Advertisement

BJP ಮತ್ತೆ ಅಧಿಕಾರಕ್ಕೆ ಬಂದರೆ ದೇಶವನ್ನು 22 ಬಿಲಿಯನೇರ್‌ಗಳು ನಡೆಸುತ್ತಾರೆ: ರಾಹುಲ್

03:01 PM May 15, 2024 | Team Udayavani |

ಬೋಲಂಗಿರ್ (ಒಡಿಶಾ) : ಈ ಚುನಾವಣೆಯಲ್ಲಿ ಗೆದ್ದರೆ ಬಿಜೆಪಿ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುತ್ತದೆ. ದೇಶವನ್ನು 22 ಬಿಲಿಯನೇರ್‌ಗಳು ನಡೆಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

Advertisement

ಬುಧವಾರ ಒಡಿಶಾದ ಬೋಲಂಗಿರ್‌ನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿ ”ಬಿಜೆಪಿಯು ಸಂವಿಧಾನವನ್ನು ನಾಶ ಮಾಡಲು ಮತ್ತು ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಒದಗಿಸಲಾದ ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತದೆ ಎಂದು ಆರೋಪಿಸಿದರು.

“ಬಿಜೆಪಿ ಸಂವಿಧಾನದ ಪುಸ್ತಕವನ್ನು ಹರಿದು ಹಾಕಲು ಬಯಸುತ್ತದೆ, ಆದರೆ ಕಾಂಗ್ರೆಸ್ ಮತ್ತು ಭಾರತದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ “ಎಂದು ತಮ್ಮ ಕೈಯಲ್ಲಿರುವ ಸಂವಿಧಾನವನ್ನು ತೋರಿಸಿದರು.

‘ನಮ್ಮ ಮೊದಲ ಕ್ರಾಂತಿಕಾರಿ ಹೆಜ್ಜೆ ಜಾತಿ ಗಣತಿ. ಇದರಿಂದಾಗಿ ದೇಶದ ಪ್ರತಿಯೊಂದು ವಿಭಾಗವೂ ತನ್ನ ಪಾಲು ತಿಳಿಯುತ್ತದೆ’ ಎಂದರು.

‘ಅದಾನಿ ವಿಮಾನ ನಿಲ್ದಾಣ ಮತ್ತು ರಕ್ಷಣೆಗೆ ಗುತ್ತಿಗೆ ಪಡೆದಾಗ, ಮಾಧ್ಯಮಗಳು ಹೇಳುತ್ತವೆ – ಅಭಿವೃದ್ಧಿ ನಡೆಯುತ್ತಿದೆ. ಎಂಎನ್‌ಆರ್‌ಇಜಿಎ ಜಾರಿಯಾದಾಗ ರೈತರ ಸಾಲ ಮನ್ನಾ ಆಗುತ್ತದೆ ಎಂದು ಮಾಧ್ಯಮಗಳು ಹೇಳುತ್ತವೆ ನೋಡಿ, ಅವರು ಬಡವರ ಮತ್ತು ರೈತರ ಪದ್ಧತಿಯನ್ನು ಹಾಳು ಮಾಡುತ್ತಿದ್ದಾರೆ. ನಾವು ದೇಶದಲ್ಲಿ ಕೋಟ್ಯಂತರ ಮಿಲಿಯನೇರ್‌ಗಳನ್ನು ಸೃಷ್ಟಿಸುತ್ತೇವೆ’ ಎಂದರು.

Advertisement

‘ದೇಶದಲ್ಲಿ ಶೇ.90ರಷ್ಟು ಜನರು ಎಲ್ಲಿಯೂ ಭಾಗವಹಿಸುತ್ತಿಲ್ಲ.ಮಾಧ್ಯಮದವರು ಅಂಬಾನಿ ಮದುವೆಯನ್ನು ಟಿವಿಯಲ್ಲಿ ತೋರಿಸುತ್ತಾರೆ, ಪ್ರಧಾನಿ ಮೋದಿಯವರ ವಿಡಿಯೋವನ್ನು ತೋರಿಸುತ್ತಾರೆ. ಆದರೆ ರೈತರು, ಕಾರ್ಮಿಕರು ಮತ್ತು ನಿರುದ್ಯೋಗಿ ಯುವಕರ ಧ್ವನಿಯನ್ನು ಎಂದಿಗೂ ತೋರಿಸಲಾಗುವುದಿಲ್ಲ.ಏಕೆಂದರೆ ಮಾಧ್ಯಮ ಮಾಲಕರ ಪಟ್ಟಿಯಲ್ಲಿ ದಲಿತ, ಬುಡಕಟ್ಟು ಅಥವಾ ಹಿಂದುಳಿದ ವರ್ಗದ ಒಬ್ಬ ವ್ಯಕ್ತಿಯನ್ನು ನೀವು ಕಾಣುವುದಿಲ್ಲ’ ಎಂದರು.

“ಬಿಜೆಪಿ ಗೆದ್ದರೆ, ಮೀಸಲಾತಿಯನ್ನು ರದ್ದುಗೊಳಿಸಲಾಗುತ್ತದೆ, ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಲಾಗುತ್ತದೆ ಮತ್ತು ದೇಶವನ್ನು 22 ಕೋಟ್ಯಧಿಪತಿಗಳು ನಡೆಸುತ್ತಾರೆ ಅದಕ್ಕಾಗಿ ಜನಪರ ಸರಕಾರ ರಚನೆಯಾಗಬೇಕು’ ಎಂದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next