Advertisement

ನೌಕರರ ಭವನಕ್ಕೆ ಜಮೀನು ಗುರುತಿಸಿ

01:21 PM Jan 16, 2021 | Team Udayavani |

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಮುದಾಯ ಭವನ, ಆಟದ ಮೈದಾನ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಜಮೀನು ಮಂಜೂರು ಮಾಡುವಂತೆ ಕೋರಿದ ನೌಕರರ ಸಂಘದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಕೂಡಲೇ ಜಮೀನು ಗುರುತಿಸು ವಂತೆ ತಹಶೀಲ್ದಾರ್‌ ಅವರಿಗೆ ಸೂಚಿಸಿದರು. ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಜಿ.ಸುರೇಶ್‌ಬಾಬು ಮತ್ತಿತರ ರಿದ್ದ ತಂಡವನ್ನು ಅಭಿನಂದಿಸಿದ ಅವರು, ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುವಂತೆ ಕೋರಿದರು.

Advertisement

ಜಮೀನು ಗುರುತಿಸಿ: ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮನವಿ ಮಾಡಿ, ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ನೌಕರರಿದ್ದು, ಒಂದು ಉತ್ತಮವಾದ ಭವನ ಇಲ್ಲವಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಮೈದಾನವಿಲ್ಲ ಎಂದು ತಿಳಿಸಿ ನಗರದ ಸುತ್ತ ಎಲ್ಲಾದರು 5 ಎಕರೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಡೀಸಿಯವರು, ಕೂಡಲೇ ತಹಶೀಲ್ದಾರ್‌ ಅವ ರಿಗೆ ಸೂಚನೆ ನೀಡಿ ಜಮೀನು ಗುರುತಿಸಿ ಕೊಡುವಂತೆ ಸೂಚಿಸಿದರು. ರಾಜ್ಯ ನೌಕರರ ಸಂಘದ ಕೋರಿಕೆಯಂತೆ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಜಮೀನು ಗುರುತಿಸಿ ಭೂ ಮಂಜೂರಾತಿ ನಿಯಮಗಳಂತೆ ಕಡತ ತಯಾರಿಸಿ ವಿಭಾಗಾಧಿ ಕಾರಿಗಳಿಗೆ ಸಲ್ಲಿಸುವಂತೆ ಸೂಚನೆ ನೀಡಿದರು.

ಅಲ್ಲೇ ಪರಿಹಾರ: ಜಿಲ್ಲಾಧಿಕಾರಿಗಳಿಗೆ ಧನ್ಯ ವಾದ ತಿಳಿಸಿದ ಸುರೇಶ್‌ಬಾಬು, ಅದೇ ರೀತಿ ಜಿಲ್ಲಾ ಮತ್ತು ತಾಲೂಕುಗಳಲ್ಲಿ ನೌಕರರ ಸಮಸ್ಯೆ ಪರಿಹಾರಕ್ಕೆ ಜಂಟಿ ಸಮಾಲೋಚನಾ ಸಮಿತಿ ರಚನೆಗೆ ಒತ್ತಡ ಹಾಕುವುದಾಗಿ ತಿಳಿಸಿ ದರು. ಈ ಸಮಿತಿಯಲ್ಲಿ ಡಿಸಿ, ಎಸ್ಪಿ, ಜಿಪಂ ಸಿಇಒ ಮತ್ತಿತರರಿದ್ದು, ನೌಕರರ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಸಿಗುವಂತೆ ಮಾಡುವುದಾಗಿ ನುಡಿದರು.

ಇದನ್ನೂ ಓದಿ:ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ರಸ್ತೆ ಸರಿಪಡಿಸಿ

ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ನೌಕರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಯಿತು. ಈ ಸಂದರ್ಭದಲ್ಲಿ ನೌಕರರ ಸಂಘದ ಪದಾ ಧಿಕಾರಿಗಳಾದ ಕೆ.ಎನ್‌.ಮಂಜುನಾಥ್‌, ಕೆ.ಬಿ. ಅಶೋಕ್‌, ರವಿಚಂದ್ರ, ಎಸ್‌.ಚೌಡಪ್ಪ, ಖಜಾಂಚಿ ವಿಜಯ್‌, ಗೌತಮ್‌, ನಂದೀಶ್‌, ರತ್ನಪ್ಪ, ವಿಜಯ್‌, ಕೋರ್ಟ್‌ ಮುನಿಯಪ್ಪ, ಚಂದ್ರಕಲಾ, ಶ್ರೀರಾಮ್‌, ಅನಿಲ್‌ಕುಮಾರ್‌, ರವಿ, ಕೆಜಿಐಡಿ ಮುರಳಿ, ಹರೀಶ್‌ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next