Advertisement
ಕೊರಟಗೆರೆ ತಾಲೂಕಿನ ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳಲ್ಲಿ ಮಾತನಾಡಿ ಕೆಲವು ದೃಶ್ಯ ಮಾದ್ಯಮಗಳ ಅತಿರಂಜನೀಯ ಮೌಢ್ಯಾಚರಣೆ ಜಾಹಿರಾತುಗಳು ಈ ವರ್ಗದ ಜನರ ಶೋಷಣೆಗೆ ಪಣತೊಟ್ಟು ನಿಂತಿವೆ. ಮುಗ್ಧ ಮಕ್ಕಳ ಮನೋಭೂಮಿಯಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮೌಲ್ಯಗಳನ್ನು ಬಿತ್ತುವ ಪ್ರಯತ್ನ ಮಾಡಲಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
Related Articles
Advertisement
ಪವಾಡ ಭಂಜಕ ಹುಲಿಕಲ್ ನಟರಾಜ್ ರವರು ತಮ್ಮ ಕೈಚಳಕಗಳಿಂದ ಒಂದೊಂದೇ ಪವಾಡಗಳ ರಹಸ್ಯಗಳನ್ನು ಬಿಚ್ಚಿಡುತ್ತಾ ” ದೇಹದ ಮಡಿವಂತಿಕೆಯಿಂದ ಮನಸ್ಸಿನ ಮಡಿವಂತಿಕೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಮೂಲ ನಂಬಿಕೆಗಳಿರಲಿ, ಮೂಢ ನಂಬಿಕೆಗಳು ಬೇಡ. ಸಮಾಧಾನ, ಶಾಂತಿ-ನೆಮ್ಮದಿಗಾಗಿ ಮಾಡುವ ಯಾವುದೇ ಆಚರಣೆ ಮನುಷ್ಯನ ಮನಸ್ಸು ಮತ್ತು ದೇಹಕ್ಕೆ ತೊಂದರೆ ಕೊಡಬಾರದು. ಕಾಣದ ದೆವ್ವಗಳು ಈ ಪ್ರಪಂಚದಲ್ಲಿಲ್ಲ. ಕಾಡುವ ದೆವ್ವಗಳೇ ನಮ್ಮ ನಡುವೆ ಇದ್ದು ತೊಂದರೆ ಕೊಡುತ್ತಿವೆ. ಪಂಚಾಂಗಕ್ಕೆ ಬೆಲೆ ಕೊಡುವ ಬದಲು ಪಂಚೇಂದ್ರಿಯಗಳಿಗೆ ಬೆಲೆಕೊಡಬೇಕಿದೆ. ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಬುದ್ಧಿವಂತಿಕೆ ಹಾಗೂ ಪ್ರಜ್ಞಾವಂತಿಕೆಯನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಂದಿನ ಮಕ್ಕಳೆ ಇಂದಿನ ಪ್ರಜೆಗಳು. ಆ ಮಕ್ಕಳಲ್ಲಿ ವೈಜ್ಞಾನಿಕತೆ- ವೈಚಾರಿಕತೆ ಹೆಚ್ಚು ಹೆಚ್ಚು ಬೆಳೆಯುವಂತಾಗಲಿ. ಪಠ್ಯ ಪುಸ್ತಕಕ್ಕಿಂತ ಬದುಕಿನ ಪುಸ್ತಕಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಕೆಲಸಕ್ಕೆ ಬಾರದ ವ್ಯಕ್ತಿ, ವಸ್ತುಗಳು,ಅಪರಿಚಿತ ವ್ಯಕ್ತಿಗಳಿಂದ ಮಕ್ಕಳು ಸದಾ ಎಚ್ಚರಿಕೆಯಿಂದಿರಬೇಕು.
ಸಾಮಾಜಿಕ ಜಾಲ ತಾಣಗಳಿಗೆ ಹೆಚ್ಚು ದಾಸರಾಗಬಾರದು. ಆ ನಿಟ್ಟಿನಲ್ಲಿ ರಿಜ್ವಾನ್ ಬಾಷ ರವರು ಶಾಲೆಯ ಮಕ್ಕಳಿಗೆ ನಮ್ಮಿಂದ ಪ್ರಾಪಂಚಿಕ ಅರಿವನ್ನು ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂಸಿ.ಅಧ್ಯಕ್ಷೆ ಅನುಸೂಯಮ್ಮ, ಸದಸ್ಯರಾದ ರಾಮಲಕ್ಷ್ಮಯ್ಯ, ಲಕ್ಷ್ಮೀನಾರಾಯಣ. ಮುಖಂಡರಾದ ದಿವಾಕರ್, ಶ್ರೀಕಾಂತ್, ವಿನಯ್ ದುಡ್ಡನಹಳ್ಳಿ, ನಿವೃತ್ತ ಶಿಕ್ಷಕರಾದ ಕುಂಭಿನರಸಯ್ಯ, ಶಿಕ್ಷಣ ಸಂಯೋಜಕರಾದ ಗಂಗಾಧರ್,ಗಂಗಮ್ಮ,ಅನುಸೂಯಾ ದೇವಿ, ಸಿ.ಆರ್.ಪಿ.ಗಳಾದ ಮುತ್ತರಾಜು, ನಾಗೇಶ್,ಶಿಕ್ಷಕರಾದ ಅಶ್ವತ್ಥನಾರಾಯಣ,ಸುಜಾತ, ಅಶೋಕ್ ಪೂಜಾರ್, ಚಿಕ್ಕಪ್ಪಯ್ಯ, ಎಲ್.ಕೃಷ್ಣಪ್ಪ. ರಾಜಶೇಖರಯ್ಯ.ಟಿ. ಮಂಜುಳ ಯು.ಪ್ರಾಥಮಿಕ ಶಾಲಾ ಶಿಕ್ಷಕರಾದ ಚಿಕ್ಕರಂಗಯ್ಯ ,ಹನುಮೇಶ್, ಲೇಪಾಕ್ಷಿ, ರವಿ ಮಲ್ಲೇಶ್ ಪ್ರೌಢಶಾಲಾ ಸಿಬ್ಬಂದಿಗಳಾದ ಸತೀಶ್, ವಿನೋದಮ್ಮ, ಅಡುಗೆ ಸಿಬ್ಬಂದಿ ಗೌರಮ್ಮ, ಅಶ್ವತ್ಥಮ್ಮ, ಪುಟ್ಟಮ್ಮ, ಈರಮ್ಮ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಪೋಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.