Advertisement

Sirsi: ಯಕ್ಷಗಾನದ ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ಟ ಗೆ ಚಂದುಬಾಬು ಪ್ರಶಸ್ತಿ

03:23 PM Sep 29, 2024 | Team Udayavani |

ಶಿರಸಿ: ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ನಿಂದ ಹಿರಿಯ ತಾಳಮದ್ದಲೆ ಅರ್ಥಧಾರಿ ದಿ.ಚಂದುಬಾಬು ಅವರ ನೆನಪಿನಲ್ಲಿ ನೀಡಲಾಗುವ ಚಂದುಬಾಬು ಪ್ರಶಸ್ತಿಯನ್ನು ಯಕ್ಷಗಾನದ ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ಟ ಅವರಿಗೆ ನೀಡಲು ತೀರ್ಮಾನಿಸಲಾಗಿದೆ.

Advertisement

ಟ್ರಸ್ಟ್ ಕೋಶಾಧ್ಯಕ್ಷ ಚಂದು ಸೀತಾರಾಮ ಅವರು ಪ್ರಕಟಿಸಿ ಅಕ್ಟೋಬರ್ 12 ರಿಂದ 21 ರ ತನಕ ನಗರದ ಟಿಎಂಎಸ್ ಸಭಾಂಗಣದಲ್ಲಿ ಪ್ರತಿ ದಿನ ಸಂಜೆ 4 ರಿಂದ ನಡೆಯುವ 10ನೇ ವರ್ಷದ ತಾಳಮದ್ದಲೆ ಸಂದರ್ಭದಲ್ಲಿ ಅ.20ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಮಾರಂಭದಲ್ಲಿ ಸ್ವರ್ಣವಲ್ಲೀ ಶ್ರೀ, ಮಾನವ ಹಕ್ಕು ಆಯೋಗದ ಅಧ್ಯಕ್ಷ‌ ಟಿ. ಶ್ಯಾಂ ಭಟ್ ಭಾಗವಹಿಸಲಿದ್ದು, ಅಭಿನಂದನಾ ನುಡಿಯನ್ನು ವಾಸುದೇವ ರಂಗಾ ಭಟ್ಟ ಅವರು ಆಡಲಿದ್ದಾರೆ.

ಕಳೆದ 4 ದಶಕಗಳಿಂದ ಯಕ್ಷಗಾನ ಭಾಗವತರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಈಚೆಗಷ್ಟೇ ಯಕ್ಷಗಾನ ಅಕಾಡೆಮಿಯಿಂದ ಗಾನ ಸಂಹಿತೆ ಇವರ ಗ್ರಂಥಕ್ಕೆ ಅತ್ಯುತ್ತಮ ಗ್ರಂಥ ಪುರಸ್ಕಾರಕ್ಕೆ ಆಯ್ಕೆ ಆಗಿದೆ ಎಂಬುದೂ ಉಲ್ಲೇಖನೀಯ.

ಈ ವೇಳೆ ಪ್ರಮುಖರಾದ ಬಾಲಚಂದ್ರ ಹೆಗಡೆ, ಅಶೋಕ ಹಾಸ್ಯಗಾರ, ಶ್ರೀಕಾಂತ ಭಟ್ಟ, ಇಂದಿರಾ ಹೆಗಡೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next