆ ಗಸ್ತು ವಾಹನವನ್ನು ಇದೇ ಮೊದಲ ಬಾರಿಗೆ ಪಾಲಿಕೆ ಪರಿಚಯಿಸಿದೆ. 8 ವಲಯಗಳಿಗೆ ತಲಾ ಒಂದು ಮಾರ್ಷಲ್ ಗಸ್ತು ವಾಹನವನ್ನು ನೀಡಲಾಗಿದ್ದು, ಶನಿವಾರ ಪಾಲಿಕೆಯಕೇಂದ್ರಕಚೇರಿಯ ಆವರಣದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತಾ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ 55 ಜನ ಮಾರ್ಷಲ್‌ಗಳು ಹಾಗೂ ತಂಡಕ್ಕೆ ಒಬ್ಬರು ಆರೋಗ್ಯಾಧಿಕಾಗಳಿಗೆ ಜವಾಬ್ದಾರಿ ನೀಡಲಾಗಿದೆ. ಪ್ರತಿ ವಾಹನಕ್ಕೂ 7.65 ಲಕ್ಷ ರೂ. ವೆಚ್ಚ ಮಾಡಲಾಗಿದೆ. ವಿಶೇಷ ಆಯುಕ್ತ ರಂದೀಪ್ ಪ್ರತಿಕ್ರಿಯಿಸಿ,ಕಸ ವಿಲೇವಾರಿ ಉಲ್ಲಂಘನೆ ಮಾಡುವವರ ಮೇಲೆಕಣ್ಣಿಡಲು ಮೊದಲ ಬಾರಿ ಗಸ್ತು ವಾಹನ ಪರಿಚಯ ಮಾಡಲಾಗಿದೆ ಎಂದರು.