Advertisement

ಶೇ.50 ಹಾಸಿಗೆ ಕಾಯಿರಿಸದಿದ್ದರೆ‌ ಒಪಿಡಿ ಬಂದ್‌

02:53 PM Apr 29, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚುತ್ತಿರುವುದರಿಂದಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥಯಹೊಂದಿರುವ ಎಲ್ಲಾ ಖಾಸಗಿ ಆಸ್ಪತ್ರೆ ಶೇ .80 ಬೆಡ್‌ಗಳನ್ನು ಕೊರೊನಾ ಚಿಕಿತ್ಸೆಗೆ ಮೀಸಲಿರಿಸಬೇಕು ,ಶೇ.50ರಷ್ಟು ಬೆಡ್‌ಗಳನ್ನು ತಕ್ಷಣದಿಂದಲೇ ಸರ್ಕಾರದಬಳಕೆಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಉಚಿತ ಚಿಕಿತ್ಸೆ ನೀಡಬೇಕಾದೀತು: ಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಕೊರೊನಾ ಪರಿಸ್ಥಿತಿ ನಿರ್ವಹಣೆ ಕುರಿತು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆಬುಧವಾರ ಸಭೆ ನಡೆಸಿದ ಅವರು, ಈವರೆಗೆ ಕೇವಲ6 ಆಸ್ಪತ್ರೆ ಮಾತ್ರ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆ ಯಡಿ ನೋಂದಣಿಯಾಗಿವೆ.

ಉಳಿದವುಗುರುವಾರದೊಳಗೆ ನೋಂದಾಯಿಸಿಕೊಳ್ಳಬೇಕು.ಆಗ ಜಿಲ್ಲಾಡಳಿತದಿಂದ ವಿಕೋಪ ನಿರ್ವಹಣೆಕಾಯಿದೆಯಡಿ ಕಳಿಸಲಾಗುವ ಸೋಂಕಿತರ ನಿಗದಿತಚಿಕಿತ್ಸಾ ವೆಚ್ಚ ಸರ್ಕಾರದಿಂದ ಮರುಪಾವತಿಯಾಗಲಿದೆ. ಇಲ್ಲದಿದ್ದಲ್ಲಿ ಉಚಿತವಾಗಿ ಚಿಕಿತ್ಸೆನೀಡಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತದಿಂದ ಕ್ರಮ: ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡೆಸಿವಿಯರ್‌ ಚುಚ್ಚುಮದ್ದು ಪೂರೈಕೆಯಲ್ಲಿ ಕೊರತೆ ಇದ್ದುಅದನ್ನು ಸರಿಪಡಿಸುವಂತೆ ಸಕಾರಣಗಳೊಂದಿಗೆ ರಾಜ್ಯಔಷಧಿ ನಿಯಂತ್ರಣಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಒಂದೆರೆಡು ದಿನಗಳಲ್ಲಿ ಬಗೆಹರಿಯಲಿದೆ.ಸರ್ಕಾರದಿಂದ ಕಳುಹಿಸುವ ಸೋಂಕಿ ತರಿಗೆ ಅಗತ್ಯಚುಚ್ಚುಮದ್ದನ್ನು ಜಿಲ್ಲಾಡಳಿತ ದಿಂದಲೇ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಮಾರ್ಗದರ್ಶನ: ರೆಮ್‌ಡೆಸಿವಿಯರ್‌ ಚುಚ್ಚುಮದ್ದುಅನಗತ್ಯವಾಗಿ ಬಳಸುವಂತಿಲ್ಲ. ಅದೇ ರೀತಿ ಎಲ್ಲಾಖಾಸಗಿ ಆಸ್ಪತ್ರೆಗೆ ಜೂಮ್‌ ಸಭೆಯಲ್ಲಿ ನಿರಂತರವಾಗಿಕೊರೊನಾ ಚಿಕಿತ್ಸಾ ಕ್ರಮಗಳ ಬಗ್ಗೆ ತಜ್ಞರು ಪ್ರತಿದಿನಮಾಹಿತಿ ನೀಡಲಿದ್ದಾರೆ. ಅಲ್ಲದೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯನ್ನು ಜಿಲ್ಲೆಯ ಕೊರೊನಾಚಿಕಿತ್ಸಾ ಸಲಹೆಗೆ ನೋಡಲ್‌ ಆಸ್ಪತ್ರೆಯನ್ನಾಗಿನೇಮಿಸಿದ್ದು, ಅಲ್ಲಿನ ವೈದ್ಯರಿಂದಲೂ ಮಾರ್ಗದರ್ಶನಪಡೆಯಬಹುದಾಗಿದೆ ಎಂದರು.

Advertisement

ಬೆಡ್‌ಗಳ ಪ್ರಮಾಣ ಹೆಚ್ಚಿಸಿ: ಎಲ್ಲಾ ಖಾಸಗಿ ಆಸ್ಪತ್ರೆಗಳು ಕೊರೊನಾ ಸಂದಿಗ್ಧ ಪರಿಸ್ಥಿತಿ ನಿಭಾ ಯಿಸಲುಕೈಜೋಡಿಸಬೇಕು. ಜಿಲ್ಲೆಯಲ್ಲಿ ಕೊರೊನಾ ಸಾವಿನಸಂಖ್ಯೆ ಕಡಿಮೆಯಾಗಬೇಕು ಎಂದ ಅವರು,ಸೋಂಕಿನ ಪ್ರಮಾಣ ತುಂಬಾ ಇರುವುದರಿಂದಖಾಸಗಿ ಆಸ್ಪತ್ರೆಗಳು ಬೆಡ್‌ಗಳ ಪ್ರಮಾಣ ಹೆಚ್ಚಿಸಲುಪ್ರಯತ್ನಿಸಬೇಕು ಎಂದರು.ಸಭೆಯಲ್ಲಿ ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳಪ್ರತಿನಿಧಿಗಳು ಹಾಜರಿದ್ದರು.

ಎಲ್ಲರೂ ತಮ್ಮ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು,ಹಾಗೂ ಶೇ. 50 ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಸಿದ್ಧರುವುದಾಗಿ ತಿಳಿಸಿದರು. ಅಲ್ಲದೆಸುವರ್ಣ ಆರೋಗ್ಯ ಸೇವಾ ಯೋಜನೆಯಡಿ ನೋಂದಣಿ ಆಗಿರದ ಆಸ್ಪತ್ರೆಗಳು ಈಗಾಗಲೇ ಹೊಸದಾಗಿಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಈ ಅರ್ಜಿ ಪರಿಶೀಲಿಸಿ ತಕ್ಷಣವೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸುವರ್ಣಆರೋಗ್ಯ ಟ್ರಸ್ಟ್‌ನ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಅಧಿಕಾರಿ ಡಾ.ಸತೀಶ್‌ಕುಮಾರ್‌, ಭಾರತೀಯವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ರಮೇಶ್‌,ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷರಾದ ಡಾ.ಬಷೀರ್‌ಅಹಮದ್‌, ಡಾ.ವೇಣುಗೋಪಾಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next