Advertisement

ಮಕ್ಕಳ ಪ್ರತಿಭೆ ಗುರುತಿಸಿ: ಪನ್ನಗ

12:47 PM Nov 18, 2017 | Team Udayavani |

ಹುಣಸೂರು: ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಹೊರಹಾಕುವ ಕೆಲಸವನ್ನು ಪೋಷಕರು ಮತ್ತು ಶಿಕ್ಷಕರು ಮಾಡಿದಾಗ ಮಕ್ಕಳು ನಾಳೆಯ ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ಔಟ್‌ ರೀಚ್‌ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಸಂಯೋಜಕ ಪನ್ನಗ ತಿಳಿಸಿದರು.

Advertisement

ತಾಲೂಕಿನ ಕಣಗಾಲು ಗ್ರಾಮದಲ್ಲಿ ಔಟ್‌ ರೀಚ್‌ ಗ್ರಾಮಾಭಿವೃದ್ಧಿ ಸಂಸ್ಥೆ, ಐಟಿಸಿ ಕಂಪನಿ ಹಾಗೂ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಂದು ಮಕ್ಕಳಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆ  ಹೊಳೆಯುವಂತೆ ಮಾಡಲು ಪೋಷಕರು-ಶಿಕ್ಷಕರು ಪಣ ತೊಡಬೇಕೆಂದರು. 

ಔಟ್‌ ರೀಚ್‌ ಗ್ರಾಮಾಭಿವೃದ್ಧಿ ಸಂಸ್ಥೆಯ ಟಿ.ಉಮೇಶ, ಶಾಲಾ ಮಕ್ಕಳಲ್ಲಿ ಬಯಲು ಶೌಚಾಲಯಕ್ಕೆ ಹೋಗುವುದರಿಂದ ಬರುವ ಮಾರಕ ರೋಗಗಳ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸ್ವತ್ಛ ಭಾರತ್‌ ಮಿಷನ್‌ ಬಗ್ಗೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಜಯಗಳಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ನಂತರ ಶಾಲೆಯ 150 ಮಕ್ಕಳು ಮತ್ತು ಅಂಗನವಾಡಿ 45 ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್‌ ವಿತರಣೆ ಮಾಡಲಾಯಿತು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಗುಣಶೀಲಾ ನಾಯಕ, ಮುಖ್ಯ ಶಿಕ್ಷಕರಾದ ಡಿ.ಕೆ.ಸ್ವಾಮಿ, ಸಹ ಶಿಕ್ಷಕರಾದ ಕುಬೇರ್‌, ಮಹೇಶ, ಶಿವಲಿಂಗು, ಸಮೀನ, ಮೋಹನ್‌, ತ್ಯಾಗರಾಜ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಸ್ವಾಮಿ, ಕೃಷಿ ಇಲಾಖೆ ತಾಂತ್ರಿಕ ಉತ್ತೇಜಕ ಕೆ.ಪಿ.ರಾವೇಂದ್ರ, ವೆಂಕಟೇಶ್‌, ಆರೋಗ್ಯ ಇಲಾಖೆ ಕಾಡಶೆಟ್ಟಿ ಸೇರಿದಂತೆ ಶಾಲೆಯ 150 ಮಕ್ಕಳು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next