Advertisement
ಮಾಗಡಿ ಸಮೀಪದ ದೊಡ್ಡ ಸೋಮನಹಳ್ಳಿಯ ಗಿರೀಶ್ ಆಲಿಯಾಸ್ ಗಿರಿ ಮಲ್ಲತಹಳ್ಳಿಯ ವೆಂಕಟಾಚಲ ಆಲಿಯಾಸ್ ವೆಂಕಟೇಶ್, ನಾಗರಭಾವಿಯ ಮನೋಜ್ ಆಲಿಯಾಸ್ ಮನು, ಬಂಧಿತ ಆರೋಪಿಗಳು. ಪುರಾಣಪ್ರಸಿದ್ಧ ಗುರಾಣಿ, ಪಂಜುರ್ಲಿ ಮತ್ತುದೇವರ ವಿಗ್ರಹವನ್ನು ಮೊದಲ ಬಾರಿಗೆ ಕಳವು ಮಾಡಿದ ಕಳ್ಳರು ಯಾವುದೇ ಸಾಕ್ಷ ಬಿಡದೆ ಪರಾರಿಯಾಗಿದ್ದರು.ಬಾಳೂರು ಪೊಲೀಸರಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದರ ನಂತರ ಕೆಲವೇ ದಿನಗಳಲ್ಲಿ ಮತ್ತೆ ಎರಡನೇ ಬಾರಿಗೆ
ದೇವಸ್ಥಾನದ ಕಳಶವನ್ನು ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಬಾಳೂರು ಪೊಲೀಸರು ಎರಡನೇ ಬಾರಿಯ ಕಳವು ಜಾಡನ್ನು ಹಿಡಿದು ದೇವಸ್ಥಾನದಲ್ಲಿ ತೀವ್ರ ಶೋಧ ನಡೆಸಿದಾಗ ವಾಹನದ ವೀಲ್ ಅಲೈಮೆಂಟ್ ಮಾಡಿದ್ದ ಬೆಂಗಳೂರಿನ ಗ್ಯಾರೇಜ್
ಒಂದರ ಚೀಟಿಯೊಂದು ಸಿಕ್ಕಿತ್ತು. ಇದರ ಆಧಾರದ ಮೇಲೆ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ಪೊಲೀಸರು ಬೆಂಗಳೂರಿಗೆ ತೆರಳಿ ಅವರಿಂದ ಕಳವು ಮಾಡಿದ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದು ದೇವಸ್ಥಾನದ ಕಳಶ ಮಾತ್ರ ಪತ್ತೆಯಾಗಿಲ್ಲ. ಪೊಲೀಸರ ವಿಚಾರಣೆ ವೇಳೆ ಕಲಶವನ್ನು ಶ್ರೀರಂಗಪಟ್ಟಣದ ಸಮೀಪದ ಕಾವೇರಿ ನದಿಗೆ ಎಸೆದಿದ್ದಾಗಿ ಹೇಳಿದ್ದಾರೆ. ಅಲ್ಲಿ ಅದರ ಶೋಧ ಕಾರ್ಯವನ್ನು ನಡೆಸಿದರೂ ಪ್ರಯೋಜನವಾಗಿರುವುದಿಲ್ಲ. ಸ್ಥಳೀಯ ಪೊಲೀಸರ ಸಹಾಯ ಕೋರಿದ್ದು ಅದರ ಶೋಧಕಾರ್ಯ
ಮುಂದುವರಿದಿದೆ.