Advertisement

ಬಿಜೆಪಿ ಈಗ ಸೋಲಿಲ್ಲದ ಪಕ್ಷ : ಸಚಿವ ಪ್ರಹ್ಲಾದ್ ಜೋಶಿ

08:23 PM Dec 18, 2020 | mahesh |

ಧಾರವಾಡ: ಇಂದಿರಾ ಗಾಂಧಿ ಹತ್ಯೆ ನಂತರ ಏಕದ್ರುವಿ ರಾಜಕಾರಣವಿತ್ತು. 2014ರ ನಂತರ ಸಂಪೂರ್ಣ ಸ್ಥಿತಿಗತಿ ಬದಲಾಯಿತು. ನಮ್ಮ ವಿರುದ್ಧ ಎಲ್ಲರು ಒಗ್ಗೂಡಿದರೂ ಸೋಲಿಸಲು ಆಗುತ್ತಿಲ್ಲ ಕೇಂದ್ರದ ಗಣಿ-ಭೂವಿಜ್ಞಾನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Advertisement

ನಗರದ ತೇಜಸ್ವಿನ ನಗರದಲ್ಲಿ ಧಾರವಾಡ-71ರ ವಿವಿಧ ಮಂಡಳದ ಹಾಗೂ ಪ್ರಕೋಷ್ಠದ ಮುಖಂಡರಿಗೆ ಶುಕ್ರವಾರ ಹಮ್ಮಿಕೊಂಡ ಪಂಡಿತ ದೀನದಯಾಳ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಹಾಗೂ 2014ರ ನಂತರ ಬದಲಾದ ರಾಜಕಾರಣ:ಭಾಜಪ ಮತ್ತು ನಮ್ಮ ಜವಾಬ್ದಾರಿ ಬಗ್ಗೆ ಮಾತನಾಡಿದರು.

ದೇಶದಲ್ಲಿ ನಡೆದ 58 ಚುನಾವಣೆಯಲ್ಲಿ 42 ಚುನಾವಣೆ ಬಿಜೆಪಿ ಗೆಲವು ಸಾಧಿಸಿದೆ. ಇದೀಗ ಬಿಜೆಪಿ ಸೋಲಿಸಲು ಎಲ್ಲರೂ ಒಂದಾಗುವ ಸ್ಥಿತಿ ಇದೆ. ಬಿಹಾರ ಚುನಾವಣೆ ಐತಿಹಾಸಿಕ ಗೆಲವು. ಕಾಂಗ್ರೆಸ್ ಎದರಿಸಲು ಎಲ್ಲರು ಒಗ್ಗೂಡುತ್ತಿದ್ದರು. ಇಂದಿರಾ ಹತ್ಯೆ ನಂತರ ಇಡೀ ದೇಶದಲ್ಲಿ ಎರಡು ಲೋಕಸಭಾ ಹಾಗೂ ವಿಧಾನ ಸಭಾ ಸದಸ್ಯರಿದ್ದರು.

2014-282, 2019-303 ಸ್ಥಾನ ಗೆದ್ದಿದೆ. ಶೇ.6ರಷ್ಟು ಮತದಾನ ಹೆಚ್ಚಳವಾಗಿದೆ. 2014ರಿಂದ 2019ರವರೆಗೆ ಸಂಪೂರ್ಣ ಬಿಜೆಪಿ ಆಡಳಿತ. ಮೇಲ್ವರ್ಗದ, ನಗರವಾಸಿಗಳ ಪಾರ್ಟಿ ಎಂಬ ಆರೋಪ ಇತ್ತು. ಇದೀಗ ಸರ್ವ ವ್ಯಾಪ್ತಿಯಲ್ಲಿ ಬಿಜೆಪಿ ಅಕ್ಷರಶಃ ಮನೆ ಮಾಡಿರುವುದು ಅಭಿಮಾನ ಮೂಡಿಸಿದೆ ಎಂದರು.

ಹಿಂದೆ ಬಿಜೆಪಿ ಅಂದ್ರೆ ಕಲ್ಲು ಹೊಡೆದು ಓಡಿಸುವ ಕಾಲವಿತ್ತು. ಇಂದು ಹೆಮ್ಮೆಯ ವಿಷಯ. ಮೋದಿ ಪರಿಶ್ರಮದ ಫಲವಾಗಿ ಕೃಷಿ, ಆರ್ಥಿಕತೆ, ಸೇನೆ, ರಕ್ಷಣೆ ಹಾಗೂ ಸರ್ವರಂಗದಲ್ಲೂ ಆಮೂಲಾಗ್ರ ಬದಲಾವಣೆ ಬಂದಿದೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಜಾಗತಿಕವಾಗಿ ಮೋದಿ ಹೆಸರುವಾಸಿ ಆಗಿದ್ದಾರೆ ಎಂದರು.

