Advertisement

ಆಕಾಶವಾಣಿಯಲ್ಲಿ ಹಾರರ್‌ ಸ್ಟೋರಿ

04:26 PM Nov 13, 2020 | Suhan S |

ಇತ್ತೀಚೆಗೆ ಅನೇಕ ಹೊಸಬರ ಚಿತ್ರಗಳು ತಮ್ಮ ವಿಭಿನ್ನ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿವೆ. ಈಗ ಅಂಥದ್ದೇ ಒಂದು ವಿಭಿನ್ನ ಟೈಟಲ್‌ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ “ಇದು ಆಕಾಶ ವಾಣಿ ಬೆಂಗಳೂರು ನಿಲಯ’.

Advertisement

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಈ ಚಿತ್ರ ಸದ್ದಿಲ್ಲದೆ ತನ್ನ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. “ಕಮಲಾನಂದ ಚಿತ್ರಾಲಯ’ ಬ್ಯಾನರ್‌ ಅಡಿಯಲ್ಲಿ ಶಿವಾನಂದಪ ³ ಬಳ್ಳಾರಿ (ಮಿಸ್ಟರ್‌ ಎಇಜಿ) ಮತ್ತು ಸಂಗಡಿಗರು ಸೇರಿ ನಿರ್ಮಿಸುತ್ತಿರುವ “ಇದು ಆಕಾಶವಾಣಿ ಬೆಂಗಳೂರು ನಿಲಯ’ ಚಿತ್ರಕ್ಕೆ ಎಂ. ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಈ ಹಿಂದೆ “ನಾವೇ ಭಾಗ್ಯವಂತರು’ ಚಿತ್ರವನ್ನು ನಿರ್ದೇಶಿಸಿದ್ದ ಎಂ. ಹರಿಕೃಷ್ಣ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಬೆಂಗಳೂರು, ತಿಪಟೂರು, ನೊಣವಿನಕೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಹಾರರ್‌ – ಥ್ರಿಲ್ಲರ್‌ಕಥಾ ಹಂದರ ಹೊಂದಿರುವ “ಆಕಾಶವಾಣಿ ಬೆಂಗಳೂರು ನಿಲಯ’ ಚಿತ್ರಕ್ಕೆ ಸುಮ್‌ಸುಮ್ನೆ ವಿಜಯ ಕುಮಾರ್‌ ಕಥೆ, ಚಿತ್ರಕಥೆ, ಸಂಭಾಷಣೆ ಗಳನ್ನು ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಎ ಟಿ. ರವೀಶ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಪ್ರವೀಣ್‌ ಶೆಟ್ಟಿ ಛಾಯಾಗ್ರಹಣ, ಪವನ್‌ ಗೌಡ ಸಂಕಲನವಿದೆ. ನಿಖೀತಾ ಸ್ವಾಮಿ, ರಣಬೀರ್‌ ಪಾಟೀಲ್, ಸುಚೇಂದ್ರ ಪ್ರಸಾದ್‌, ಟೆನ್ನಿಸ್‌ಕೃಷ್ಣ, ಎಸ್‌. ನಾರಾಯಣಸ್ವಾಮಿ, ದಿವ್ಯಾಶ್ರೀ (ಕಾಮಿಡಿ ಕಿಲಾಡಿಗಳು) ಮುಂತಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರ ಶೀಘ್ರದಲ್ಲಿಯೇ ಚಿತ್ರದ ಹಾಡುಗಳ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.­

Advertisement

Udayavani is now on Telegram. Click here to join our channel and stay updated with the latest news.

Next