Advertisement

ಅಪಘಾತ ವಲಯ ಗುರುತಿಸಿ-ಸರಿಪಡಿಸಿ

03:23 PM Aug 08, 2020 | Suhan S |

ಬೀದರ: ಜಿಲ್ಲೆಯಲ್ಲಿನ ಅಪಘಾತ ವಲಯಗಳನ್ನು ಗುರುತಿಸಲು ಮತ್ತು ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷ ರಾಮಚಂದ್ರನ್‌ ಆರ್‌. ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ತಾಲೂಕುವಾರು, ರಸ್ತೆವಾರು, ಶಾಲಾ ವಲಯಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಅಸುರಕ್ಷಿತ ಸ್ಥಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಬೇಕು. ಅವಶ್ಯಕತೆ ಇರುವ ಕಡೆಗಳಲ್ಲಿ ಮಾತ್ರ ರಸ್ತೆ ತಡೆಗಳನ್ನು ಹಾಕಬೇಕು. ಬಹುಮುಖ್ಯವಾಗಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲು ಒತ್ತು ಕೊಡಬೇಕು ಎಂದು ಲೋಕೋಪಯೋಗಿ, ಪೊಲೀಸ್‌ ಮತ್ತು ಆರ್‌ಟಿಒ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗಾಗಿ ಅವಶ್ಯಕ ಮೂಲಕ ಸೌಕರ್ಯ ಒದಗಿಸಿ ಚಿಕಿತ್ಸೆ ಗುಣಮಟ್ಟ ವೃದ್ಧಿಪಡಿಸಲು ಒತ್ತು ಕೊಡಬೇಕು ಎಂದು ಡಿಎಚ್‌ಒಗೆ ಸೂಚಿಸಿದ ಡಿಸಿ, ಕನಿಷ್ಟ 2 ತಿಂಗಳಿಗೊಮ್ಮೆ ಸಭೆ ನಡೆಸಲು ಹಾಗೂ ಅಪಘಾತಗಳು, ಅಪಘಾತಗಳಿಗೆ ಕಾರಣಗಳು ಮತ್ತು ಅದಕ್ಕೆ ಸಂಬಂಧಿಸಿದ ಪರಿಹಾರಗಳ ಬಗ್ಗೆ ಸರಿಯಾದ ರೀತಿಯಲ್ಲಿ ಕ್ರಮ ಮತ್ತು ಪರಿಶೀಲನೆ ನಡೆಸಲು ಒತ್ತು ಕೊಡಬೇಕು ಎಂದು ತಿಳಿಸಿದರು.

ನಗರದ ಬೇರೆ ಬೇರೆ ಕಚೇರಿಗಳ ರಸ್ತೆ ಬದಿ ಜಾಗ ಇರುವ ಕಡೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ಸಸಿ ನೆಡಲು ಅರಣ್ಯ ಇಲಾಖೆಯ ಅಧಿಕಾರಿಗಳ ಜತೆಗೆ ಸೇರಿ ಕ್ರಮ ವಹಿಸಬೇಕು. ಆಟೋ, ರಿಕ್ಷಾಗಳು ಮತ್ತು ಶಾಲಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಅಪಾಯಕಾರಿ ರೀತಿಯಲ್ಲಿ ಸಾಗಿಸುವುದನ್ನು ನಿಲ್ಲಿಸಲು ತಾವುಗಳು ಈಗಿನಿಂದಲೇ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಆರ್‌ಟಿಒ ಅಧಿಕಾರಿಗಳಿಗೆ ತಿಳಿಸಿದರು. ಎಎಸ್‌ಪಿ ಡಾ.ಗೋಪಾಲ್‌ ಬ್ಯಾಕೋಡ್‌, ಸಮಿತಿಯ ಸದಸ್ಯರಾದ ಅಬ್ದುಲ್‌ ಖದೀರ್‌, ಅಶೋಕಕುಮಾರ ಕರಂಜಿ, ಡಿಯುಡಿಸಿ ಪಿಡಿ ಶರಣಬಸಪ್ಪ ಕೋಟಪ್ಪಗೋಳ, ಪೌರಾಯುಕ್ತ ಬಸಪ್ಪ ಬಿ. ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next