Advertisement

ದೇಶದ-ಸಮಾಜದ ಹಿತಕ್ಕೆ ರಾಜಕಾರಣ ಮಾಡಬೇಕು. ಈ ಮೂಲಕ ಬದಲಾವಣೆ ತರುವ ಕೆಲಸ ಮಾಡಬೇಕು. ಚೈನಾ ಸೈನಿಕರ ಮೊದಲು ಭಾರಿಗೆ ನಮ್ಮ ಮೇಲೆ ಬಂದಾಗ ಖಡಕ್ ಆಗಿ ಉತ್ತರ ಕೊಟ್ಟಿದ್ದು ಮೋದಿ ಸರ್ಕಾರ. ಭಾರತದ ಸೈನ್ಯ ಬಲಿಷ್ಠವಾಗಿದೆ. ಜಾಗತಿಕವಾಗಿ ಭಾರತದ ಘೌರವ, ಘನತೆ ಹೆಚ್ಚಿದೆ. ಇದಕ್ಕೆ ಮೋದಿ ಕಾರಣ ಎಂದರು.

ಗೋಧಿ ಶೇ.41, ಅಕ್ಕಿ ಶೇ.43, ಸಾಸ್ವೆ ಶೇ.52, ಬೆಳೆ ಶೇ.23ರಷ್ಟು ಹೆಚ್ಚಳ ಮಾಡಿದೆ. ರೈತರ ಆದಾಯ ದ್ವಿಗಣ ಮಾಡಿದೆ. ಆದರೆ, ಕೆಲ ಪಕ್ಷಗಳು ರೈತರ ಹಾದಿ ತಪ್ಪಿಸುತ್ತಿವೆ ಎಂದರು.

ಸ್ವಾಮಿನಾಥನ್ ವರದಿ ಜಾರಿಗೆ ಮಾಡಿದ್ದು ಮೋದಿ ಸರ್ಕಾರ. ಇದನ್ನು ಸ್ವತಃ ಸ್ವಾಮಿನಾಥನ್ ಹೇಳಿದ್ದು, ಯಾವ ಕಾರಣಕ್ಕೆ ರೈತ ಕಾಯ್ದೆ ವಿರೋಧಿ ಸಲ್ಲ. ತೃಪ್ತಿದಾಯಕ ಜೀವನ ನಡೆಸುವುದು ಬೇಡವೇ? ದೇಶದ ಭದ್ರತೆಯಿಂದ ಹಿಡಿದು ಆಹಾರ ಭದ್ರತೆವರೆಗೆ, ರೈತನಿಂದ ಹಿಡಿದು ಕೂಲಿ ಕಾರ್ಮಿಕರವರೆಗೆ ಬದಲಾವಣೆ ಎಂದು ಹೇಳಿದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ಬಿಜೆಪಿ ಶಿಸ್ತಿನ ಶಿಪಾಯಿಗಳನ್ನು ನಿರ್ಮಿಸುವ ಪಕ್ಷ. ತತ್ವ-ಸಿದ್ಧಾಂತ, ನೈತಿಕತೆ, ಜವಾಬ್ದಾರಿ ಬೆಳೆಸುವ ಪಕ್ಷ. ಈ ಕಾರಣಕ್ಕೆ ಬಿಜೆಪಿ ಬುನಾದಿ ಗಟ್ಟಿಯಾಗಿದೆ. ಇಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉತ್ತಮ ಅವಕಾಶಗಳಿವೆ. ಎರಡು ದಿನದ ಪ್ರಶಿಕ್ಷಣ ವರ್ಗ ಸದ್ಭಳಸಿಕೊಳ್ಳಲು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ, ಬಿಜೆಪಿ ಕಾರ್ಯಕರ್ತರು ಫಲಾಪೇಕ್ಷೆ ಇಲ್ಲದೆ ದುಡಿಯುವ ಜನರು. ನಮ್ಮ ಪಕ್ಷದ ಕಾರ್ಯಕರ್ತರು ಧ್ಯೇಯ, ತತ್ವ-ಸಿದ್ಧಾಂತ, ಆದರ್ಶ ಒಪ್ಪಿ-ಅಪ್ಪಿ ಕೆಲಸ ಮಾಡುತ್ತಾರೆ.

ಪ್ರಶಿಕ್ಷಣದಲ್ಲಿ ಪಡೆದ ಜ್ಞಾನದ ಬಗ್ಗೆ, ಕೇಂದ್ರ-ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಜನರಿಗೆ ತಿಳವಳಿಕೆ ನೀಡುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಈರೇಶ ಅಂಚಟಗೇರಿ, ಸುಧಾ, ರೇಷ್ಮೇ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಸುನಿಲ ಮೋರೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next