Advertisement

ಕಾಂಗ್ರೆಸ್‌ ಕಾರ್ಯಕರ್ತರು ಶ್ರಮಿಸಿದರೆ ಬಿಜೆಪಿಗೆ ಠೇವಣಿ ನಷ್ಟ

11:16 AM Oct 25, 2017 | Team Udayavani |

ಸುರತ್ಕಲ್‌:ಮುಂದಿನ ಚುನಾವಣೆಯಲ್ಲೂ ನಮ್ಮ ಶಾಸಕ ಮೊಯಿದಿನ್‌ ಬಾವಾ ಅವರನ್ನು ಗೆಲ್ಲಿಸಲು ನಾವೆಲ್ಲ ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದು ಕಾರ್ಪೊರೇಟರ್‌ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಹೇಳಿದರು.

Advertisement

ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಆಶ್ರಯದಲ್ಲಿ ಹೊಸಬೆಟ್ಟು ಕುಳಾಯಿ ವಾರ್ಡ್‌ಗಳಲ್ಲಿ ಆಯೋಜಿಸಲಾದ ಕಾರ್ಯಕರ್ತರ ಸಭೆ ಹಾಗೂ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ. ಶಾಸಕ ಸ್ಥಾನದಿಂದ ಹಿಡಿದು ಪಾಲಿಕೆವರೆಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಲ್ಲಿ ಕಾರ್ಯಕರ್ತರ ಶ್ರಮವೇ ನಿರ್ಣಾಯಕ. ಮನೆ ಮನೆಗೆ ಕಾಂಗ್ರೆಸ್‌ ಸಾಧನೆ ಪರಿಣಾಮಕಾರಿಯಾಗಿ ಮುಟ್ಟಿದಲ್ಲಿ ರಾಜ್ಯದಲ್ಲಿ ಬಿಜೆಪಿ ಠೇವಣಿ ಕಳೆದುಕೊಳ್ಳುವುದು ಖಚಿತ ಎಂದರು.

ಬೂತ್‌ ಬಲಗೊಳಿಸಲು ಕ್ರಮ: ಕೇಶವ ಸನಿಲ್‌
ಮಹಾನಗರ ಪಾಲಿಕೆ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ 23 ಪಾಲಿಕೆ ಸ್ಥಾನಗಳಲ್ಲಿ 140 ಬೂತ್‌ಗಳಿದ್ದು, ಇವುಗಳ ಪದಾಧಿಕಾರಿಗಳಾಗಿ ಯುವಕರನ್ನು ನೇಮಿಸಿ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ. ಎಲ್ಲ ಸಮು ದಾಯಕ್ಕೂ ಆದ್ಯತೆ ನೀಡಲಾಗಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಯೋಜನೆ ರೂಪಿಸಿ ಮುಂದುವರಿಯುತ್ತಿದ್ದೇವೆ ಎಂದು ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೇಶವ ಸನಿಲ್‌ ಹೇಳಿದರು.

ಪಕ್ಷ ಬಲವರ್ಧನೆಗೆ ಬೂತ್‌ ಮಟ್ಟದಲ್ಲಿ ವಾಸ್ತವ್ಯ ಯೋಜನೆಯನ್ನು ಶಾಸಕ ಬಾವಾ ನೇತೃತ್ವದಲ್ಲಿ ರೂಪಿಸಲಾಗಿದೆ. ಪ್ರತಿ ಬೂತ್‌ ನಲ್ಲಿ ಸಭೆ ನಡೆಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಾಗುವುದು. ಈಗಾಗಲೇ ಬೂತ್‌ಗಳಿಗೆ ಹೋಗಿ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ, ಸ್ಥಳೀಯ ನಾಯಕತ್ವವನ್ನು ಗುರುತಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.

Advertisement

ಕಾರ್ಪೊರೇಟರ್‌ ಬಶೀರ್‌ ಅಹ್ಮದ್‌, ಅಶೋಕ್‌ ಶೆಟ್ಟಿ, ಮಾಜಿ ಮೇಯರ್‌ ಗುಲ್ಜಾರ್‌ ಬಾನು, ಹುಸೈನ್‌ ಕಾಟಿಪಳ್ಳ, ರೋಹಿತಾಕ್ಷ ರೈ, ಮೋನಪ್ಪ ಕುಳಾಯಿ, ಕೆ. ಸದಾಶಿವ ಶೆಟ್ಟಿ, ಗಿರೀಶ್‌ ಆಳ್ವ, ರಾಜೇಶ್‌ ಕುಳಾಯಿ, ವೈ.ರಮಾನಂದ ರಾವ್‌, ಆನಂದ ಅಮೀನ್‌, ವೈ.ರಾಘವೇಂದ್ರ ರಾವ್‌, ಹರೀಶ್‌ ಬಂಗೇರ, ಲಕ್ಷ್ಮಣ ಸುವರ್ಣ, ಜಲೀಲ್‌, ಶ್ಯಾಮ್‌ ರಾಯ್‌ ಸುವರ್ಣ, ಗೋವರ್ಧನ ಶೆಟ್ಟಿಗಾರ್‌, ಜೈಸನ್‌, ಹೇಮಂತ್‌, ಮಲ್ಲಿಕಾರ್ಜುನ್‌, ಬಶೀರ್‌ ಬೈಕಂಪಾಡಿ, ಹರೀಶ್‌ ದೇವಾಡಿಗ, ಗಿರೀಶ್‌ ಭಂಡಾರಿ, ದೇವಕಿ ದೇವಾಡಿಗ, ಸುನೀತಾ ಡಿ’ಸೋಜಾ, ಭಾರತೀ ದಿನೇಶ್‌, ನವೀನ್‌ ಶೆಟ್ಟಿ , ಹಂಝ, ಹಮೀದ್‌ ಕಟ್ಲ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next