Advertisement

ಕಾಂಗ್ರೆಸ್‌ಗೆ ಕಷ್ಟವಾದರೆ, ಅವರ ದಾರಿ ನೋಡಿಕೊಳ್ಳಲಿ: ಕುಪೇಂದ್ರ ರೆಡ್ಡಿ

11:20 PM May 13, 2019 | Lakshmi GovindaRaj |

ಬೆಂಗಳೂರು: “ಕಾಂಗ್ರೆಸ್‌ ಹಾಗೂ ಬಿಜೆಪಿಗಿಂತ ಜೆಡಿಎಸ್‌ ಕಡಿಮೆ ಸ್ಥಾನ ಗೆದ್ದಿದೆ. ಆದರೆ, ಸರ್ಕಾರ ರಚಿಸುತ್ತೇವೆ ಎಂದು ನಾವು ಯಾರ ಬಾಗಿಲಿಗೂ ಹೋಗಿರಲಿಲ್ಲ. ಕಾಂಗ್ರೆಸ್‌ನವರೇ ಮುಖ್ಯಮಂತ್ರಿ ಮಾಡುತ್ತೇವೆಂದು ಬಂದಿದ್ದರು.

Advertisement

ಈಗ ಅವರಿಗೆ ಕಷ್ಟವಾದರೆ ಅವರ ದಾರಿ ಅವರು ನೋಡಿಕೊಳ್ಳಲಿ’ ಎಂದು ಜೆಡಿಎಸ್‌ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಗುಲಾಂನಬಿ ಆಝಾದ್‌ ಜತೆ ಮಾತುಕತೆ ವೇಳೆ ನಾನು ಹಾಜರಿದ್ದೆ.

ನೀವೇ ಮುಖ್ಯಮಂತ್ರಿಯಾಗಿ ಎಂದು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಕಾಂಗ್ರೆಸ್‌ನವರು ಮುಖ್ಯಮಂತ್ರಿಯ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ. ಅವರಿಗೆ ಮೈತ್ರಿ ಕಷ್ಟವಾದರೆ ಅವರ ದಾರಿ ಅವರು ನೋಡಿಕೊಳ್ಳಲಿ. ಅದನ್ನು ಬಿಟ್ಟು ಮುಖ್ಯಮಂತ್ರಿಗೆ ತೊಂದರೆ ಕೊಡುವುದು ಬೇಡ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next