Advertisement

ರಜೌರಿಯಲ್ಲಿ ಮತ್ತೆ ಉಗ್ರರ ಅಟ್ಟಹಾಸ : ಐಇಡಿ ಸ್ಫೋಟದಲ್ಲಿ ಮಗು ಸಾವು

05:34 PM Jan 02, 2023 | Team Udayavani |

ರಾಜೌರಿ : ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಸೋಮವಾರ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು 12 ಗಂಟೆಗಳಲ್ಲಿ 2ನೇ ಬಾರಿ ದಾಳಿ ನಡೆಸಿ ದ್ದಾರೆ. ಐಇಡಿ ಸ್ಫೋಟದಲ್ಲಿ ಮಗು ಸಾವನ್ನಪ್ಪಿದೆ.

Advertisement

ಇಂದು ಸಂಭವಿಸಿದ ಸ್ಫೋಟದಲ್ಲಿ ಒಂದು ಮಗು ಸಾವನ್ನಪ್ಪಿ 7 ಜನರು ಗಾಯಗೊಂಡಿದ್ದಾರೆ. ಐಇಡಿಯನ್ನು ಗೋಣಿ ಚೀಲದ ಕೆಳಗೆ ಇಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಇಬ್ಬರು ಉಗ್ರರು ಇರುವ ಬಗ್ಗೆ ಮಾಹಿತಿ ಲಭಿಸಿದ್ದು ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು ಶೋಧ ಕಾರ್ಯ ನಡೆಯುತ್ತಿದೆ.

ಭಾನುವಾರ ರಜೌರಿಯ ಅಪ್ಪರ್ ಧಂಗ್ರಿ ಗ್ರಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 5 ಮಂದಿ ಬಲಿಯಾಗಿದ್ದರು. ಸ್ಥಳಕ್ಕೆ ಎನ್‌ಐಎ ತಂಡ ಭೇಟಿ ನೀಡಲಿದೆ.

ನಿರಂತರ ದಾಳಿ ಬಳಿಕ ಸ್ಥಳೀಯರು ಲೆಫ್ಟಿನೆಂಟ್ ಗವರ್ನರ್ ಮತ್ತು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next